Mahendra munnoth Election Song Released. ‘ಓ ಭಾರತ ಮಾತೆಯ ಮಕ್ಕಳೇ ಕೇಳಿ ಕಿವಿ ಮಾತು’
‘ಓ ಭಾರತ ಮಾತೆಯ ಮಕ್ಕಳೇ ಕೇಳಿ ಕಿವಿ ಮಾತು’
ನಟ, ನಿರ್ಮಾಪಕ, ಗೋಪ್ರೇಮಿ ಹಾಗೂ ಸಮಾಜ ಸೇವಕ ಮಹೇಂದ್ರ ಮುನ್ನೋತ್ ಪ್ರತೀಬಾರಿ ಸಾಮಾಜಿಕ ಚಿಂತನೆಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.
ಈಗ ಮತದಾನ ನಮ್ಮೆಲ್ಲರ ಹಕ್ಕು ಮರೆಯದೇ ಮತದಾನ ಮಾಡಿ ಉತ್ತಮ ನಾಗರೀಕರಾಗಿ ಎನ್ನುವ ಸಂದೇಶವನ್ನು ಹಾಡಿನ ಮೂಲಕ ದೇಶದ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಈ ಗೀತೆಯನ್ನು ಆನಂದ್ ಸಿನಿಮಾಸ್ ಮೂಲಕ ನಿರ್ಮಿಸಿದ್ದಾರೆ ಜೊತೆಗೆ ಎಲ್ಲಾವರ್ಗದ ಜನರಿಗೆ ಮತದಾನ ನಮಗೆ ಸಂವಿಧಾನ ಕೊಟ್ಟ ಹಕ್ಕು ಮತ್ತು ಜವಾಬ್ದಾರಿ ಎಂದು ಹಾಡಿನ ಮೂಲಕ ಹೇಳುವ ಸಲುವಾಗಿ ಬಣ್ಣ ಹಚ್ಚಿದ್ದಾರೆ.

ಇನ್ನು ಈ ಗೀತೆಯನ್ನು ಹರಿಹರನ್ ಬಿ.ಪಿ. ರವರು ನಿರ್ದೇಶಿಸಿದ್ದಾರೆ.
‘ಓ ಭಾರತ ಮಾತೆಯ ಮಕ್ಕಳೇ ಕೇಳಿ ಕಿವಿ ಮಾತು’ ಈ ಗೀತೆಯನ್ನು ಸಾಹಿತಿ ರೇವಣ್ಣ ನಾಯಕ್, ಸಂಗೀತ ಎ ಟಿ ರವೀಶ್ ,ಸಂಕಲನ ಮುತ್ತುರಾಜ್ ಟಿ, ಗಾಯನ ಅಜಯ್ ವಾರಿಯರ್, ಛಾಯಾಗ್ರಹಣ ನಾಗೇಂದ್ರ ರಂಗಾರಿ ಇವರೆಲ್ಲರ ಸಹಯೋಗ ದೊಂದಿಗೆ ಮೂಡಿ ಬಂದಿದೆ.