Suryavamsha serial Coming on march 11th. ಮತ್ತೊಮ್ಮೆ ವಿಷ್ಣುವರ್ಧನ್ ರವರ ಸೂರ್ಯವಂಶದ ನೆನಪು ಕನ್ನಡಿಗರ ಮನದಲ್ಲಿ.
‘ಸೂರ್ಯವಂಶ’ ಧಾರಾವಾಹಿಯು ಉದಯ ಟಿ.ವಿಯಲ್ಲಿ ಮಾರ್ಚ್ 11ರಿಂದ ಸೋಮವಾರದಿಂದ ಶನಿವಾರ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
ಇತ್ತಚೆಗೆ ಧಾರಾವಾಹಿಯ ಕುರಿತು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅನಿರುದ್ಧ್ ಜತ್ಕರ್ ಎಸ್. ನಾರಾಯಣ್ ನಿರ್ದೇಶನದಲ್ಲಿ ನಾನು ‘ಸೂರ್ಯವಂಶ’ ಮಾಡಬೇಕಿತ್ತು. 25 ಕಂತುಗಳ ಚಿತ್ರೀಕರಣ ಸಹ ಆಗಿತ್ತು. ಆದರೆ, ಕಾರಣಾಂತರಗಳಿಂದ ಆ ಧಾರಾವಾಹಿ ನಿಂತು ಹೋಯಿತು. ಎಸ್. ನಾರಾಯಣ್ ಅವರ ಜೊತೆಗೆ ಕೆಲಸ ಮಾಡುವುದಕ್ಕೆ ಬಹಳ ಖುಷಿ ಇತ್ತು. ಅದು ಆಗಲಿಲ್ಲ ಅದರ ಬಗ್ಗೆ ಙಗೆ ಬೇಸರ ಇದೆ.


ಈಗ ಅದೇ ಹೆಸರಿನಲ್ಲಿ ಹೊಸ ಧಾರಾವಾಹಿ ಶುರುವಾಗಲಿದೆ ಕಥೆ, ಪಾತ್ರವರ್ಗ ಎಲ್ಲವೂ ಬದಲಾಗಿದೆ ಎಂದರು.
ಇದೇ ಸಮಯದಲ್ಲಿ, ಕಳೆದ ವರ್ಷ ‘ಜೊತೆಜೊತೆಯಲಿ’ ಧಾರಾವಾಹಿಗೆ ಸಂಬಂಧಿಸಿದಂತೆ ಅನಿರುದ್ಧ್ ಅವರನ್ನು ಬ್ಯಾನ್ ಮಾಡಬೇಕು ಎಂದು ಕಿರುತೆರೆಯ ಸಂಘದವರು ಧ್ವನಿ ಎತ್ತಿದ್ದರು ಈಗ ಈ ಧಾರವಾಹಿಯಲ್ಲಿ ಅನಿರುಧ್ ರವರು ನಠಿಸುತ್ತಿದ್ದಾರೆ ಅದರ ಬಗ್ಗೆ ಏನು ತಕರಾರು ಇಲ್ಲವೇ ಎಂಬ ಮಾಧ್ಯಮದವರ ಪ್ರೆಶ್ನೆಗೆ ಉತ್ತರಿಸಿದ ಅನಿರುಧ್ ಹೇಳಿದ್ದೇನೆಂದರೆ

ಅವರು, ‘ನನ್ನನ್ನು ದೂರ ಇಡಿ ಎಂದು ಚಾನಲ್ ಆಫೀಸಿಗೆ ಕರೆ ಮಾಡಿದ್ದರು. ಆದರೆ, ಉದಯ ಟಿವಿಯವರು ಬನ್ನಿ ಮಾತಾಡೋಣ ಎಂದು ಕರೆದರೂ, ಯಾರೂ ಈ ವಿಷಯವಾಗಿ ಅಲ್ಲಿಗೆ ಹೋಗಿ ಬಹಿರಂಗವಾಗಿ ಮಾತನಾಡಲಿಲ್ಲ. ಮುಂಚೆ ಎಸ್. ನಾರಾಯಣ್ ಅವರಿಗೂ ಕೆಲವರು ಕರೆ ಮಾಡಿ ನನ್ನನ್ನು ದೂರ ಇಡುವಂತೆ ಹೇಳಿದ್ದರಂತೆ. ಆದರೆ, ಎಸ್. ನಾರಾಯಣ್ ಒಪ್ಪಲಿಲ್ಲ.
ತನ್ವಿ ಮೀಡಿಯಾ ಸಂಸ್ಥೆಯ ಮುಖಾಂತರ ನಿರ್ಮಾಪಕ ಪದ್ಮನಾಭ್ ನಿರ್ಮಿಸುತ್ತಿದ್ದು ಈ ಧಾರಾವಾಹಿಯ ಸಂಚಿಕೆ ನಿರ್ದೇಶನ ಪ್ರಕಾಶ್ ಮುಚ್ಚಳಗುಡ್ಡ. ಮಾಡುತ್ತಿದ್ದಾರೆ.
ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಪದ್ಮನಾಬ್ ರವರು ಮೊದಲಬಾರುಗೆಧಾರವಾಹಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
‘ಸೂರ್ಯವಂಶ’ ಧಾರಾವಾಹಿಯಲ್ಲಿ ಅನಿರುದ್ಧ್, ಅಶ್ವಿನಿ, ಸುಂದರರಾಜ್, ವಿಕ್ರಂ ಉದಯಕುಮಾರ್, ರಾಮಸ್ವಾಮಿ, ರವಿ ಭಟ್, ಲೋಕೇಶ್ ಬಸವಟ್ಟಿ, ಸುಂದರಶ್ರೀ ಮುಂತಾದವರು ನಟಿಸುತ್ತಿದ್ದಾರೆ.