ಮಾನ್ಯ ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ, ಸಾಂಖ್ಯಿಕ ಇಲಾಖೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮುನಿರತ್ನ ಅವರು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ ಕೆನರಾ ಬ್ಯಾಂಕ್ ಕಾಲೋನಿಯಲ್ಲಿ ಮಾನ್ಯ ವಸತಿ ಸಚಿವರಾದ ಶ್ರೀ ವಿ.ಸೋಮಣ್ಣ ಅವರೊಂದಿಗೆ ನೂತನ ‘ಹಾಪ್ ಕಾಮ್ಸ್- ಹಣ್ಣು, ತರಕಾರಿ ಮಾರಾಟ ಮಳಿಗೆ’ಯನ್ನು ಉದ್ಘಾಟಿಸಿದರು.