Tenant movie review “ಟೆನೆಂಟ್ ಚಿತ್ರ ವಿಮರ್ಶೆ” ಸಸ್ಪೆನ್ಸ್, ಥ್ರಿಲ್ಲರ್ ಮರ್ಡರ್ ಮಿಸ್ಟರಿಯ ರೊಮ್ಯಾಂಟಿಕ್ ಸ್ಟೋರಿ
ಚಿತ್ರ ವಿಮರ್ಶೆ
ಚಿತ್ರ: ಟೆನೆಂಟ್
ನಿರ್ಮಾಪಕರು – ಪೃತ್ವಿರಾಜ್ ಸಾಗರ್, ನಾಗರಾಜ್ T.
ಕಥೆ, ನಿರ್ದೇಶನ – ಶ್ರೀಧರ್ ಶಾಸ್ತ್ರಿ
ಛಾಯಾಗ್ರಹಣ – ಗಿರೀಶ್ ಹೋತೂರು
ಸಂಗೀತ – ಮನೋಹರ್ ಜೋಷಿ
ಸಂಕಲನ – ಉಜ್ವಲ್ ಚಂದ್ರ
ಕಲಾವಿದರು – ಧರ್ಮ ಕೀರ್ತಿರಾಜ್, ಸೋನುಗೌಡ, ತಿಲಕ್, ರಾಕೇಶ್ ಮಯ್ಯ ಉಗ್ರಂ ಮಂಜು ಮುಂತಾದವರು.
ರೇಟಿಂಗ್ – 3./5

ಕಥಾ ಸಾರಂಶ ….
ಅದೊಂದು ಪುಟ್ಟ ಸಂಸಾರ
ಕಮಲೇಶ್ (ರಾಕೇಶ್ ಮಯ್ಯ) ದಾಮಿನಿ ( ಸೋನು ಗೌಡ )
ಎರಡು ಮುದ್ದಾದ ಜೋಡಿ ಹೊಸ ಕನಸ್ಸುಗಳೊಂದಿಗೆ, ಹೊಸ ಹೆಜ್ಜೆ ಇಡುತ್ತಾ ಜೀವನ ಮಾಡುತ್ತಿರುವ ಸುಖೀ ಸಂಸಾರ ಮಿಡಲ್ ಕ್ಲಾಸ್ ಜೀವನ
ಹಿರಿಯರು ಬಿಟ್ಟು ಹೋದ ಒಂದು ಸಾದಾರಣ ಹಳೆಯ ಮನೆ ಮೇಲೊಂದು ಬಾಡಿಗೆಗೆ ನೀಡಿರುವ ಮನೆ. ಆ ಮನೆಗೆ ಬರುವವನು ಕುಡಿತ, ಮೋಜು, ಮಸ್ತಿಯ ಬ್ಯಾಚುಲರ್ ಟೆನೆಂಟ್ ಸುಂದರೇಶ್ (ಧರ್ಮ ಕೀರ್ತಿರಾಜ್)
ಕಥೆಗೆ ಇವನಿಂದಲೇ ಸಿಗುವುದು ಟ್ವಿಸ್ಟ್.
ರೊಮ್ಯಾಂಟಿಕ್ ಆಗಿ ಯಾರ ಅಡ್ಡಿ ಇಲ್ಲದೇ ಜೀವನ ಮಡುತ್ತಿದ್ದ ಕಮಲೇಶ್ (ರಾಕೇಶ್ ಮಯ್ಯ), ಧಾಮಿನಿ (ಸೋನು ಗೌಡ) ಜೀವನದಲ್ಲಿ ಒಂದಿಷ್ಟು ಸಾಲ, ಸಾಲದ ಜಂಜಡ ಬಿಟ್ಟರೇ ಮತ್ಯಾವ ಗೋಜಲು ಗಳಿಲ್ಲದ ಬದುಕಿಗೆ ವಕ್ಕರಿಸುವುದು ಕೋವಿಡ್ ಎಂಬ ಮಾರಿ, ಇದರಿಂದಾಗುವ ಲಾಕ್ ಡೌನ್ ನಿಂದ ಒಂದಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ. ಸಾಲದ ಸುಳಿಗೆ ಸಿಕ್ಕ ಕಮಲೇಶ್ ಅದರಿಂದ ಹೊರ ಬರಲಾರದೇ, ಗ್ರಾಹಕರಿಗೆ ಸರಿಯಾಗಿ ರೇಷನ್ ಒದಗಿಸಲಾಗದೇ ಇರುವ ಟೆನ್ಷನ್ ನಲ್ಲಿ ಟೆನೆಂಟ್ ನ ಹಾವಳಿ ಜಾಸ್ತಿಯಾಗುತ್ತದೆ, ಕುಡಿತ, ಕುಡಿತದ ಅಮಲಿನಲ್ಲಿ ತನ್ನ ಹೆಂಡತಿಯ ಮೇಲೆ ಅವನ ವಕ್ರ ದೃಷ್ಟಿ ಮನೆ ಮಾಲಿಕನ ಸುಂದರ ಹೆಂಡತಿಯ ಸೌಂದರ್ಯದ ಮೇಲೆ ಇವನ ಕಣ್ಣು. ಅವಳಿಗೆ ಗೊತ್ತಾಗದ ಹಾಗೆ ಅವಳ ಫೋಟೋ ಗಳನ್ನು ತೆರೆಯ ಮರೆಯಲ್ಲಿ ತೆಗೆದು ಅವಳಿಗೆ ಕಳಿಸಿ ತೊಂದರೆ ಕೊಡಲು ಶುರು ಮಾಡುತ್ತಾನೆ. ಅದು ಗಂಡನಿಗೆ ಗೊತ್ತಾಗಿ ಗಲಾಟೆಯಾಗುತ್ತದೆ. ಆಗ ಅಲ್ಲೊಂದು ಕೊಲೆಯಾಗುತ್ತದೆ. ಆ ಕೊಲೆ ಮಾಡಿದ್ದು ಯಾರು, ಕಲೆಯಾಗುವುದು ಯಾರದ್ದು ಆ ಕೊಲೆಯಲ್ಲಿ ಯಾರ ಶಡ್ಯಂತರವಿದೆ, ಕೊಲೆಗಾರ ಸಕ್ಕಿಬೀಳುತ್ತಾನಾ ಅನ್ನೋದೆ ಚಿತ್ರದ ಹೈಲೆಟ್ ಮತ್ತು ಸಸ್ಪೆನ್ಸ್ ಮತ್ತು ಕಥೆಯ ಮುಖ್ಯ ಜೀವಾಳ.

ಸೋನು ಗೌಡ ಬಹಳ ಮುದ್ದಾಗಿ ಕಾಣಿಸುತ್ತಾರೆ ಅಷ್ಟೇ ಅಲ್ಲದ ಚಿತ್ರ ದಲ್ಲಿ ಪಾತ್ರದ ತಿರುವುಗಳಿಗೆ ಅನುಗುಣವಾಗಿ ತಮ್ಮನ್ನು ತೊಡಗಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಧರ್ಮ ಕೀರ್ತಿರಾಜ್ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೆನೆಂಟ್ ಆಗಿ ವಿಭಿನ್ನವಾಗಿ ಅಭಿನಯಿಸಿದ್ದಾರೆ.
ತಿಲಕ್ ಪೋಲೀಸ್ ಇನ್ಸ್‌ಪೆಕ್ಟರ್ ಆಗಿ ನಡೆದ ಕೊಲೆಗೆ ಸಾಕ್ಷಿಯಾಗಿ ಕೊಲೆಗಾರನನ್ನು ಪತ್ತೆ ಮಾಡಲು ತಮ್ಮನ್ನೆ ಅರ್ಪಿಸಿಕೊಂಡಿದ್ದಾರೆ.
ಬಿಗ್ ಬಾಸ್ ನಲ್ಲಿ ಬಿಸಿ ಇರುವ ಉಗ್ರಂ ಮಂಜು ಈ ಚಿತ್ರದಲ್ಲಿ ಆಂಬುಲೆನ್ಸ್ ಡ್ರೈವರ್ ಆಗಿ ಅಭಿನಯಿಸಿದ್ದಾರೆ.

ರಾಕೇಶ್ ಮಯ್ಯ ಸೋನು ಗೌಡ ಗಂಡನಾಗಿ ಯಾರೋದೋ ಸುಖಕ್ಕೆ ಕೊಲೆಯಾಗಿ ಹೋಗುತ್ತಾರೆ ಈ ಕೊಲೆಯ ಸುತ್ತ ಸುತ್ತುವ ಕಥೆಯೇ ಟೆನೆಂಟ್ ಚಿತ್ರ.
ಇಂತಹ ಕಥೆಯ ಸೂಕ್ಷತೆಯನ್ನು ನಿರೂಪಿಸುವುದು ಕಷ್ಠದ ಕೆಲಸ ಆದರೂ ನಿರ್ದೇಶಕರು ಎಲ್ಲಿಯೂ ಲೋಪವಾಗದಂತೆ ಕಥೆಗೆ ನ್ಯಾಯ ಒದಗಿಸಿದ್ದಾರೆ.
ಇದು ನಿಜ ಬದುಕಿನಲ್ಲಿ ನಡೆವ ಸಾಕಷ್ಟು ಘಟನೆಗಳಿಗೆ ಸಾಕ್ಷಿಯಾಗಿದೆ. ಗಂಡ ಹೆಂಡತಿಯ ಸಂಭಂದಗಳ ಮದ್ಯೆ ಬರುವ ಆಗುಂತಕ.

ಕೋವಿಡ್ ಸಮಯದಲ್ಲಿ ನಡೆದ ಒಂದಷ್ಟು ಅವಗಡಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಒಂದೇ ಮನೆಯಲ್ಲಿ ನಡೆವ ಕಥೆಯಾದರೂ ಎಲ್ಲೂ ಲ್ಯಾಗ್ ಆಗದಂತೆ ನಿರ್ದೇಶಕರು ನಿರೂಪಿಸಿದ್ದಾರೆ.
ಅವನು ಮತ್ತು ಅವಳು ಅವರಿಬ್ಬರ ಮಧ್ಯೆ ಅವನ್ಯಾರು, ಇವನ್ಯಾರು ಎನ್ನುವ ಗೊಂದಲವನ್ನು ಚಿತ್ರದ ಕೊನೆಯವರೆಗೂ ನಿಗೂಡತೆಯನ್ನು ಕಾಯ್ದುಕೊಂಡು ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಚಿತ್ರದ ಕೊನೆಯ ದೃಶ್ಯ ನಿಜಕ್ಕೂ ಚನ್ನಾಗಿ ಮೂಡಿಬಂದಿದೆ.
ಸಸ್ಪೆನ್ಸ್, ಥ್ರಿಲ್ಲರ್ ಮರ್ಡರ್ ಮಿಸ್ಟರಿಯ ರೊಮ್ಯಾಂಟಿಕ್ ಸ್ಟೋರಿ ಇದಾಗಿದೆ.