ಸುಭ್ರಮಣ್ಯ ಹೆಬ್ಬಾಗಿಲು ಕಥಾರಿನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ
ಕನ್ನಡದ ಕಣ್ಮಣಿಯಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಕತಾರಿನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದೆ ಇವರು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಡಿಯಲ್ಲಿ ನೊಂದಾಯಿಸಿಕೊಂಡಿರುವ ಸಂಸ್ಥೆಗಳ ಪ್ರತಿನಿಧಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದಾರೆ. ಮುಂದಿನ ಎರಡು ವರ್ಷಗಳಿಗೆ ಇವರ ಆಡಳಿತ ಸಮಿತಿಯು ಜನಪರ ಸೇವೆಗಾಗಿ ನಿರತವಾಗಿರುತ್ತದೆ.

ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕಳೆದ ಒಂದುವರೆ ದಶಕದಿಂದ ಕತಾರಿನಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಅಭಿವೃದ್ಧಿಗೆ ಬೆಳವಣಿಗೆಗೆ ಹಾಗೂ ಕ್ಷೇಮಕ್ಕಾಗಿ ಸತತವಾಗಿ ತಮ್ಮ ಶಕ್ತಿ ಸಮಯ ಹಾಗೂ ತಮಗೆ ಲಭ್ಯವಿರುವ ಸಮಸ್ತ ಸಂಪನ್ಮೂಲಗಳನ್ನು ಮುಡುಪಾಗಿಟ್ಟಿರುತ್ತಾರೆ.
ಇವರ ಸಮಾಜ ಸೇವಾ ಕೆಲಸಗಳಿಗೆ ಶುಭ ಕೋರುತ್ತಾ ಅವರು ಚುನಾವಣೆಯಲ್ಲಿ ಜಯಿಸಿದ್ದಕ್ಕಾಗಿ ಅಭಿನಂದನೆಗಳನ್ನು ತಿಳಿಸುತ್ತೇವೆ.