X Prime Minister Manmohan singh is no more. ಸಜ್ಜನ, ಮಿತುಭಾಷಿ, ಸರಳ ವ್ಯಕ್ತಿತ್ವ, ಸೌಮ್ಯ ಸ್ವಭಾವದ, ಆರ್ಥಿಕ ತಂತ್ರಜ್ಞ, ಗೌರವಾನ್ವಿತ ನಾಯಕ, ಮಾಜಿ ಪ್ರಧಾನಿ , ಡಾ,, ಮನಮೋಹನ್ ಸಿಂಗ್ ರವರು 92ನೇ ವಯಸ್ಸಿನ ಮುಸ್ಸಂಜೆಯಲ್ಲಿ ಪಅಸ್ತಂಗತರಾಗಿದ್ದಾರೆ.

ಆರ್ಥಿಕ ಸುಧಾರಣೆಗಳ ಹರಿಕಾರ, ಭಾರತದ 14ನೇ ಮಾಜೀ ಪ್ರಧಾನಿ ಮನಮೋಹನ್ ಸಿಂಗ್ ವಿದಾಯ.

ಮನಮೋಹನಸಿಂಗ್ ಅವರು ಸೆಪ್ಟೆಂಬರ್ 26 1932ರಲ್ಲಿ ಅವಿಭಜಿತ ಭಾರತದ ಪಂಜಾಬ್ ಗಾಹ್ ಗ್ರಾಮದಲ್ಲಿ ಜನಿಸದರು.

ಭಾರತ ವಿಭಾಗವಾಗುವ ಮುನ್ನ ಸ್ವತಂತ್ರ ಪೂರ್ವದಲ್ಲಿ ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ಬ್ರಿಟಿಷ್ ಆಳ್ವಿಕೆಯ ಭಾರತದ ಪಂಜಾಬ್‌ನ ಗಾಹ್‌ನಲ್ಲಿ (ಈಗ ಆ ಪಂಜಾಬ್, ಪಾಕಿಸ್ತಾನದಲ್ಲಿದೆ) ಸಿಖ್ ಕುಟುಂಬದಲ್ಲಿ ಜನಿಸಿದರು. ಅವರ ಚಿಕ್ಕ ವಯಸ್ಸಿನಲ್ಲೇ ತಾಯಿ ನಿಧನರಾದರು. ಅವರು ಅಜ್ಜಿಯ ಆರೈಕೆಯಲ್ಲಿ ಬೆಳೆದರು.

ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು. ಭಾರತದ ವಿಭಜನೆಯ ನಂತರ ಅವರ ಕುಟುಂಬವು ಭಾರತದ ಹಲ್ದ್‌ವಾನ್‌ಗೆ ವಲಸೆ ಬಂದರು. ನಂತರ 1948 ರಲ್ಲಿ ಅವರು ಅಮೃತಸರಕ್ಕೆ  ಸ್ಥಳಾಂತರಗೊಂಡರು, ಅಲ್ಲಿ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.

ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ಹೋಶಿಯಾರ್ಪುರದಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ಮತ್ತು ಕ್ರಮವಾಗಿ 1957-58ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಮುಗಿಸಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದರು. ಅವರು ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿದ್ದರು.

The Prime Minister, Dr. Manmohan Singh and his wife Smt. Gursharan Kaur with the Indian Ace Shooter Gagan Narang, who won four gold medals in the XIX Common wealth Games 2010 Delhi, in New Delhi on October 15, 2010.

ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 1960 ರಲ್ಲಿ ಅವರು ಡಿಫಿಲ್‌ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ 1962 ರಲ್ಲಿ ಡಾಕ್ಟರೇಟ್ ಪ್ರಬಂಧವು “ಭಾರತದ ರಫ್ತು ಕಾರ್ಯಕ್ಷಮತೆ. ರಫ್ತು ನಿರೀಕ್ಷೆಗಳು ಮತ್ತು ನೀತಿ ಪರಿಣಾಮಗಳು” ಎಂಬ ಶೀರ್ಷಿಕೆಯಲ್ಲಿ ಹೊರ ಬಂದಿದ್ದು, ಪುಸ್ತಕ “ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿಯ ಬೆಳವಣಿಗೆಯ ನಿರೀಕ್ಷೆಗೆ” ಆಧಾರವಾಗಿತ್ತು.

1957 ರಿಂದ 1959 ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. 1959 ಮತ್ತು 1963 ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು 1963 ರಿಂದ 1965 ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ನಂತರ ಅವರು 1966 ರಿಂದ 1969 ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ನಂತರ ಅರ್ಥಶಾಸ್ತ್ರಜ್ಞರಾಗಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಅವರು ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು.

1969 ರಿಂದ 1971 ರವರೆಗೆ ಸಿಂಗ್ ದೆಹಲಿ ವಿಶ್ವ ವಿದ್ಯಾಲಯದಲ್ಲಿ ದೆಹಲಿ ಸ್ಕೂಲ್ ಆಫ್ ಎಕ್ನಾಮಿಕ್ಸ್‌ನಲ್ಲಿ ಅಂತರಾಷ್ಟ್ರೀಯ ವ್ಯಾಪಾರ ವಹಿವಾಟಿನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.

1972 ರಲ್ಲಿ  ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ನಂತರ 1976 ರಲ್ಲಿ ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

1980 ರಿಂದ 1982ರ ವರೆಗೆ ಯೋಜನಾ ಆಯೋಗದಲ್ಲಿ ಕೆಲಸ ಮಾಡಿದ್ದರು. 1982 ರಲ್ಲಿ ಅಂದಿನ ಹಣಕಾಸು ಸಚಿವ ಪ್ರಣಬ್ ಮಿಖರ್ಜಿ ಅವರ ಸುಪರ್ದಿಯಲ್ಲಿ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಆಗಿ 1985 ರವರೆಗೆ ಈ ಹುದ್ದೆಯನ್ನು ಅಲಂಕರಿಸದ್ದರು. ಅವರು 1985 ರಿಂದ 1987 ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾದರು. ಯೋಜನಾ ಆಯೋಗದಲ್ಲಿ ಅವರ ಅಧಿಕಾರಾವಧಿಯ ನಂತರ ಅವರು 1987 ರಿಂದ 1990 ರವರೆಗೆ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.

1990 ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿ ಅಂದಿನ ಪ್ರಧಾನಿ ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಹುದ್ದೆಯನ್ನು ಅಲಂಕರಿಸಿ. ಎಲ್ಲರಿಂದಲೂ ಸೈ ಎನಿಸಿಕೊಂಡರು. 1991 ಮಾರ್ಚ್‌ ನಲ್ಲಿ ಅವರು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಅಧ್ಯಕ್ಷರಾದರು.

ಸಿಂಗ್ ಅವರು 1991 ರಲ್ಲಿ ಅಸ್ಸಾಂ ರಾಜ್ಯದ ಶಾಸಕಾಂಗದಿಂದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು ಮತ್ತು 1995,2001,2007 ಮತ್ತು 2013 ರಲ್ಲಿ ಮರು ಆಯ್ಕೆಯಾದರು. 1998 ರಿಂದ 2004 ರವರೆಗೆ BJP ಅಧಿಕಾರದಲ್ಲಿದ್ದಾಗ ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 1999 ರಲ್ಲಿ ಅವರು ದಕ್ಷಿಣ ದೆಹಲಿಯಿಂದ ಲೋಕಸಭೆಗೆ ಸ್ಪರ್ಧಿಸಿದರು ಆದರೆ ಜಯಮಾಲೆ ಅವರ ಕೊರಳಿಗೆ ಬೀಳಲಿಲ್ಲ.

2004 ರ ಸಾರ್ವತ್ರಿಕ ಚುನಾವಣೆಗಳ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಲೋಕಸಭೆಯಲ್ಲಿ ಏಕೈಕ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿತ್ತು. ಇದು ಮಿತ್ರಪಕ್ಷಗಳೊಂದಿಗೆ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ರಚಿಸಿತು ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋನಿಯಾ ಗಾಂಧಿ ಅವರು ತಂತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಯುಪಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು. ಬಿಬಿಸಿ ಪ್ರಕಾರ ಸಿಂಗ್ ಎಂದಿಗೂ ನೇರ ಜನಪ್ರಿಯ ಚುನಾವಣೆಯಲ್ಲಿ ಗೆದ್ದಿಲ್ಲವಾದರೂ ಅವರು “ಭಾರಿ ಜನಪ್ರಿಯ ಬೆಂಬಲವನ್ನು ಪಡೆದರು, ಏಕೆಂದರೆ. ರಾಜಕೀಯ ಜೀವನದಲ್ಲಿ ಕಳಂಕವಿಲ್ಲದ ರಾಜಕಾರಣಿಯಾಗಿ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಮೇ22-2004 ರಂದು ಭಾರತದ 14ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮತ್ತೆ ಎರಡನೇ ಬಾರಿಗೆ 2009ರಿಂದ 2014ರ ವರೆಗೆ ಭಾರತದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಕೆಲವು ಉನ್ನತ ನಿರ್ಧಾರಗಳನ್ನು ತೆಗೆದು ಕಳ್ಳೊಲು ಕಾಂಗ್ರೆಸ್ ನಲ್ಲಿ ಅವರಿಗೆ ಸ್ವತಂತ್ರ ವಿರಲಿಲ್ಲ.

ಕಾಂಗ್ರೇಸ್ ಅಧಿಕಾರದ ಸಮಯದಲ್ಲಿ ಹತ್ತು ವರ್ಷಗಳ ಕಾಲ ಎರಡು ಬಾರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದವರೆಂದರೆ ನೆಹರು ಅವರನ್ನ ಬಿಟ್ಟರೆ , ಮನ ಮೋಹನ್ ಸಿಂಗ್ ಮಾತ್ರ.

ಮಮನಮೋಹನ್ ಸಿಂಗ್ ರವರು ಒಬ್ಬ ಸಜ್ಜನ ರಾಜಕರಣಿಯಾಗಿ, ವಿತ್ತಸಚಿವರಾಗಿ, ಭಾರತವನ್ನು ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರಧಾನಿಯಾಗಿದ್ದಾಗ ಹಲವಾರು ಸವಾಲುಗಳನ್ನು ಹೆದರಿಸಿ ದೇಶವನ್ನು ಮುನ್ನಡೆಸಿದ್ದಾರೆ.

ಭಾರತದ ರಾಜಕಾರಣಿಗಳಲ್ಲಿ ಅಷ್ಟೋಂದು ವಿಧ್ಯಾಭ್ಯಾಸ ದೊಂದಿಗೆ, ಉನ್ನತ ಸ್ಥಾನ ಮಾನಗಳನ್ನು ಅನುಭವಿಸಿ, ಹಾಗೂ ಸರಿಯಾಗಿ ಕಾರ್ಯ ನಿರ್ವಹಿಸಿದ ಏಕೈಕ ರಾಜಕರಣಿ ಮನಮೋಹನ್ ಸಿಂಗ್ ಎಂದರೆ ತಪ್ಪಾಗುವುದಿಲ್ಲ.

ಇಂದು ಸಜ್ಜನ, ಮಿತುಭಾಷಿ, ಸರಳ ವ್ಯಕ್ತಿತ್ವ, ಶಿಕ್ಷಣ ತಜ್ಞ, ಸೌಮ್ಯ ಸ್ವಭಾವದ, ಆರ್ಥಿಕ ತಜ್ಞ, ಗೌರವಾನ್ವಿತ ನಾಯಕ, ಮಾಜಿ ಪ್ರಧಾನಿ , ಡಾ,, ಮನಮೋಹನ್ ಸಿಂಗ್ ರವರು 92ನೇ ವಯಸ್ಸಿನ ಮುಸ್ಸಂಜೆಯಲ್ಲಿ ಅಸ್ತಂಗತರಾಗಿದ್ದಾರೆ.

ಹಿರಿಯ ಚೇತನ, ಸಮೃದ್ಧ ಭಾರತದ ಮಾಜೀ ಪ್ರಧಾನಿಯವರಿಗೆ ನಮ್ಮ ಆತ್ಮ ಪೂರ್ಣ, ಗೌರವಯುತವಾದ ಅಂತಿಮ ನಮನಗಳು ಅರ್ಪಿಸುತ್ತೇವೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor