ಬಡವರ ಪಾಲಿಗೆ ವರವಾದ ಮುನೀಂದ್ರ ಕುಮಾರ್ ಜನ್ಮದಿನ
ಹುಟ್ಟು ಹಬ್ಬ ಅಂದರೆ ಬರೀ ಅಬ್ಬರದ ಪ್ರಚಾರ, ಆಡಂಬರದ ಆಚರಣೆಗೆ ಸೀಮಿತವಾಗಿರುವುದನ್ನು ನೋಡಿದ್ದೇವೆ. ಆದರೆ ಕೋಗಿಲು ವಾರ್ಡ್ ನ ನಗರಸಭಾ ಸದಸ್ಯರಾಗಿ ಆಡಳಿತ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದ ಹಾಗೂ ಬ್ಯಾಟರಾಯನಪುರ ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಮುನೀಂದ್ರ ಕುಮಾರ್ ತಮ್ಮ ಹುಟ್ಟುಹಬ್ಬವನ್ನು ಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ.

ತಮ್ಮ ಕ್ಷೇತ್ರದ ಜನರಷ್ಟೇ ಅಲ್ಲದೇ ಅಕ್ಕ ಪಕ್ಕದ ಊರಿನ ಕಡು ಬಡತನದಲ್ಲಿ ನಲುಗಿರುವ ಸಾಕಷ್ಟು ಜನರಿಗೆ ಹೊಲಿಗೆ ಯಂತ್ರ, ತಳ್ಳುವಗಾಡಿ, ಸಲೂನ್ ಶಾಪ್ ಅವರಿಗೆ ಬೇಕಾದ ಖುರ್ಚಿ, ಹೆಣ್ಣು ಮಕ್ಕಳಿಗೆ ಸೀರೆ, ಬಟ್ಟೆ ಸೇರಿದಂತೆ ಅನೇಕ ವಸ್ತುಗಳನ್ನು ಅವಶ್ಯಕತೆಯಿರುವವರಿಗೆ ನೀಡಿ ಜನರ ಕಣ್ಣಲ್ಲಿ ನಿಜವಾದ ಹೀರೋ ಅನ್ನಿಸಿಕೊಂಡರು.

ಅಷ್ಟೇ ಅಲ್ಲದೇ ಯುವಕರಿಗರ ಹಾಗೂ ಬೈಕ್ ಸವಾರರಿಗೆ ಹೆಲ್ಮೇಟ್ ಗಳನ್ನು ವಿತರಿಸಿ ಕಾನೂನು ಪಾಲನೆ ಮಾಡಿ ಹೆಲ್ಮೇಟ್ ಧರಿಸಿ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಮನವಿ ಮಾಡಿದರು.
ಈ ರೀತಿಯ ಹುಟ್ಟುಹಬ್ಬ ನಿಜಕ್ಕೂ ಅರ್ಥಪೂರ್ಣ ವಾದದ್ದು.

ಯಲಹಂಕದ ಇಬಿಸು ಕನ್ವೇಂಷನ್ ಹಾಲ್ ನಲ್ಲಿ ನಡೆದ ಮುನೀಂದ್ರ ಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶ್ರೀ ಆನಂದ ಗುರೂಜಿ, ಬಿಜೆಪಿ ಮುಖಂಡರಾದ ಸದಾನಂದ ಗೌಡ, ನಿರ್ಮಲ್ ಕುಮಾರ್ ಸುರಾನ, ಶಾಸಕ ಎಸ್ ಆರ್ ವಿಶ್ವನಾಥ್ , ಎ.ರವಿ, ಎಸ್ ಪಿ ದಯಾನಂದ್, ಬಿ.ನಾರಾಯಣ್, ಜಿ.ಹೆಚ್.ರಾಮಚಂದ್ರ, ಕುಸುಮಾ ಮಂಜುನಾಥ್ ಸೇರಿದಂತೆ ಸಾಕಷ್ಟು ಜನ ಗಣ್ಯರು ಉಪಸ್ಥಿತರಿದ್ದು ಶುಭ ಕೋರಿದರು.

ಇಂತಹ ಜನಪರ , ಸಮಾಜ ಮುಖಿ ಕಾರ್ಯ ಮಾಡುವ ನಾಯಕರು ಇಂದಿನ ನಮ್ಮ ಸಮಾಜಕ್ಕೆ ಅವಶ್ಯಕ.
ನಮ್ಮ ಕಡೆಯಿಂದಲೂ ಮುನೀಂದ್ರ ಕುಮಾರ್ ರವರಿಗೆ ಶುಭಕಾಮನೆಗಳು.