Jallianwala bag massacre on April 13th. 1919. Today 106 year completed. 1919 ಏಪ್ರಿಲ್ ನಲ್ಲಿ ಜಲಿಯನ್ ವಾಲಬಾಗ್ ನಲ್ಲಿ ನಡೆದ ಭಾರತದ ಇತಿಹಾಸದ ಭೀಕರ ಹತ್ಯಾಕಾಂಡಕ್ಕೆ ಇಂದಿಗೆ 106 ವರ್ಷಗಳು.
ಪಂಜಾಬಿನ ಅಮೃತ್ ಸರ್ ನಲ್ಲಿರುವ ಜಲಿಯನ್ ವಾಲಬಾಗ್ ನಲ್ಲಿ ಭಾರತದ ಅತಿ ದೊಡ್ಡ ಘನಘೋರ ಹತ್ಯಕಾಂಡ ನಡೆದಿದ್ದು, ಇಂದಿಗೆ 106 ವರ್ಷಗಳು ಕಳೆದಿವೆ. ಬ್ರಿಟೀಷರ ದಬ್ಬಾಳಿಕೆಗೆ ಸಾವಿರಾರು ಜನ ಅಮಾಯಕ ಭಾರತೀಯರು ಪ್ರಾಣ ತೆತ್ತಂತಹ ದಿನ.
379 ಜನ ಭಾರತಿಯರು ಪ್ರಣ ತೆತ್ತಿದ್ದಾರೆ ಹಾಗೆ 1500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಏಪ್ರಿಲ್ 13. 1919 ರಂದು. ಅಂದಿನ ಅಧಿಕಾರಿಯಾಗಿದ್ದ ಜನರಲ್ ಡಯರ್ ಎಂಬ ದುಷ್ಟನ ರಕ್ತದಾಹಕ್ಕೆ ಅಮಾಯಕರ ಬಲಿಯಾಗುತ್ತದೆ.

ಈ ಜೋಡಿ ಸಂಖ್ಯೆಯ ಹಿಂದೆ ಯಾವುದೋ ಕರಾಳ ಛಾಯೆ ಇದೆ ಅನ್ನಿಸುತ್ತದೆ. ಏಕೆಂದರೆ _1919ನಲ್ಲಿ ಬ್ರಿಟಿಷರಿಂದ ಲೆಕ್ಕವಿಲ್ಲದಷ್ಟು ಮಾರಣ ಹೋಮಗಳಾಗಿವೆ. ಹಾಗೆಯೇ 2020 ವರ್ಷವೂ ಕೂಡ ಲೆಕ್ಕವಿಲ್ಲದಷ್ಟು ಕೋವಿಡ್ ನಿಂದಾಗಿ ಹೆಣಗಳು ಉರುಳಿದವು.

ಯಾವುದೇ ಮುನ್ಸೂಚನೆ ಇಲ್ಲದೆ ಬ್ರಿಟಿಷರ ಬಂದೂಕಿನ ಗುಂಡಿಗೆ ಬಲಿಯಾದವರ ಆಕ್ರಂದನ ಇಂದಿಗೂ ಜೀವಂತವಾಗಿರುವಂತೆ ಅನ್ನಿಸುತ್ತದೆ. ಅದಕ್ಕೆ ಸಾಕ್ಷಿ ಗೋಡೆಗಳ ಮೇಲಿರುವ ಗುಂಡುಗಳ ಗುರುತು. ಇವನ್ನು ಕೇಳುತ್ತಿದ್ದರೆ ಇಂದಿಗೂ ಮನಸ್ಸಿನಲ್ಲಿ ಆಕ್ರೋಶ ಮೂಡುತ್ತದೆ, ಬ್ರಿಟಿಷರ ಮೇಲೆ ಅಸಹ್ಯ ಹುಟ್ಟುತ್ತದೆ.
ದಿಕ್ಕಾರವಿರಲಿ ಬ್ರಿಟಿಷರಿಗೆ ಹಾಗೂ ಅಂದಿನ ಬ್ರಿಟಿಷ್ ಸರ್ಕಾರಕ್ಕೆ.