ಭಾರತ ದೇಶ ಅನೇಕತೆಯಲ್ಲಿ ಏಕತೆ ಹೊಂದಿ ಒಗ್ಗಟ್ಟಾಗಿದೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 76ನೇ ಗಣ ರಾಜ್ಯೋತ್ಸವ ಆಚರಣೆ
ಭಾರತ ದೇಶ ಅನೇಕತೆಯಲ್ಲಿ ಏಕತೆ ಹೊಂದಿ ಒಗ್ಗಟ್ಟಾಗಿದೆ.

ವಿಜಯನಗರದ ವಿಧಾನಸಭಾ ಕ್ಷೇತ್ರದ ಚಂದ್ರಾ ಬಡಾವಣೆಯಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿವೃತ್ತದಲ್ಲಿ 76ನೇ ಗಣರಾಜ್ಯೋತ್ಸವ ಸಮಾರಂಭ ಜರುಗಿತು. ಈ ಸಮಾರಂಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಎಂ. ಕೃಷ್ಣಪ್ಪ, ಮಾಜಿ ರಾಜ್ಯಸಭಾ ಸದಸ್ಯರಾದ ಡಾll ಎಲ್. ಹನುಮಂತಯ್ಯ, ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ, ಯುವ ಮುಖಂಡ ಪ್ರದೀಪ್ ಕೃಷ್ಣ, ಒಕ್ಕಲಿಗ ಸಂಘದ ಮಾಜಿ ನಿರ್ದೇಶಕರಾದ ನೀಲಕಂಠ ಆರ್. ಗೌಡ ರವರುಗಳು ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರಾದ ಎಂ. ಕೃಷ್ಣಪ್ಪ ಅವರು
ಭಾರತ ದೇಶದಲ್ಲಿ1950ರಲ್ಲಿ ಸಂವಿಧಾನ ರಚನೆ ಯಾಗಿ ಜಾರಿಗೆ ಬಂದಿದೆ. ಭಾರತ ದೇಶದಲ್ಲಿ ಅನೇಕತೆಯಲ್ಲಿ ಏಕತೆಯಿಂದ ಒಗ್ಗಟ್ಟಾಗಿ ಇರಬೇಕು. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಭಾರತದ ಸಂವಿಧಾನ ರೂಪಿಸಲು ಮಾಜಿ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಾಹರಲಾಲ್ ನೆಹರು ರವರು ಸಮಿತಿ ರಚಿಸಿದರು. 76 ವರ್ಷಗಳ ಹಿಂದೆ ಸಂವಿಧಾನ ರೂಪಿಸಿದರು.
ಬ್ರಿಟಿಷ್ ರ ವಿರುದ್ಧ ಭಾರತ ಸ್ವತಂತ್ರಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಸಂಗೊಳ್ಳಿ ರಾಯಣ್ಣ ಅನೇಕ ಮಹಾನ್ ಸ್ವತಂತ್ರ ಹೋರಾಟಗಾರರು ತಮ್ಮ ತ್ಯಾಗ ಬಲಿದಾನಗಳಿಂದಾಗಿ ನಮಗೆ ಸ್ವಾತಂತ್ರ ತಂದುಕೊಟ್ಟು ನಮ್ಮ ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ಮಾಜಿ ರಾಜ್ಯಸಭಾ ಸದಸ್ಯರಾದ ಡಾll ಎಲ್. ಹನುಮಂತಯ್ಯ ಅವರು ಮಾತನಾಡಿ, ಶಾಸಕರಾದ ಎಂ. ಕೃಷ್ಣಪ್ಪ ಅವರು 215 ಅಡಿ ಎತ್ತರದ ಸ್ಥಂಭ ನಿರ್ಮಾಣ ಮಾಡಿರುವದು ಬೆಂಗಳೂರಿನಲ್ಲಿ ನೋಡಲು ಎಲ್ಲ ಭಾರತೀಯರಿಗೆ ಹೆಮ್ಮೆ ಎನಿಸುತ್ತದೆ, ಎಂ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಅವರು ಅಭಿವೃದ್ಧಿಯ ಹರಿಕಾರರು ಎಂದೇ ಖ್ಯಾತಿ ಯಾಗಿದ್ದಾರೆ.

ವಿಜಯನಗರ ಕ್ಷೇತ್ರ ರಾಜ್ಯದಲ್ಲಿ ಗಣರಾಜ್ಯೋತ್ಸವ ವನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗಿದೆ ಎಂದು ಹನುಮಂತಯ್ಯ ಹೇಳಿದರು. ಭಾರತದಲ್ಲಿ ಸಂವಿಧಾನದಿಂದ ಎಲ್ಲ ಜನರಿಗೂ ಸರಿಸಮಾನವಾಗಿ ಬದುಕು ಹಕ್ಕು ನೀಡಿದೆ. ಸಂವಿಧಾನ ಗ್ರಂಥ ಶ್ರೇಷ್ಠ ಗ್ರಂಥ, ನಮ್ಮ ದೇಶದಲ್ಲಿ ಎಲ್ಲ ಜಾತಿ ವರ್ಗದವರು ಒಂದೇ ಉದ್ಯಾನದಲ್ಲಿ ಇದ್ದೀವಿ ಎಂದು ಸಾಹಿತಿಗಳು ಹೇಳಿದರು. ಅದೇ ರೀತಿ ನಾವೆಲ್ಲರೂ ಸಹ ಬಾಳ್ವೆಯಿಂದ ಬದುಕೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಸಂವಿಧಾನ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು, ಹಾಗೂ ಶಿಕ್ಷಕರು ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಸ್ಥಳೀಯ ನಾಗರಿಕರು ಪಾಲ್ಗೊಂಡಿದ್ದರು.