ಆರೋಗ್ಯಕರ ಜೀವನಕ್ಕೆ ರಾಗಿಯ ಮಹತ್ವ
ಆರೋಗ್ಯಕರ ಆಹಾರವನ್ನು ಉತ್ತೇಜಿಸಲು ಹೈದರಾಬಾದ್ನ ಅಪೋಲೋ ಹಾಸ್ಪಿಟಲ್ಸ್ ತನ್ನ ಊಟದ ಮೆನುಗಳಲ್ಲಿ ಪ್ರತಿ ತಿಂಗಳು 1000 ಕೆಜಿ ರಾಗಿಯನ್ನು ಬಳಕೆ ಮಾಡುತ್ತದೆ. ಯಥೇಚ್ಛವಾಗಿ ರಾಗಿ ಸೇವನೆಯಿಂದಾಗಿ ದೇಹ ಸಶಕ್ತಗೊಳ್ಳುವುದಲ್ಲದೆ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ರಾಗಿಯ ಮಹತ್ವವನ್ನೇ ಪ್ರಧಾನವಾಗಿಟ್ಟುಕೊಂಡು, ಶಿಕ್ಷಣ ಮತ್ತು ಕೌಶಲ್ಯ ತರಬೇತಿಯ ಮೂಲಕ ತೆಲಂಗಾಣದ ಸಂಗರೆಡ್ಡಿಯಲ್ಲಿ ಅಪೋಲೋ ಹೊಸ ಸಾಹಸಕ್ಕೆ ಕೈಹಾಕಿದೆ. 5000 ಕ್ಕೂ ಹೆಚ್ಚು ಮಹಿಳಾ ರೈತರ ಜೀವನಶೈಲಿಯನ್ನು ಉತ್ತಮ ಆರೋಗ್ಯ, ಸಂಪತ್ತು ಮತ್ತು ಬಲದಿಂದ ಶ್ರೀಮಂತಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ನಾವು ಆರೋಗ್ಯವಾಗಿ ಬಾಳಿ ಬದುಕಲು ಇನ್ನಾದರೂ ಸೂಕ್ತ ಗಮನಹರಿಸುವ ಅವಶ್ಯಕತೆ ಇದ್ದು, ಅದಕ್ಕಾಗಿ ನಿತ್ಯ ಆಹಾರ ಸೇವನೆಯಲ್ಲಿ ರಾಗಿಯನ್ನು ಹೇರಳವಾಗಿ ಬಳಕೆ ಮಾಡಬೇಕಿದೆ,