Yala kunni Movie review “ಯಲಾ ಕುನ್ನಿ” ಚಿತ್ರ ವಿಮರ್ಶೆ ನಟ ಭಯಂಕರನ ಗತ ವೈಭವ ಮತ್ತೆ ತೆರೆಯ ಮೇಲೆ.

ಚಿತ್ರ: ಯಲಾ ಕುನ್ನಿ
ಚಿತ್ರ ವಿಮರ್ಶೆ
ರೇಟಿಂಗ್ – 3/5.

ನಿರ್ಮಾಣ – ಅನುಸೂಯ ಕೋಮಲ್ ಕುಮಾರ್, ಸಹನಾ ಮೂರ್ತಿ

ನಿರ್ದೇಶನ -N.R. ಪ್ರದೀಪ್

ಛಾಯಾಗ್ರಹಣ – ಹಾಲೇಶ್ ಭದ್ರಾವತಿ

ಸಂಗೀತ – ಧರ್ಮ ವಿಶ್

ಕಲಾವಿದರು – ಕೋಮಲ್ ಕುಮಾರ್, ಮಯೂರ್, ಪಟೇಲ್, ಜಯಸಿಂಹ ಮುಸುರಿ, ನಿಸರ್ಗ ಅಪ್ಪಣ್ಣ, ಸಾಧುಕೋಕಿಲ, ದತ್ತಣ್ಣ, ತಬಲನಾಣಿ, ಶಿವರಾಜ್ ಕೆ.ಆರ್.ಪೇಟೆ, ಸುಚೀಂದ್ರ ಪ್ರಸಾದ್, ರಾಜು ತಾಳಿಕೋಟೆ, ತಿಥಿ ತಮ್ಮಣ್ಣ, ಭಜರಂಗಿ ಪ್ರಸನ್ನ ಆಕರ್ಶ್ ವಜ್ರಮುನಿ ಮುಂತಾದವರು.

ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ರವರು ನಿರ್ಮಿಸಿರುವ ಹಾಗೂ  ಮೊದಲ ಬಾರಿಗೆ N R ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರ “ಯಲಾ ಕುನ್ನಿ”

ದಶಕಗಳ ಹಿಂದೆ ರಂಗಭೂಮಿ, ಬೆಳ್ಳಿತೆರೆಯನ್ನು ತಮ್ಮ ಅಭಿನಯದ ಮೂಲಕವೇ ಬೆಚ್ಚಿಬೀಳಿಸುತ್ತಿದ್ದ, ನಟ ಭಯಂಕರ ಎಂದೇ ಕರೆಸಿಕೊಳ್ಳುತ್ತಿದ್ದ ಮಹಾನ್ ಕಲಾವಿದ ವಜ್ರಮುನಿಯವರನ್ನು ಈ ಚಿತ್ರದಲ್ಲಿ ನೋಡಬಹುದು. ಡಾ,, ರಾಜಕುಮಾರ್ ಹಾಗೂ ವಜ್ರಮುನಿಯವರ ಸಂಗಮದಲ್ಲಿ ಮೂಡಿ ಬಂದಿದ್ದ
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ವಜ್ರಮುನಿಯವರು ಹೇಳುವ  ಜನಪ್ರಿಯ ಡೈಲಾಗ್ “ಯಲಾ ಕುನ್ನಿ” ಈಗ ಚಿತ್ರದ ಶೀರ್ಷಿಕೆಯಾಗಿ ತೆರೆ ಕಂಡಿದೆ.

ನಟ ಕೋಮಲ್ ಕುಮಾರ್ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ‌.  ಕೋಮಲ್ ಅವರು ಕನ್ನಡದ ಹೆಸರಾಂತ ನಟ ವಜ್ರಮುನಿ ಅವರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಲುಕ್ ಗೆ ವಜ್ರಮುನಿ ಅಭಿಮಾನಿಗಳು ಖುಷಿಯಾಗಿದ್ದಾರೆ ಎನ್ನಬಹುದು.
ವಜ್ರಮುನಿಯವರ ಮೇಕಪ್ ಬಹಳ ಚನ್ನಾಗಿ ಮೂಡಿಬಂದಿದೆ.
ಕೋಮಲ್ ವಜ್ರಮುನಿಯವರ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಒಬ್ಬ ಹಿರಿಯ ಲೆಜೆಂಡರಿ ನಟನ ಅನುಕರಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆ ವಿಷಯದಲ್ಲಿ ನಿಜಕ್ಕೂ ಕೋಮಲ್ ಗೆದ್ದಿದ್ದಾರೆ.
ವಜ್ರಮುನಿ ಯವರ ಹಾವಭಾವ, ಮುಖದಲ್ಲಿನ ಚರ್ಯೆ ಥೇಟ್ ಅವರೇ ತೆರೆಯ ಮೇಲಿದ್ದಾರೆ ಎಂಬಂತೆ ಭಾಸವಾಗುತ್ತದೆ.

ಕುದುರೆ ಏರಿ ಬರುವ ವಜ್ರಮುನಿಯವರ ಫ್ಲಾಷ್ ಬ್ಯಾಕ್ ನಿರ್ದೇಶಕರು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಇದರಲ್ಲಿ ವಜ್ರಮುನಿಯವರ ಮೊಮ್ಮೊಗ ಆಕರ್ಷ್ ಮೊದಲಬಾರಿಗೆ ಬಣ್ಣಹಚ್ಚಿ ತೆರೆ ಮೇಲೆ ವಿಜ್ರಂಭಿಸಿದ್ದಾನೆ.

ಕಥಾ ಸಾರಂಶ – ಅದೊಂದು ಹಳ್ಳಿ , ಹಳ್ಳಿಯಲ್ಲಿ ಮಾಮೂಲಿಯಂತೆ ಜನ ಜೀವನ, ಅಲ್ಲೊಬ್ಬ ನಾಯಕ ಆತ ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ಅನಾಥ, ಆತನ ಹೆಸರು ಸತ್ಯ ಹರಿಶ್ಚಂದ್ರ (ಕೋಮಲ್) ಈತ ಚಿತ್ರದ ಪ್ರಾರಂಬದಲ್ಲಿ ಕೃಷ್ಣನ ವೇಷದಲ್ಲಿ ಭಗವದ್ಗೀತೆಯಸಾಲುಗಳನ್ನು ಹೇಳುತ್ತಾನೆ. ಆದರೆ ಅವನ ಸುತ್ತ ಮತ್ತಲಿನ ಜನರ, ರಾಜಕಾರಣಿಗಳ ಸಹವಾಸದಿಂದ ಬಾಯಿ ಬಿಟ್ಟರೆ ಸುಳ್ಳು ಹೇಳುವ ಕಾಯಕ ಇವನದ್ದು.
ದೇವರ ಗುಡಿಯಲ್ಲಿ ಮಾಯವಾಗುವ ದೇವಿಯ ವಿಗ್ರಹ, ಪವಾಡದಂತೆ ಮತ್ತೆ ರಾತ್ರಿ 12ಕ್ಕೆ ಉದ್ಭವವಾಗುತ್ತದೆ.

ನಂತರ ಕಥಾನಾಯಕ
ಸುಳ್ಳು ಹೇಳಿದ್ರೆ ಸಾಯುತ್ತಾನೆ ಎನ್ನುವ ದೇವರ ಶಾಪ, ಆತ ನಿಜ ಹೇಳೋದ್ರಿಂದ ಏನೆಲ್ಲಾ ಅವಗಡಗಳು ನಡೆಯುತ್ತವೆ ಎನ್ನುವುದನ್ನು ಹಾಸ್ಯದ ಮೂಲಕ ಹೇಳಲಾಗಿದೆ.

ಕಥಾನಾಯಕನ ಫ್ಲಾಷ್ ಬ್ಯಾಕ್ ನಲ್ಲಿ ತಂದೆ ಕೆಡಿ ನಾಗಪ್ಪ  (ವಜ್ರಮುನಿ) ಊರ ಜನರ ಸುಲಿಯುವಂತಹ, ಊರ ಹೆಣ್ಣು ಮಕ್ಕಳನ್ನು ಹಾಳು ಮಾಡುವಂತ ಪಾತ್ರದಲ್ಕಿ ಬಿಂಬಿಸಲಾಗಿದೆ. ನಂತರ ಕೊನೆಗೆ ಮಗನ ಎದುರೆ ಊರ ಜನ ಕಲ್ಲಿನಲ್ಲಿ ಹೊಡೆದು ಸಾಯಿಸುತ್ತಾರೆ.  ಮಗನ ಪಾತ್ರದಲ್ಲಿ ಕೋಮಲ್ ಬಾಲ್ಯದ ಪಾತ್ರದಲ್ಲಿ ವಜ್ರಮುನಿಯವರ ಮೊಮ್ಮಗ ಆಕರ್ಷ್ ನಟಿಸಿದ್ದಾನೆ.

ಸುಳ್ಳು ಹೇಳುವ ನಾಯಕನಿಗೆ ಸುಳ್ಳು ಹೇಳಿದ್ರೆ ನಿನ್ನ ಆಪ್ತರು ಹಾಗೂ ನೀನು ಸಾಯುತ್ತೀಯ ಎಂದು ಕನಸ್ಸಿನಲ್ಲಿ ದೇವಿ ಶಾಪ ನೀಡುತ್ತಾಳೆ. ಅಲ್ಲಿಂದ ನಿಜ ಹೇಳುವ ನಾಯಕನ ಪ್ರಸಂಗ ಹಾಸ್ಯದಿಂದ ಮತ್ತು ಒಂದಷ್ಟು ಸಂಕಟದಿಂದ ಕೂಡಿರುತ್ತದೆ.

ಚಿತ್ರದ ಕೊನೆಯಲ್ಲಿ ನಿಜ ಹೇಳಿದ್ರೆ ಜನ ಹೊಡಿತಾರೆ, ಸುಳ್ಳು ಹೇಳಿದ್ರೆ ದೇವರ ಶಾಪದಂತೆ ನಾಯಕ ಸಾಯುತ್ತಾನೆ. ಇಂತಹ  ಪರಿಸ್ಥಿತಿ ಮೂಡುತ್ತದೆ
ನಾಯಕ
ಹೇಗೆ ಈ ಸನ್ನಿವೇಶವನ್ನು ನಿಭಾಯಿಸುತ್ತಾನೆ ಎನ್ನುವುದು ಚಿತ್ರದ ಕೊನೆಯಲ್ಲಿ ಒಂದಿಷ್ಟು ಸಸ್ಪೆನ್ಸ್, ಹಾಸ್ಯದೊಂದಿಗೆ ಜನರಿಗೆ ಅದರಲ್ಲೂ ಮತದಾರರಿಗೆ ಬುದ್ದಿ ಹೇಳುವ ಪ್ರಯತ್ನ ನಿರ್ದೇಶಕರು ಮಾಡಿದ್ದಾರೆ.

ದೊಡ್ಡ ದೊಡ್ಡ ಕಲಾವಿದರ ದಂಡೆ ಈ ಚಿತ್ರದಲ್ಲಿದೆ. ದತ್ತಣ್ಣ , ಸಾಧು ಕೋಕಿಲ , ಮಿತ್ರ, ಸುಚೇಂದ್ರ ಪ್ರಸಾದ್ , ಶಿವರಾಜ್ ಕೆ ಆರ್ ಪೇಟೆ , ತಬಲಾ ನಾಣಿ, ರಾಜು ತಾಳಿ ಕೋಟೆ, ಸುಮನ್ ನಗರ ಕರ್,  ಮಾನಸಿ ಸುಧೀರ್(ಕಾಂತಾರ) , ಜಗ್ಗೇಶ್ ಅವರ ದ್ವಿತಿಯ ಪುತ್ರ ಯತಿರಾಜ್ ಜಗ್ಗೇಶ್, ಜಯಸಿಂಹ ಮುಸುರಿ , ರಘು ರಾಮನಕೊಪ್ಪ ,ಮಹಾಂತೇಶ್, ಬೌಬೌ ಜಯರಾಮ್ , ನಿರ್ದೇಶಕ ಸಹನ ಮೂರ್ತಿ , ಭಜರಂಗಿ ಪ್ರಸನ್ನ , ತಿಥಿ ತಮ್ಮಣ್ಣ, ಪ್ರದೀಪ್ ಪೂಜಾರಿ, ತೇಜಸ್, ಉಮೇಶ್ ಸಕ್ಕರೆ ನಾಡು ಮಂತಾದರವರ ತಾರಾಬಳಗವಿರುವ ಈ ಚಿತ್ರದ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ಗಿಚ್ಚಿಗಿಲಿಯ ಅಮೃತಾ ಬಣ್ಣ ಹಚ್ಚಿದ್ದಾರೆ.

ಸಂಪೂರ್ಣ ಹಳ್ಳಿ ಸೊಗಡಿನಲ್ಲಿ  ಮೂಡಿಬಂದಿರುವ ‘ಯಲಾಕುನ್ನಿ’ ಸಿನಿಮಾಕ್ಕೆ ರಥಾವರ ಖ್ಯಾತಿಯ ಧರ್ಮ ವಿಶ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಹಾಲೇಶ್ ಭದ್ರಾವತಿ ಅವರ ಛಾಯಾಗ್ರಹಣವಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ ನರಸಿಂಹ ಮಾಸ್ಟರ್ ಸಾಹಸ ಸಂಯೋಜನೆ ಮಾಡಿದ್ದಾರೆ.

“ಯಲಾಕುನ್ನಿ” ಚಿತ್ರಕ್ಕೆ ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹವಿದೆ.

ಬಹಳ ವರ್ಷಗಳ ನಂತರ ನಟ ಭಯಂಕರ ವಜ್ರಮುನಿಯವರನ್ನು ಮತ್ತೆ ತೆರೆಯ ಮೇಲೆ ಈ ಚಿತ್ರದ ಮೂಲಕ ನೋಡಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor