“Sri Dharmasthala Dharmadhikari” song created by Manju Kavi “ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ” ಗೀತೆ ರಚನೆ ಮಂಜು ಕವಿಯವರಿಂದ.
ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ
ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳ ಕುರಿತಾಗಿ ಭಕ್ತಿ ಪ್ರಧಾನವಾದ ಗೀತೆಯನ್ನು ರಾಜೇಂದ್ರ ದಾಸ್ ರವರ ಸಹಕಾರದೊಂದಿಗೆ ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಸಾಹಿತ್ಯ ರಚಿಸಿ ರಾಗ ಸಂಯೋಜನೆ ಮಾಡಿದ ಮಂಜು ಕವಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಮ್ಮುಖದಲ್ಲಿ ಗೀತೆಯನ್ನು ಎಂ ಕೆ ಆಡಿಯೋದಲ್ಲಿ ಬಿಡುಗಡೆ ಮಾಡಲಾಯಿತು.

ಈ ಗೀತೆಯನ್ನು
ಕೇಳಿದ ಧರ್ಮಸ್ಥಳದ ಧರ್ಮ ಅಧಿಕಾರಿಗಳಾದ ಡಾಕ್ಟರ್ ವೀರೇಂದ್ರ ಹೆಗಡೆಯವರು ಭಾವನಾತ್ಮಕವಾಗಿ ಮಂಜು ಕವಿಯನ್ನು ಆಶೀರ್ವದಿಸಿ ಸಾಹಿತ್ಯ ಸಂಗೀತ ಅರ್ಥಪೂರ್ಣವಾಗಿದ್ದಾಗ ಮಾತ್ರ ಈ ತರಹದ ಗೀತೆ ಎಲ್ಲರ ಗಮನ ಸೆಳೆಯಲು ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾಗೆ ಇದೇ ತರಹ ಭಕ್ತಿ ಪ್ರಧಾನವಾದ ಸಾಹಿತ್ಯ ಸಂಗೀತ ನಿಮ್ಮಿಂದ ಹೊರಹೊಮ್ಮಲಿ ನಿಮಗೆ ಯಶಸ್ಸು ಸಿಗಲಿ ಎಂದು ಶ್ರೀಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಧರ್ಮಸ್ಥಳದ ವೀರೇಂದ್ರ ಹೆಗಡೆಯವರು ಮಂಜು ಕವಿಯನ್ನು ಆಶೀರ್ವದಿಸಿದರು
