Sanju Weds Geeta Shooting. ಫಾರಂ‌ಹೌಸ್ ನಲ್ಲಿ ಸಂಜು ವೆಡ್ಸ್ ಗೀತಾ

ಫಾರಂ‌ಹೌಸ್ ನಲ್ಲಿ ಸಂಜು ವೆಡ್ಸ್ ಗೀತಾ

  ಮೂರು ತಿಂಗಳ‌ ಹಿಂದೆ ಅದ್ದೂರಿಯಾಗಿ ಮುಹೂರ್ತ ಆಚರಿಕೊಂಡಿದ್ದ 'ನಾಗಶೇಖರ್ ಅವರ  ನಿರ್ದೇಶನದ ಸಂಜು ವೆಡ್ಸ್ ಗೀತಾ ೨' ಚಿತ್ರದ ಚಿತ್ರೀಕರಣ ಇದೀಗ ಕನಕಪುರ ರಸ್ತೆಯ ಫಾರಂ ಹೌಸ್ ನಲ್ಲಿ ನಡೆಯುತ್ತಿದೆ. ಅಲ್ಲಿ  ತಮ್ಮ  ೧೦ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಪ್ರಯುಕ್ತ ನಾಯಕ, ನಾಯಕಿಗೆ ಲಕ್ಷುರಿ ಕಾರ್ ಗಿಫ್ಟ್ ಕೊಡುವ ದೃಶ್ಯವನ್ನು ಛಾಯಾಗ್ರಾಹಕ ಸತ್ಯ ಹೆಗಡೆ ಸೆರೆ ಹಿಡಿಯುತ್ತಿದ್ದರು.

ಚಿತ್ರೀಕರಣ ವೀಕ್ಷಣೆಗೆಂದು‌ ಮಾದ್ಯಮ ಮಿತ್ರರನ್ನು ಶೂಟಿಂಗ್ ಲೊಕೇಶನ್ ಗೆ ಆಹ್ವಾನಿಸಿದ್ದ ನಿರ್ದೇಶಕ ನಾಗಶೇಖರ್, ಶೂಟಿಂಗ್ ಆರಂಭಿಸುವುದು ತಡವಾಗಿದ್ದಕ್ಕೆ ಕಾರಣ ನಮ್ಮ ಚಿತ್ರದ ಮತ್ತೋರ್ವ ನಿರ್ಮಾಪಕ, ಒಳ್ಳೆಯ ಸ್ನೇಹಿತ ಮಾಭಿ ನಾರಾಯಣ್ ಅಗಲಿದ್ದು. ಹಾಗಾಗಿ ಲೇಟ್ ಆಯ್ತು ಎಂದು ಆರಂಭದಲ್ಲಿಯೇ ಮಾಹಿತಿ‌ ನೀಡಿದರು.


ನಂತರ ಚಿತ್ರದ ಬಗ್ಗೆ ಮಾತನಾಡುತ್ತ ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸೇ ಭಾಗ ಎರಡು ಆಗಲು ಕಾರಣ. ಮೊದಲ ಹಂತದಲ್ಲಿ ಈಗಾಗಲೇ ೫-೬ ದಿನ ಶೂಟಿಂಗ್ ನಡೆದಿದೆ.‌ ಅಚಾನಕ್ಕಾಗಿ ಒಂದಷ್ಟು ಬದಲಾವಣೆಗಳಾದವು. ರಂಗಾಯಣ ರಘು, ಸಾಧು ಕೋಕಿಲ ಸುಂದರವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನನ್ನ‌ ಈ ಕನಸಿಗೆ ಎಂಜಿನಿಯರಿಂಗ್ ಕ್ಲಾಸ್ ಮೆಟ್ ಕುಮಾರ್ ಜೊತೆಗಿದ್ದಾರೆ. ನನ್ನ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ಶ್ರೀಧರ್ ಸಂಭ್ರಮ್ ಒಳ್ಳೆಯ ಟ್ಯೂನ್ ಕೊಟ್ಟಿದ್ದಾರೆ. ಲೀಡ್ ಪಾತ್ರಗಳಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಸಾಥ್ ನೀಡುತ್ತಿದ್ದಾರೆ. ಇದೀಗ ಮೊದಲ ಹಂತದಲ್ಲಿ 5 ದಿನ ಮಾಡಿ ಬ್ರೇಕ್ ಕೊಟ್ಟು ಡಿಸೆಂಬರ್ 2 ರಿಂದ ಬೆಂಗಳೂರಲ್ಲಿ ಡಿ. 9ರಿಂದ ಸ್ವಿಟ್ಜರ್ಲ್ಯಾಂಡ್ ನಲ್ಲಿ 12 ದಿನ ಮುಗಿಸಿ, ನಂತರ ಮುಂಬಯಿ, ಹೈದರಾಬಾದ್ ಶೂಟಿಂಗ್ ಮಾಡಿ, 2024ರ ಏಪ್ರಿಲ್ 1ರಂದು ಚಿತ್ರವನ್ನು ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಕಾರಣ ಅದೇ ದಿನ ಮೊದಲ ಭಾಗ ಬಿಡುಗಡೆಯಾಗಿತ್ತು. ಜೊತೆಗೆ ಇದೇ ಡಿಸೆಂಬರ್ 29 ನಮ್ಮ ನಿರ್ಮಾಪಕರಾದ ಚಲವಾದಿ ಕುಮಾರ್ ಅವರ ಹುಟ್ಟುಹಬ್ಬ. ಅಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿದರು.

ಸಂಗೀತ ನಿರ್ದೇಶಕ‌ ಶ್ರೀಧರ ವಿ. ಸಂಭ್ರಮ ಮಾತನಾಡಿ ನಾನು ಈ ಸಿನಿಮಾಗೆ ಮ್ಯೂಸಿಕ್ ಮಾಡ್ತಾ ಇರೋದೇ ಅದೃಷ್ಟ ಎನ್ನಬಹುದು. ಚಿತ್ರದಲ್ಲಿ ೫ ಹಾಡುಗಳಿದ್ದು, ಕವಿರಾಜ ಸಾಹಿತ್ಯ ಒಳ್ಳೆ ಸಾಹಿತ್ಯ ಬರೆದಿದ್ದಾರೆ ಎಂದರು.
ರಂಗಾಯಣ ರಘು ಮಾತನಾಡಿ ನನ್ನ ಪಾತ್ರದ ಬಗ್ಗೆ ಗೊತ್ತಿಲ್ಲ. ಒಳ್ಳೆಯ ನಿರ್ಮಾಪಕರು ನಮಗೆ ಸಿಕ್ಕಿದ್ದಾರೆ‌ ಎಂದರು.
ಸಾಧುಕೊಕಿಲ ಮಾತನಾಡಿ ಇದರಲ್ಲಿ ಒಳ್ಳೆಯ ಪಾತ್ರ ಮಾಡ್ತಾ ಇದ್ದೇನೆ. ನಾಗಶೇಖರ್ ಜೊತೆ ಕೆಲಸ ಮಾಡಿದ್ದು ಯಾವಾಗಲೂ ಮರೆಯಲ್ಲ. ಸಂಜು ವೆಡ್ಸ್ ಗೀತಾ ಇಂದ ಜೊತೆಗಿದ್ದೇನೆ ಎಂದರು.
ನಿರ್ಮಪಕ ಚಲವಾದಿ ಕುಮಾರ್‌ ಮಾತನಾಡಿ, ನಾಗಶೇಖರ್ ನಾನು ಇಂಜಿನಿಯರಿಂಗ್ ಕ್ಲಾಸ್ ಮೆಟ್ಸ್. ಸ್ಕ್ರಿಪ್ಟ್ ನಲ್ಲೂ ನಾನು ಜೊತೆ ಕುಳಿತಿದ್ದೆ. ಸಿನಿಮಾ ತುಂಬಾ ಚನ್ನಾಗಿ ಬರ್ತಾ ಇದೆ.‌ ಇನ್ನು ಮುಂದೆಯೂ ಒಳ್ಳೆಯ ಸಿನಿಮಾ‌ ಮಾಡುವೆ ಎಂದು ಹೇಳಿದರು. ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ೧೪ ವರ್ಷದ ಹಿಂದೆ ಮಾಡಿದ್ವಿ. ಈಗ ಟೆಕ್ನಾಲಜಿ ಬದಲಾಗಿದೆ.‌ ಈ‌ ಸಿನಿಮಾನ ಇನ್ನೂ ಚೆನ್ನಾಗಿ ಮಾಡಬೇಕಿದೆ ಎಂದು ಹೇಳಿದರು.
ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ ನಾವೆಲ್ಲ ಸೇರಿ ಅಷ್ಟೇ ಪ್ರೀತಿಯಿಂದ ಈ ಸಿನಿಮಾ ಮಾಡ್ತಾ ಇದ್ದೇವೆ ಕಥೆಯೂ ಮುದ್ದಾಗಿ ಬಂದಿದೆ.‌ ನಿರ್ಮಾಪಕರ ಹುಟ್ಟುಹಬ್ಬದಂದು ಟ್ರೇಲರ್ ಬಿಡುಗಡೆ ಮಾಡುತ್ತೇವೆ ಎಂದರು.


ನಾಯಕಿ ರಚಿತಾ ರಾಮ್ ಮಾತನಾಡಿ ನನ್ನ ಪಾತ್ರದ ಹೆಸರು ಗೀತಾ, ತುಂಬಾ ಶೇಡ್ಸ್ ಇರುವಂಥ ಪಾತ್ರ. ಕಥೆ ಕೇಳಿದಾಗ ತುಂಬಾ ಇಷ್ಟ ಆಯ್ತು. ನಾಲ್ಕು ದಿನದಿಂದ ಶೂಟ್ ನಲ್ಲಿ ಭಾಗಿಯಾಗಿದ್ದು ಒಳ್ಳೆ ಅನುಭವ ನೀಡ್ತಾ ಇದೆ. ಕಿಟ್ಟಿ ಅವರ ಜೊತೆ ಒಂದೆರಡು ಶಾಟ್ ಮಾಡಿದ್ದೇನೆ. ಒಳ್ಳೆ ಎನರ್ಜಿ ಚಿತ್ರದಲ್ಲಿದೆ ಎಂದರು. ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ
ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor