ದಸರಿಘಟ್ಟದ ಶ್ರೀ ಚೌಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ. ಶ್ರೀ ಅರ್ಜುನ ಅವಧೂತ ಗುರೂಜಿಯವರ ನಿವಾಸದಲ್ಲಿ
*ಗುರುಗಳ ನಿವಾಸಕ್ಕೆ ಶ್ರೀ ಚೌಡೇಶ್ವರಿ ಅಮ್ಮ*
ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ದಸರಿ ಘಟ್ಟ ಚೌಡೇಶ್ವರಿ ಅಮ್ಮನವರು ಎರಡು ದಿನಗಳ ಕಾಲ ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಮಹಾರಾಜರ ನಿವಾಸದಲ್ಲಿ ವಿಜ್ರಂಭಣೆಯಿಂದ ನೆರವೇರಿದೆ.
ದಿನಾಂಕ 28-05-2023ರ ಭಾನುವಾರ ಸಂಜೆ 6 ಗಂಟೆಗೆ ಮೈಸೂರಿನ ಸೋನಾರ್ ಸ್ಟ್ರೀಟ್ ನಲ್ಲಿರುವ ಗುರುಗಳ ನಿವಾಸಕ್ಕೆ ಚೌಡೇಶ್ವರಿ ಅಮ್ಮನವರನ್ನು ಗುರುಗಳು ಪೂಜೆ ಮಾಡಿ ಬರಮಾಡಿಕೊಂಡರು.
ದಿನಾಂಕ 29-05-2023ರ ಸೋಮವಾರ ಬೆಳಿಗ್ಗೆ ಗುರುಗಳ ನಿವಾಸದಲ್ಲಿ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿದ್ದು ಎರಡು ದಿನಗಳ ಪೂಜಾ ಕಾರ್ಯಕ್ರಮಗಳು ಪರಮಪೂಜ್ಯ ಗುರುಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿದೆ , ಎಲ್ಲಾ ಗುರು ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಮ್ಮನವರ ಆಶೀರ್ವಾದ ಪಡೆದು ಪುನೀತರಾದರು.
ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು.