Dasara festival start today in mysuru ನಾಡಹಬ್ಬ ಮೈಸೂರು ದಸರಾ ಇಂದಿನಿಂದ ಶುರು. ಈ ಬಾರಿ ಆನೆಯ ಮೇಲೆ ಜಗನ್ಮಾತೆಯ ಆಗಮನ.
ಇಂದಿನಿಂದ ನಾಡಹಬ್ಬ ದಸರಾ ಶುರುವಾಗಲಿದೆ. ಶಾರದೀಯ ನವರಾತ್ರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಜನರು ದುರ್ಗಾ ದೇವಿಯ 9 ವಿಭಿನ್ನ ರೂಪಗಳನ್ನು ಪೂಜಿಸುತ್ತಾರೆ. ಪ್ರತಿ ವರ್ಷ, ಶಾರದೀಯ ನವರಾತ್ರಿಯು ಆಶ್ವೀಜ ಮಾಸದ ಶುಕ್ಲ ಪಕ್ಷದ ಪ್ರತಿಪಾದ ದಿನದಿಂದ ಪ್ರಾರಂಭವಾಗುತ್ತದೆ. ಈ ವರ್ಷ ಶಾರದೀಯ ನವರಾತ್ರಿ ಹಬ್ಬವು ಅಕ್ಟೋಬರ್ 15 ರಿಂದ ಪ್ರಾರಂಭವಾಗಿ ಅಕ್ಟೋಬರ್ 24 ರಂದು ಕೊನೆಗೊಳ್ಳಲಿದೆ. ಪ್ರತೀ ವರ್ಷ ದುರ್ಗಾ ದೇವಿಯು ನವರಾತ್ರಿ ಸಮಯದಲ್ಲಿ ವಿಭಿನ್ನ ವಾಹನಗಳು ಮೂಲಕ ಭೂಮಿಗೆ ಆಗಮಿಸುತ್ತಾಳೆ.

ಈ ಬಾರಿ ದುರ್ಗಾ ದೇವಿಯು ಆನೆಯ ಮೇಲೆ ಕುಳಿತು ಸವಾರಿ ಮಾಡುತ್ತಾಳೆ. ತಾಯಿಯನ್ನು ಇಂದಿನಿಂದ ಒಂಭತ್ತು ದಿನಗಳ ರಾತ್ರಿ ಒಂಭತ್ತು ರೂಪಗಳಲ್ಲಿ ಪೂಜಿಸುವುದು ಪ್ರತೀತಿಯಿದೆ.

ಹತ್ತನೇ ದಿನ ದುಷ್ಟ ಸಂಹಾರದ ಸಂಭ್ರಮವೇ ವಿಜಯದಶಮಿ ವಿಶ್ವ ವಿಖ್ಯಾತಿಯಾಗಿರುವ ಮೈಸೂರು ದಸರಾ ಕಣ್ತುಂಭಿಕೊಳ್ಳಲು ಲಕ್ಷಾಂತರ ಜನ ಆಗಮಿಸುತ್ತಾರೆ.