France Cricket League ಫ್ಯಾನ್ಸ್ ಕ್ರಿಕೆಟ್ ಲೀಗ್! ಭರತ್ ಎಸ್ ಎನ್ ಅವರ ನಮ್ ಟಾಕೀಸ್ ಸಂಸ್ಥೆ ಆಯೋಜನೆ ಜನವರಿ 25-26 ರಂದು.

ನಮ್ಮಲ್ಲಿ ಅತೀಹೆಚ್ಚು ಪ್ರಭಾವಶಾಲಿ ಎನಿಸಿರುವ ಎರಡು ಮಾಧ್ಯಮಗಳಾದ ಸಿನಿಮಾ ಹಾಗು ಕ್ರಿಕೆಟ್ ಜೊತೆಯಾಗಿ ನಮ್ಮ ಮುಂದೆ ಬರುವಂತಹ ಒಂದು ವಿಶೇಷ ವೇದಿಕೆ ಫ್ಯಾನ್ಸ್ ಕ್ರಿಕೆಟ್ ಲೀಗ್! ಭರತ್ ಎಸ್ ಎನ್ ಅವರ ನಮ್ ಟಾಕೀಸ್ ಸಂಸ್ಥೆ ಆಯೋಜಿಸವಂತಹ ಈ ಪ್ರತಿಷ್ಟಿತ ಕ್ರಿಕೆಟ್ ಪಂದ್ಯಾಟದಲ್ಲಿ ಕನ್ನಡ ಚಿತ್ರರಂಗದ ವಿವಿಧ ಸ್ಟಾರ್ ಕಲಾವಿದರ ಅಭಿಮಾನಿಗಳು ತಂಡಗಳಾಗಿ ಬಂದು ಟ್ರೋಫಿಗಾಗಿ ಸೆಣಸಾಡುತ್ತಾರೆ. ಯಶಸ್ವಿಯಾಗಿ ಹನ್ನೆರಡು ಸೀಸನ್ ಗಳನ್ನ ಪೂರೈಸಿಕೊಂಡು ಬಂದಿರುವ ಈ ಕ್ರಿಕೆಟ್ ಪಂದ್ಯಾಟ ಇದೇ ಜನವರಿ 25 ಹಾಗು 26ರಂದು ನಡೆಯಲಿದೆ.

ಈ ಪ್ರತಿಷ್ಟಿತ ಕ್ರೀಡಾಕೂಟದ ಟ್ರೋಫಿ ಹಾಗು ಜರ್ಸಿ ಲಾಂಚ್ ಕಾರ್ಯಕ್ರಮ ನಡೆಯಿತು. ಬಾಸ್ ಟಿವಿ ಕನ್ನಡ ಸ್ಟುಡಿಯೋದಲ್ಲಿ ನಡೆದ ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಚಂದನವನದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗು KKR ಮೀಡಿಯಾ ಸಂಸ್ಥೆಯ ಲಕ್ಷ್ಮೀಕಾಂತ್ ರೆಡ್ಡಿ ಅವರು ಆಗಮಿಸಿದ್ದರು. ಎಲ್ಲಾ ತಂಡದ ನಾಯಕರ ಹಾಜರಿಯಲ್ಲಿ ಈ ಪಂದ್ಯಾಟದ ಜರ್ಸಿ ಹಾಗು ಟ್ರೋಫಿಯನ್ನ ಅನಾವರಣ ಮಾಡಿದ್ದು ವಿಶೇಷ. ಈ ವೇಳೆ ಸಹಕರಿಸಿದಂತಹ ಬಾಸ್ ಟಿವಿ ಕನ್ನಡದ ಕಿರಣ್ ಹಾಗು ಅವರ ತಂಡದವರಿಗೆ ಆಯೋಜಕರು ಮನತುಂಬಿ ವಂದನೆಗಳನ್ನ ಅರ್ಪಿಸಲು ಇಚ್ಚಿಸುತ್ತಾರೆ. ಜೊತೆಗೆ ಆರಂಭದಿಂದಲೂ ನಮ್ಮ ಜೊತೆ ನಿಂತು ಪ್ರೋತ್ಸಾಹಿಸಿದ ಎಲ್ಲಾ ಪ್ರಾಯೋಜಕರಿಗೂ ನಮ್ಮ ಧನ್ಯವಾದಗಳನ್ನ ತಿಳಿಸುತ್ತೇವೆ.

ಪ್ರತೀ ವರ್ಷ ನಮ್ಮ ಚಂದನವನದ ಒಂದೊಂದು ಗಣ್ಯರ ಸ್ಮರಣೆಯಲ್ಲಿ ನಡೆಯುವಂತಹ ಈ ಫ್ಯಾನ್ಸ್ ಕ್ರಿಕೆಟ್ ಲೀಗ್ ನ ಹನ್ನೆರಡನೇ ಆವೃತ್ತಿ ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಧೀಮಂತ ಖಳನಟ ಸುಧೀರ್ ಅವರ ಸ್ಮರಣೆಯಲ್ಲಿ ನಡೆಯುತ್ತಿದೆ. ಚಂದನವನದ ಹಲವು ಗಣ್ಯರನ್ನ ಪಂದ್ಯಾಟಕ್ಕೆ ಆಹ್ವಾನಿಸಲಾಗಿದ್ದು, ಇದೇ ಜನವರಿ 25 ಹಾಗು 26ರಂದು ಆರ್ ಆರ್ ನಗರದ ರಾಮ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಪಂದ್ಯಾಟ ಜರುಗಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor