Rudra Garuda Purana movie review ರುದ್ರ ಗರುಡ ಪುರಾಣ ಚಿತ್ರ ವಿಮರ್ಶೆ. ಅತೃಪ್ತ ಆತ್ಮಗಳ ಗರುಡ ಪುರಾಣ
ಚಿತ್ರ ವಿಮರ್ಶೆ
Rating – 3/5
ಚಿತ್ರ : ರುದ್ರ ಗರುಡ ಪುರಾಣ
ನಿರ್ದೇಶಕ : ನಂದಿಶ್
ನಿರ್ಮಾಪಕ : ಅಶ್ವಿನಿ, ವಿಜಯ್ ಲೋಹಿತ್
ಸಂಗೀತ : ಕೆಪಿ
ಛಾಯಾಗ್ರಹಣ : ಸಂದೀಪ್ ಕುಮಾರ್
ಸಂಕಲನ : ಮನು ಶೇದ್ಗರ್
ತಾರಾಗಣ : ರಿಷಿ, ಪ್ರಿಯಾಂಕ ಕುಮಾರ್, ಗಿರೀಶ್ ಶಿವಣ್ಣ,
ಶಿವರಾಜ್ ಕೆ.ಆರ್ ಪೇಟೆ, ವಿನೋದ್ ಆಳ್ವ, ಅವಿನಾಶ್, ಸಿದ್ಲಿಂಗು ಶ್ರೀಧರ್ ಹಾಗೂ
ಮುಂತಾದವರು.

ಗರುಡ ಪುರಾಣದಲ್ಲಿ ಮನುಷ್ಯ ತನ್ನ ಬದುಕಿನಲ್ಲಿ ಮಾಡುವ ಅಧರ್ಮ, ಮೋಸ, ವಂಚನೆಗೆ ನರಕದಲ್ಲಿ ಯಾವ ರೀತಿಯ ಶಿಕ್ಷೆ ಅನ್ನುವುದು ಬರೆದಿದೆ. ಅದು ಹಿಂದಿನ ಕಾಲದಲ್ಲಿ. ಆದರೆ ಈಗ ಈ ಕಲಿಯುಗದಲ್ಲಿ ತಾನು ಮಾಡಿದ ಒಳ್ಳೆಯ, ಕೆಟ್ಟ ಕರ್ಮಗಳಿಗೆ (ಕೆಲಸಗಳಿಗೆ) ಇಲ್ಲಿಯೇ ಶಿಕ್ಷೆ ಪಡೆಯುತ್ತಾನೆ ಒಂದು ರೀತಿಯಲ್ಲಿ ಹೇಳುವುದಾದರೆ ಕರ್ಮ ರಿಟರ್ನ್. ಇದನ್ನೇ ಚಿತ್ರದಲ್ಲಿ ನಿರ್ದೇಶಕ ನಂದೀಶ್ ಹೇಳುವ ಪ್ರಯತ್ನ ಮಾಡಿದ್ದಾರೆ.
ಚಿತ್ರದ ನಾಯಕ ಪೋಲೀಸ್ ಅಧಿಕಾರಿ ರುದ್ರನ ಮೂಲಕ ಗರುಡ ಪುರಾಣವನ್ನು ಹೇಳಿದ್ದಾರೆ. ವಿಷಯ ಸತ್ಯವಾದರು ಇಂದಿನ ಪ್ರೇಕ್ಷಕನಿಗೆ ಅದು ಎಷ್ಟು ಪ್ರಸ್ತುತ ಎನ್ನುವುದು ಮುಖ್ಯ ವಿಷಯ.

ನಿರ್ದೇಶಕರು ಕಥೆಯಲ್ಲಿ ಮತ್ತು ಕಥೆಯ ನಿರೂಪಣೆಯಲ್ಲಿ ಮತ್ತಷ್ಟು ಹಿಡಿತ ಹಿಡಿದಿದ್ದರೆ ಚನ್ನಾಗಿರುತಿತ್ತು.
ಎಲ್ಲೋ ಒಂದುಕಡೆ ಪ್ರಭಾವಿ ರಾಜಕರಣಿಯೊಬ್ಬನ ಮೋಸದ, ಅನ್ಯಾಯದ, ಅಟ್ಟಹಾಸದ ಅಬ್ಬರವನ್ನು ಮುನಿರಾಜು ಎಂಬ ಪಾತ್ರದ ಮೂಲಕ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದಾರೆ.
20 ವರ್ಷಗಳ ಹಿಂದೆ ಮೂರು ಜನ ದುಷ್ಟರ ಮೋಸದ ಕೃತ್ಯದಿಂದ 17ಎ ಕಾವೇರಿ ಎಕ್ಸ್‌ಪ್ರೆಸ್ ಎಂಬ ಬಸ್ ಅಪಘಾತಕ್ಕೀಡಾಗಿ ಅಮಾಯಕ ಮಕ್ಕಳು ಮತ್ತು ಪ್ರಾಮಾಣಿಕ ಡ್ರೈವರ್ ಕೂಡ ಬಲಿಯಾದ ಘಟನೆಯೇ ಚಿತ್ರದ ಕಥೆಗೆ ಮೂಲ ಕಥಾವಸ್ತು.

20 ವರ್ಷಗಳ ನಂತರ ಈ ತನಿಖೆಯ ಜಾಡು ಹಿಡಿದು ಹೋರುಡುವ ಹಾಗೂ ಸತ್ತವರ ಆತ್ಮಕ್ಕೆ ನ್ಯಾಯ ಒದಗಿಸುವ
ರುದ್ರ ಎಂಬ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟ ರಿಷಿ ಅಭಿನಯಿಸಿದ್ದಾರೆ. ಈಗಾಗಲೇ ಕವಲುದಾರಿಯಲ್ಲಿ ಇಂತಹದ್ದೇ ಅಪಘಾತದ ತನಿಕೆಯ ಜಾಡು ಹಿಡಿಯುವ ಪಾತ್ರದಲ್ಲಿ ನಟಿಸಿದ್ದ ರಿಷಿ ಇಲ್ಲೂ ಕೂಡ ಮತ್ತೊಂದು ತನಿಕೆಗೆ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಅನ್ನಿಸುವುದರಲ್ಲಿ ಅನುಮಾನವಿಲ್ಲ.
ರಿಷಿ ತಮಗೆ ಸಿಕ್ಕ ಯಾವುದೇ ಪಾತ್ರಕ್ಕೆ ನ್ಯಾಯ ಒದಗಿಸುವುದರಲ್ಲಿ ಸಫಲವಾಗುತ್ತಾರೆ. ಎನ್ನುವುದನ್ನು ಇಲ್ಲಿ ಸಾಭೀತು ಮಾಡಿದ್ದಾರೆ.
ರಿಷಿ ಪೋಲೀಸ್ ಪಾತ್ರಕ್ಕೆ ಹೇಳಿ ಮಾಡಿಸಿದಂತ ನಿಲುವು.
ಇಲ್ಲಿ ರುದ್ರನಾಗಿ ಅಬ್ಬರಿಸಿದ್ದಾರೆ.
ಈತನ ನಿಷ್ಠೆ, ನೇರವಂತಿಕೆ ಹಿರಿಯ ಅಧಿಕಾರಿಗಳಿಗೆ ಕಿರಿ ಕಿರಿ. ಅದರಿಂದಲೇ ಆಗಾಗ ಬೇರೆ, ಬೇರೆಯ ಕಡೆಗೆ ಎತ್ತಂಗಡಿಯಾಗುವುದು ಮಾಮೂಲು.
ಅಧಿಕಾರದಿಂದ ರುದ್ರ ಕೆಲಸವಿಲ್ಲದ ಕುದುರೆ ಲಾಯಕ್ಕೆ ಎತಂಗಡಿ ಆಗುತ್ತಾನೆ. ಪೋಲಿಸ್ ಇಲಾಖೆಯಲ್ಲಿ ಕುದುರೆ ಲದ್ದಿ ಕೂಡ ಮಾರಾಟವಾಗುತ್ತದೆ ಎನ್ನುವುದನ್ನು ತೋರಿಸಿರುವ ನಿರ್ದೇಶಕನ ಜಾಣ್ಮೆಯನ್ನು ಮೆಚ್ಚಬೇಕು.

ಹಿರಿಯ ನಟ ವಿನೋದ್ ಆಳ್ವ ದೇವಿ ಶೆಟ್ಟಿ ಎಂಬ ರಾಜಕಾರಣಿ ಯಾಗಿ ಅಭಿನಯಿಸಿದ್ದಾರೆ. ವಿನೋದ್ ಆಳ್ವರವರ ಮುಖದಲ್ಲಿ ಅಭಿನಯದ ಚಾರ್ಮು ಫೇಲವಗೊಂಡಂತೆ ಕಾಣುತ್ತದೆ. ತುಂಬ ನೀರಸವಾಗಿ ಕಾಣುತ್ತಾರೆ. ಈ ಪ್ರಭಾವಿ ರಾಜಕಾರಣಿ ದೇವಿಶೆಟ್ಟಿ ಮಗನ ಅಪಹರಣ ವಾಗುತ್ತದೆ. ಈ ಅಪಹರಣದ ಜಾಡು ಹಿಡಿದು ಹೊರಡುವ ನಾಯಕ ರುದ್ರನಿಗೆ ಇದರ ಹಿಂದಿನ ಜಾಡು ಒಂದೊಂದೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆಗ ತೆರೆದುಕೊಳ್ಳುವುದೇ
20 ವರ್ಷಗಳ ಹಿಂದಿನ ಅಪಘಾತದ ಪ್ರಕರಣ.
ಸರ್ಕಾರಿ ವ್ಯವಸ್ಥೆಯಲ್ಲಿ ದುಷ್ಟರು ಹಣ ಮಾಡುವ ಸಲುವಾಗಿ ಏನೆಲ್ಲಾ ಹುನ್ನಾರಗಳನ್ನು ಮಾಡುತ್ತಾರೆ. ನಂತರ ಅದರಿಂದ ತಪ್ಪಿಸಿಕೊಳ್ಳಲು ಕಾನೂನಿನ ಕಣ್ಣಿಗೆ ಹೇಗೆ ಮಣ್ಣು ಎರಚಿ ಭೂಗತರಾಗಿರುತ್ತಾರೆ. ಆ ಮೂರು ಜನ ಯಾರು, ಅಂತಹ ದುಷ್ಟರ ಜಾಡನ್ನು ಭೇದಿಸಿ ಅವರುಗಳಿಗೆ ಹೇಗೆ ಗರುಡ ಪುರಾಣದಂತೆ ರುದ್ರ ಶಿಕ್ಷೆ ನೀಡುತ್ತಾನೆ, 20 ವರ್ಷಗಳ ಹಿಂದೆ ಬಸ್ಸಿನ ಅಪಘಾತ ದಲ್ಲಿ ಸತ್ತ ವ್ಯಕ್ತಿಗಳ ಆತ್ಮಗಳು ಹೇಗೆ ಸಮಾಧಾನವಾಗುತ್ತವೆ
ಎನ್ನುವುದಕ್ಕೆ, ರುದ್ರ ಗರುಡ ಪುರಾಣ ಚಿತ್ರ ನೋಡಬೇಕು.
ನಾಯಕಿ ಪಾತ್ರದಲ್ಲಿ
ಪ್ರಿಯಾಂಕ ಕುಮಾರ್ ತೆರೆಮೇಲೆ ಕಾಣಿಸಿದ್ದಾರೆ. ಅವರದ್ದೇನು ಕಥೆಗೆ ಅಂತಹ ಮಹತ್ತರವಾದ ಕೊಡುಗೆ ಇಲ್ಲದಿದ್ದರು, ಪ್ರಿಯಾಂಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕ್ರೈಂ ಕಥೆಯಲ್ಲಿ ಆಗಾಗ ಮಧ್ಯೆದಲ್ಲಿ ಪ್ರೇಕ್ಷಕರನ್ನು ಪ್ರೀತಿ ಪ್ರೇಮದ ಮೂಡಿಗೆ ಕರೆದು ಕೊಂಡು ಹೋಗುತ್ತಾರೆ.
ಭವಿಷ್ಯದಲ್ಲಿ ಒಳ್ಳೆಯ ನಟಿಯಾಗುವ ಲಕ್ಷಣಗಳಿವೆ ಆದರೆ ಈಕಥೆಯಲ್ಲಿ ಅವರ ಪಾತ್ರ ಮದುವೆಗಾಗಿ ಕಾದಿರುವ ವಧುವಿನ ಪಾತ್ರಕ್ಕಷ್ಟೆ ಸೀಮಿತ.
ಇನ್ನು ಗಿರೀಶ್ ಶಿವಣ್ಣ ಕಾಮಿಡಿ ಕುದುರೆ ಲದ್ದಿ ಮಾರುವ ಮೂಲಕ ಗಮಬ ಸೆಳೆದಿದ್ದಾರೆ.
ಶಿವರಾಜ್ ಕೆ.ಆರ್ ಪೇಟೆ,
ಪೊಲೀಸ್ ಅಧಿಕಾರಿಗಳಾಗಿ ಅವಿನಾಶ್ ಹಾಗೂ ಶ್ರೀಧರ್ ಗಮನ ಸೆಳೆಯುತ್ತಾರೆ.
ರಘು ನಿಡವಳ್ಳಿ ಸಂಭಾಷಣೆ, ಸಂದೀಪ್ ಕುಮಾರ್ ಛಾಯಾಗ್ರಹಣ, ಹಾಗೂ ಕೆ.ಪಿಯವರ ಸಂಗೀತ ಚಿತ್ರದ ಕಥೆಗೆ ಪುಷ್ಠಿ ನೀಡಿವೆ ಎನ್ನಬಹುದು.
ಅಶ್ವಿನಿ ಹಾಗೂ ವಿಜಯ್ ಲೋಹಿತ್ ದಂಪತಿಗಳು ಚಿತ್ರದ ನಿರ್ಮಾಕರಾಗಿದ್ದಾರೆ. ಒಂದು ಕ್ರೈಂ, ಥ್ರಿಲ್ಲರ್, ಹಾರರ್ ಕೋಟೆಡ್ ಇರುವ ಕಥೆಗೆ ಹಣ ಹೂಡಿ ಕನ್ನಡ ಪ್ರೇಕ್ಷಕರಿಗೆ ರುದ್ರ ಗರುಡ ಪುರಾಣದಂತ ಚಿತ್ರ ನೀಡಿದ್ದಾರೆ.
ಇಲ್ಲಿ ನಿರ್ಮಾಪಕರ ಬಗ್ಗೆ ಗಮನಿಸ ಬೇಕಾದ ವಿಷಯ ಎಂದರೆ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಯವರ ಹೆಸರು ಹೋಲುವಂತೆ ಇವರುಗಳ ಹೆಸರು ಇದೆ. ಪುನೀತ್ ರವರ ಹಿಂದಿನ ಹೆಸರು ಲೋಹಿತ್ ಅವರ ಪತ್ನಿಯ ಹೆಸರು ಅಶ್ವಿನಿ. ಈಗ ಈ ದಂಪತಿಗಳಿಗೂ ವಿಜಯ ಸಿಗಲಿ ಪ್ರೇಕ್ಷಕರು ಚಿತ್ರ ಗೆಲ್ಲಿಸಲಿ ಎಂಬುದು ನಮ್ಮ ಆಶಯ.