Karnataka Sangha celebrate vasanthotsava 2024 in Qatar. ಕರ್ನಾಟಕ ಸಂಘ ಕತಾರ್ ವತಿಯಿಂದ 2024ನೇ ಸಾಲಿನ ವಸಂತೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು

ದೋಹ ಕತಾರ್
ಇತ್ತೀಚೆಗೆ ಕತಾರಿನಲ್ಲಿರುವ ವಕ್ರದ ದೆಹಲಿ ಸಾರ್ವಜನಿಕ ಶಾಲೆಯ ಭವ್ಯ ಸಭಾಂಗಣದಲ್ಲಿ ಕರ್ನಾಟಕ ಸಂಘ ಕತಾರ್ ವತಿಯಿಂದ 2024ನೇ ಸಾಲಿನ ವಸಂತೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮೈಸೂರು ಮೂಲದ ಶ್ರೀ ರಘು ದೀಕ್ಷಿತ್ ಅವರ ತಂಡದವರಿಂದ ಅದ್ಭುತವಾದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪೂರ್ಣವಾಗಿ ತುಂಬಿದ ಸಭಾಂಗಣದ ಕನ್ನಡಿಗರು ಹಾಡಿ, ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮದ ಅಂಗವಾಗಿ ಕೆಲವು ಪ್ರಮುಖ ವ್ಯಕ್ತಿತ್ವಗಳನ್ನು ಸಾರ್ವಜನಿಕ ಸಭೆಯ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದಂತಹ ಶ್ರೀ ಅರವಿಂದ ಪಾಟೀಲ್ ಅವರಿಗೆ, ಭಾರತದಿಂದ ಆಗಮಿಸಿದ್ದ ಶ್ರೀ ರಘು ದೀಕ್ಷಿತ್ ಹಾಗೂ ಅವರ ತಂಡದ ಸದಸ್ಯರಿಗೆ, ಸುಪ್ರಸಿದ್ಧ ಹಾಸ್ಯ ಕಲಾವಿದರಾದ ಶ್ರೀ ರಾಘವೇಂದ್ರ ಆಚಾರ್ ಅವರಿಗೆ ಹಾಗೂ ಕತಾರಿನಲ್ಲಿರುವ ಭಾರತೀಯ ದೂತಾವಾಸದ ರಾಯಭಾರಿಗಳಾದ ಶ್ರೀ ವಿಪುಲ್ ಅವರಿಗೆ ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರಸ್ತುತ ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಈ ಸುಸಂದರ್ಭದಲ್ಲಿ ಗೌರವದಿಂದ ಸನ್ಮಾನಿಸಲಾಯಿತು.
ಶ್ರೀ ಸುಬ್ರಮಣ್ಯ ಹೆಬ್ಬಾಗೆಲು
ಉಪಾಧ್ಯಕ್ಷರು, ಭಾರತೀಯ ಸಾಂಸ್ಕೃತಿಕ ಕೇಂದ್ರ (ಐ.ಸಿ.ಸಿ)
ದೋಹಾ, ಕತಾರ್

ಕನ್ನಡ ಹಾಗೂ ಕನ್ನಡೇತರ ಭಾರತೀಯರಿಗೆ ತಾವು ಮಾಡುತ್ತಿರುವ ಸಮಾಜ ಸೇವೆಯನ್ನು ಶ್ಲಾಘಿಸಿ ಹಾಗೂ ಕರ್ನಾಟಕ ಸಂಘ ಕತಾರ್ ವತಿಯಿಂದ ಆಯೋಜಿಸುತ್ತಿರುವ ಪ್ರತಿ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ತಮಗೆ ಕರ್ನಾಟಕ ಸಂಘ ಕತಾರ್ ನ ಆಡಳಿತ ಮಂಡಳಿಯ ಪರವಾಗಿ ಅನಂತಾನಂತ ಧನ್ಯವಾದಗಳು. ತಮ್ಮ ಈ ಅವಿರತ ಸೇವೆ ಹೀಗೆ ಮುಂದುವರೆಯಲಿ ಎಂದು ನಮ್ಮ ಸಂಘವು ಆಶಿಸುತ್ತದೆ.
ಶ್ರೀ ಮಹೇಶ್ ಗೌಡ
ಅಧ್ಯಕ್ಷರು ಮತ್ತು ನಿರ್ವಹಣಾ ಸಮಿತಿ, ಕರ್ನಾಟಕ ಸಂಘ ಕತಾರ್
ಏಪ್ರಿಲ್ 23- 2024 ದೋಹಾ, ಕತಾರ್


ಸೋಲರಿಯದ ಸಮಾಜಸೇವಕ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು
ಕರ್ನಾಟಕದ ಬೈಂದೂರು ಮೂಲದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐ ಸಿ ಸಿ) ಪ್ರಸ್ತುತ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಶ್ರೀಯುತರ ಹೆಸರು ಕತಾರಿ ನ ಭಾರತೀಯ ಸಮುದಾಯಕ್ಕೆ ಚಿರಪರಿಚಿತ ಪ್ರತ್ಯೇಕವಾಗಿ ಪರಿಚಯ ನೀಡುವ ಅವಶ್ಯಕತೆ ಇಲ್ಲದಿದ್ದರೂ ಕಾರ್ಯಕ್ರಮದ ಸಂಪ್ರದಾಯದ ಸಲುವಾಗಿ ಶ್ರೀಯುತರ ಕಿರುಪರಿಚಯ ನೀಡಲಾಗುತ್ತಿದೆ.
ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಅವರ ಕುಟುಂಬ ಶ್ರೀಮತಿ ವನಿತಾ ಸುಬ್ರಹ್ಮಣ್ಯ, ಮಕ್ಕಳು ಪುಟಾಣಿ ಪೃಥ್ವಿಕ್ ಹಾಗೂ ಪುಟಾಣಿ ರಮ್ಯ. ಶ್ರೀಯುತರು ಗಲ್ಫರ್ ಮಿಸ್ ನಾದ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಂದುವರೆ ದಶಕದಿಂದ ಕತಾರಿನಲ್ಲಿ ಕಾರ್ಯನಿಮಿತ್ತ ನೆಲೆಸಿರುವ ಶ್ರೀ ಸುಬ್ರಮಣ್ಯ ಅವರು ಕಳೆದ ಒಂದು ದಶಕದಿಂದ ತಮ್ಮನ್ನು ತಾವು ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಕರೋನಾ ಮಹಾಮಾರಿ ತಾಂಡವದ ಕಾಲದಲ್ಲಿ ಜನರಿಗೆ ಆಹಾರದ ಸಾಮಗ್ರಿ ಹಾಗೂ ಊಟದ ವ್ಯವಸ್ಥೆ, ಒಂದೇ ಭಾರತ್ ಅಡಿಯಲ್ಲಿ ನೂರಾರು ಭಾರತೀಯರನ್ನು ಮಾತೃಭೂಮಿಗೆ ಹಿಂತಿರುಗಲು ವಿಮಾನ ಸೇವೆ ಕಲ್ಪಿಸಿ ಕೊಡುವುದಕ್ಕೆ ಸಹಾಯ ಮಾಡಿದ್ದಾರೆ.


ಇವರ ಕಾಲದಲ್ಲಿ ರಕ್ತದಾನ ಶಿಬಿರ, ಪರಿಸರ ದಿನಾಚರಣೆಗೆ ಸಸಿ ನೆಡುವ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹಾಗೂ ಆಯೋಜಿಸುವುದಕ್ಕೆ ಕಾರಣಕರ್ತರಾಗಿರುವುದು ಇವರ ಬಹುಮುಖ್ಯ ಪ್ರತಿಭೆಯ ಕೆಲವು ತುಣುಕುಗಳು.
ಒಂದು ವಿಶೇಷ ಸೇವಾ ಗುಣವನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಿದೆ. ವಿವಿಧ ಕಾರಣಗಳಿಂದ ದೈವಾಧೀನರಾದ ಭಾರತೀಯರ ಪಾರ್ಥಿವ ಶರೀರವನ್ನು ಕತ್ತರಿನಿಂದ ಮಾತೃಭೂಮಿಗೆ ತ್ವರಿತ ಗತಿಯಲ್ಲಿ ತಲುಪಿಸುವುದರಲ್ಲಿ ಶ್ರೀಯುತರ ಕೊಡುಗೆ ಅಪಾರ. ಕಳೆದ ಆರು ವರ್ಷಗಳಲ್ಲಿ ನೂರಾರು ಇಂತಹ ವೈಕುಂಠ ಸೇವಾ ಕೈಂಕರ್ಯವನ್ನು ನೆರವೇರಿಸಿದ್ದಾರೆ.
ಕರ್ನಾಟಕ ಸಂಘ ಕತಾರ್, ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐ.ಸಿ.ಬಿ.ಎಫ್) ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ (ಐ.ಸಿ.ಸಿ) ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಭಾರತೀಯ ದೂತಾವಾಸದ ಅಧಿಕಾರಿಗಳು ಹಾಗೂ ಘನವೆತ್ತ ರಾಯಭಾರಿಗಳು ಇವರ ಸೇವೆಗೆ ಇವರನ್ನು ಮನಃ ಪೂರ್ವಕವಾಗಿ ಅಭಿನಂದಿಸಿದ್ದಾರೆ. ಘನವೆತ್ತ ರಾಯಭಾರಿಗಳಾದ ಶ್ರೀ ದೀಪಕ್ ಮಿತ್ತಲ್ ಅವರು ಹಾಗೂ ನಿಕಟ ಪೂರ್ವ ರಾಯಭಾರಿಗಳಾಗಿದ್ದ ಶ್ರೀ ಕುಮರನ್ ಅವರುಗಳು ಶ್ರೀ ಸುಬ್ರಮಣ್ಯ ಅವರ ಸೇವೆಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ. ಹಲವಾರು ಸ್ಥಳೀಯ ಸಂಘ ಸಂಸ್ಥೆಗಳಿಂದ ಇವರನ್ನು ಗೌರವಿಸಿ ಸನ್ಮಾನಿಸಲಾಗಿದೆ.
ಶ್ರೀ ಸುಬ್ರಹ್ಮಣ್ಯ ಅವರ ನಿಸ್ವಾರ್ಥ, ಪ್ರತಿಫಲ ಅಪೇಕ್ಷೆ ಇಲ್ಲದ, ಅವಿರತ, ಸಮಾಜ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ. ಇವರ ಪರ ಜನರ ಪ್ರೀತಿ, ವಿಶ್ವಾಸ, ಬೆಂಬಲ, ಸಹಕಾರ ಎಂದಿನಂತೆ ಮುಂದುವರೆಯಲಿ ಹಾಗೂ ದ್ವಿಗುಣಗೊಳ್ಳಲಿ ಎಂದು ಹಾರೈಸೋಣ. ಆ ಭಗವಂತ ಶ್ರೀ ಸುಬ್ರಮಣ್ಯ ಅವರಿಗೆ ಇನ್ನೂ ಹೆಚ್ಚು ಶಕ್ತಿ ನೀಡಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ಮುನ್ನಡೆಸಲಿ ಎಂದು ಪ್ರಾರ್ಥಿಸುತ್ತೇವೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor