Indian flag hosting in Qatar. ಸಾಗರದಾಚೆಯ ಕತಾರ್ ನಲ್ಲಿ ಭಾರತದ ಗಣರಾಜ್ಯೋತ್ಸವದ ಆಚರಣೆ ಮುಗಿಲೆತ್ತರಕ್ಕೆ ಹಾರಿದ ತ್ರಿವರ್ಣ ಧ್ವಜ

ಸಾವಿರಾರು ಜನರ ಬಲಿದಾನವು ನಮ್ಮ ಈ ರಾಷ್ಟ್ರವನ್ನು ಇಂದು ಉಸಿರಾಡಲು ಅವಕಾಶ ನೀಡಿದೆ.

ನಾರ್ತ್ ಸ್ಟಾರ ಇಂಟರ್ನ್ಯಾಷನಲ್ ಕಿಂಡರ್ ಗಾರ್ಡನ್ (ಉತ್ತರ ಧ್ರುವ ಅಂತರರಾಷ್ಟ್ರೀಯ ಶಿಶುವಿಹಾರ)  ಶಾಲೆಯ  ಶಿಕ್ಷಕರು ಹಾಗೂ ಮಕ್ಕಳು ಸೇರಿ ಭಾರತ ದೇಶದ 75ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.
ಕಾರ್ಯಕ್ರಮವು ಉತ್ಸಾಹದಿಂದ ಹಾಗೂ ರಾಷ್ಟ್ರಭಕ್ತಿಯಿಂದ ತುಂಬಿ ತುಳುಕುತ್ತಿತ್ತು.  ಶಾಲೆಯ ಆವರಣವನ್ನು ರಾಷ್ಟ್ರ ಭಕ್ತರ ಚಿತ್ರಪಟಗಳಿಂದ ವಿವಿಧ ಬಣ್ಣದ ಪುಷ್ಪಗಳಿಂದ ಹಾಗೂ ವರುಣ ರಂಜಿತ  ಬಲುನುಗಳಿಂದ ಅಲಂಕೃತಗೊಳಿಸಲಾಗಿತ್ತು.  ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಇಂತಹ ಉನ್ನತ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಪ್ರತ್ಯೇಕವಾಗಿ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು ಹಾಗೂ  ಧ್ವನಿವರ್ಧಕದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ವಿಶೇಷ ಸಂದರ್ಭಕ್ಕೆ ಮುಖ್ಯ ಅತಿಥಿಗಳಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಹಾಗೂ ಕರ್ನಾಟಕದ ಬೈಂದೂರಿನ ಮೂಲದವರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಹಾಗೂ ಗೌರವಾನ್ವಿತ ಅತಿಥಿಯಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿಯ ಸದಸ್ಯರಾದ ಶ್ರೀ ಎಂ ವಿ ಸತ್ಯನಾರಾಯಣ  ಮತ್ತು  ಸಿಶುರ್ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ  ಶ್ರೀಜಿತ್ ಇವರುಗಳೊಂದಿಗೆ ನಾರ್ತ್ ಸ್ಟಾರ್ ಎಜುಕೇಶನಲ್ ವೆಂಚರ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಅಕ್ಬರ್ ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಜೀನತ್ ನಿಶಾ ಸತಾರ್ ಅವರುಗಳು ಉಪಸ್ಥಿತರಿದ್ದರು.

ಸನ್ಮಾನ್ಯ ಮುಖ್ಯ ಅತಿಥಿಗಳು ಗೌರವಾನ್ವಿತ ಅತಿಥಿಗಳು ಹಾಗೂ ಪ್ರಾಂಶುಪಾಲರು ಭಾರತೀಯ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿದರು ಹಾಗೂ ಸಮಾರಂಭದಲ್ಲಿ ಉಪಸ್ಥಿತರಿದ್ದ  ಎಲ್ಲರೂ ಗೌರವದಿಂದ ಹಾಗೂ ಏಕೀಕರಣದವನು ಭಾವದಿಂದ ಭಾರತೀಯ ರಾಷ್ಟ್ರಗೀತೆಯನ್ನು ಹಾಡಿದರು.  ಮುಖ್ಯ ಅತಿಥಿಗಳಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಪ್ರೋತ್ಸಾಹ ಮೂಡಿಸುವ ಮಾತುಗಳಿಂದ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.


ತಮ್ಮ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತಾ ಸಾಮರ್ಥ್ಯಕ್ಕೆ ತಕ್ಕಂತೆ lಅಥವಾ ಅದನ್ನು ಮೀರಿ  ಕಾರ್ಯಶೀಲರಾಗಬೇಕೆಂದು  ಪ್ರೇರೇಪಿಸಿದರು.
ಇತರ ಗಣ್ಯರು ಗಣರಾಜ್ಯೋತ್ಸವದ ಅಂಗವಾಗಿ  ತಮ್ಮ ಅನುಭವಗಳನ್ನು ಹಾಗೂ ಭಾವನೆಯನ್ನು ವ್ಯಕ್ತಪಡಿಸಿದರು.  ಶಾಲೆಯ ಪ್ರಾಂಶುಪಾಲರು  ಪ್ರೋತ್ಸಾಹದಾಯಕ ಭಾಷಣವನ್ನು ನೀಡಿ ಗಣರಾಜ್ಯೋತ್ಸವದ ಪ್ರಾಮುಖ್ಯತೆಯನ್ನು  ವಿಶ್ಲೇಷಿಸಿದರು.
ಮುಗ್ಧ ಮನಸ್ಸುಗಳಿಗೆ ವಿಜಯಪತಾಕೆಯ  ಮಹತ್ವ ಹಾಗೂ ಗೆಲ್ಲುವ  ಬೆಳೆಸಿಕೊಳ್ಳುವ ಮನೋಭಾವ ಹಾಗೂ ಉಜ್ವಲ ಭವಿಷ್ಯಕ್ಕೆ ವಿಚಾರಗಳ ಕುತೂಹಲವನ್ನು ಬೆಳೆಸಿಕೊಳ್ಳಲು ತಿಳಿಸಿದರು.

ರಾಷ್ಟ್ರೀಯ ಧ್ವಜಾರೋಹಣವನ್ನು ಮಾಡಿದ ನಂತರ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಪ್ರತಿಬಿಂಬಿಸುವ  ಪ್ರಹಸನ ನೃತ್ಯರೂಪಕ ಗಾಯನ ಹಾಗೂ ಭಾಷಣಗಳನ್ನು ನೀಡಿ ಮನಮೋಹಕ ಪ್ರದರ್ಶನವನ್ನು ನೀಡಿದರು.
ವಿದ್ಯಾರ್ಥಿಗಳು ಭಾರತೀಯ ನಾಯಕರ ವೇಷಭೂಷಣಗಳಿಂದ ಸ್ವತಂತ್ರ ಸಂಗ್ರಾಮದ ತ್ಯಾಗ ಹಾಗೂ ಬಲಿದಾನವನ್ನು ನೆನೆಸಿಕೊಂಡರು.  ಕೆಲವರು ಮಹಾತ್ಮ ಗಾಂಧಿ ತರಹ ವೇಷಭೂಷಣವನ್ನು ಮಾಡಿಕೊಂಡಿದ್ದರೆ ಇನ್ನೂ ಕೆಲವರು ಜವಾಹರ್ ಲಾಲ್ ನೆಹರು ತರಹ ಉಡುಗೆಯನ್ನು ತೊಟ್ಟಿದ್ದರು.

ಶಾಲೆಯ ಗಾಯನ ತಂಡವು ದೇಶಭಕ್ತಿ ಗೀತೆ ಎಲ್ಲೊ ಒಂದಾದ ಯಾವತ್ತೂ ಮೇರೆ ವತನ್ ಎಂಬ ಹಾಡನ್ನು ಈಸು ಸಂದರ್ಭದಲ್ಲಿ  ಪ್ರದರ್ಶಿಸಿದರು.  ಸಿಹಿ ವಿತರಣಾ ವಿತರಣೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

  ಎಲ್ಲರ ಮನಸ್ಸು ಹಾಗೂ ಹೃದಯಗಳಲ್ಲಿ ಭಾರತೀಯ  ರಾಷ್ಟ್ರಧ್ವಜದ ತ್ರಿವರ್ಣದ ಅಲೆಗಳು   ಮೂಡಿ ಬರುತ್ತಿದ್ದವು.
2024ನೇ ಸಾಲಿನ ಗಣರಾಜ್ಯೋತ್ಸವವನ್ನು ಅತಿ ವಿಜೃಂಭಣೆಯಿಂದ ಹಾಗೂ ದೇಶಭಕ್ತಿಯಿಂದ ಆಚರಿಸಲು ಎಲ್ಲರಿಗೂ ಹೆಮ್ಮೆಯಾಯಿತು. ಈ ಕಾರ್ಯಕ್ರಮಕ್ಕೆ ಕಾರಣಕರ್ತರಾದ ಸಮಸ್ತ ಸಿಬ್ಬಂದಿ ವರ್ಗದವರು  ಸಮಾರಂಭವನ್ನು ಅವಿಸ್ಮರಣೀಯಗೊಳಿಸುವಲ್ಲಿ ಯಶಸ್ವಿಯಾದರು.  ಇಂತಹ   ಸುದಿನವನ್ನು ಎಂದೆಂದಿಗೂ  ಆಚರಿಸಲು ಆಗುವಂತೆಂದು ಬೇಡಿಕೊಳ್ಳಬಹುದಷ್ಟೇ. ಜೈ ಹಿಂದ್.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor