parishuddham movie Review. ವಿಕೃತ ಸಮಾಜದ ಕೊಳಕನ್ನು ತೊಳೆಯುವ ಪರಿಶುದ್ಧಂ
ಹೆಣ್ಣನ್ನು ಭೋಗದ ವಸ್ತುವಾಗಿ
ಕಾಣುವವರ ಮಾರಣ ಹೋಮ
ಚಿತ್ರ – ಪರಿಶುದ್ಧಂ
ನಿರ್ಮಾಣ , ಸಂಗೀತ , ಕಥೆ, ಚಿತ್ರಕಥೆ, ನಿರ್ದೇಶನ : ಆರೋನ್ ಕಾರ್ತಿಕ್.
ಸಹ ನಿರ್ಮಾಪಕ : ಕುಮಾರ್ ರಾಥೋಡ್
ಛಾಯಾಗ್ರಹಣ : ಕೃಷ್ಣ ಸಾರಥಿ , ಅಶೋಕ್ ಕಡಬ
ತಾರಾಗಣ : ಸ್ಪರ್ಶ ರೇಖಾ , ದಿಶಾ ಪೂವಯ್ಯ , ರೋಹನ್, ಅರ್ಚನಾ , ಭಾರ್ಗವ್,ಕೀರ್ತಿ ಕೃಷ್ಣ, ರಾಜ್ ಚರಣ್ , ರಮೇಶ್ ಪಂಡಿತ್, ವಿಕ್ಟರಿ ವಾಸು, ಯತಿರಾಜ್, ಕುರಿ ಬಾಂಡ್ ರಂಗ ಮುಂತಾದವರು.
ರೇಟಿಂಗ್ : 3/5
ಹೆಣ್ಣನ್ನು ಬೋಗದ ವಸ್ತುವಾಗಿ ಕಾಣುವ ದುಷ್ಟರ ಸದೆ ಬಡೆಯುವ ಶಕ್ತಿಯಾಗಿ ಹೆಣ್ಣೊಬ್ಬಳು ಸುಡಿದು ನಿಂತಾಗಲೇ ಸಮಾಜ ಪರಿಶುದ್ಧವಾಗುತ್ತದೆ ಎನ್ನುವುದು ನಿರ್ದೇಶಕನ ದೂರ ದೃಷ್ಠಿ
ಸಮಾಜದಲ್ಲಿ ಹೆಣ್ಣನ್ನು ಕೀಳಾಗಿ ನೋಡಿ ಅವಳನ್ನು ಗಂಡಸ್ಸಿನ ತೆವಲುಗಳನ್ನು ತೀರಿಸುವ ವಸ್ತುವನ್ನಾಗಿ ಯಾರು ಭಾವಿಸುತ್ತಾರೋ ಅವರೆಲ್ಲಾ ನಿಗೂಡವಾಗಿ ಭರ್ಬರವಾಗಿ ಕೊಲೆಯಾಗುತ್ತಾ ಹೋಗುತ್ತಾರೆ.
ಆ ಕೊಲೆ ಯಾರು ಮಾಡುತ್ತಾರೆ, ಹೇಗೆ ಮಾಡುತ್ತಾರೆ ಎನ್ನುವುದೇ ಸಸ್ಪೆನ್ಸ್.

ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಒಂದು ಸಾಮಾಜಿಕ ಕಳ ಕಳಿಯ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಚಿತ್ರದ ಎರಡನೇ ಭಾಗ ನಿರ್ದೇಶಕರ ಮಾತು ಎಷ್ಟು ವೇಗವೂ ಅದೇ ಸ್ಪೀಡಿನಲ್ಲಿ ಕಥೆ ಸಾಗುತ್ತದೆ.

ಆರೋನ್ ಕಾರ್ತಿಕ್ ಒಬ್ಬ ಪ್ರತಿಭಾವಂತ ನಿರ್ದೇಶಕ. ಸಿನಿಮಾದ ಎಲ್ಲಾ ವಲಯಗಳಲ್ಲಿ ಕೆಲಸ ಮಾಡಿ ಪಳಗಿರುವ ಕಾರ್ತಿಕ್ ಅರೋನ್ ಸಿನಿಮಾ ನಿರ್ದೇಶನದ ಜೊತೆಗೆ ಚಿತ್ರಕ್ಕೆ ಕಥೆ , ಚಿತ್ರಕಥೆ , ಸಂಗೀತ , ಸಾಹಿತ್ಯದ ಹಾಗೂ ಸಿನಿಮಾ ನಿರ್ಮಾಣವನ್ನು ಮಾಡಿ ಪೂರ್ತಿ ಸಿನಿಮಾ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತಿದ್ದಾರೆ.
ಬಹುತೇಕ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿಯಂತಹ ಸಿನಿಮಾಗಳು ಕುತೂಹಲವನ್ನು ಮೂಡಿಸುತ್ತಾ ಹಲವು ತಿರುವುಗಳನ್ನು ತೆಗೆದು ಕೊಳ್ಳುತ್ತದೆ. ಅದೇ ರೀತಿ ಪರಿಶುದ್ಧಂ ಚಿತ್ರ ಕೂಡ ಒಂದಷ್ಟು ಕುತೂಹಲವನ್ನು ಕೊನೆವರೆಗೆ ಕಾಯ್ದುಕೊಂಡಿದೆ.
ಮುಂಬೈನಲ್ಲಿ ಜೋಡಿ ಕೊಲೆ ಮಾಡಿ ತಲೆಮರೆಸಿಕೊಂಡು ಓಡಾಡುತ್ತಿರುವ ಸೈಕೋ ಶ್ಯಾಮ್. ಕೆಲವು ಪ್ರಭಾವಿಗಳನ್ನು ಸರಣಿ ಕೊಲೆ ಮಾಡುತ್ತಾ ಹೋಗುವ ಸಂದರ್ಭದಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ರಿಯಾ (ದಿಶಾ ಪೂವಯ್ಯ) ಕೈಗೆ ಸಿಕ್ಕಿ ಬಿದ್ದು ಜೈಲು ಸೇರುತ್ತಾನೆ.

ಇನ್ಸ್ಪೆಕ್ಟರ್ ರಿಯಾಳ (ದಿಶಾ ಪೂವಯ್ಯ) ಅಕ್ಕ ರೇಖಾ ಮನೋವೈದ್ಯೆ (ಸ್ಪರ್ಶ ರೇಖಾ ) ಈ ಸೈಕೋ ಕಿಲ್ಲರ್ ಗೆ ಚಿಕಿತ್ಸೆ ನೀಡುತ್ತಾಳೆ.
ಆದರೆ ಸೈಕೋ ಶಾಮ್ ಮಾರ್ಗ ಮಧ್ಯೆ ಪೊಲೀಸರಿಗೆ ಯಾಮರಿಸಿ ಎಸ್ಕೇಪ್ ಆಗುತ್ತಾನೆ.
ಪೊಲೀಸರು ಅವನ ಶೋಧನೆಗೆ ಮುಂದಾಗುತ್ತಾರೆ.
ಇದರ ನಡುವೆ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚಿ ಚಿತ್ರನಟಿ ಆಗಬೇಕೆಂದು ನಿರ್ಧರಿಸಿ ತನ್ನ ಮೈ ಮಾಟ ಮೂಲಕ ಶ್ರೀಮಂತರನ್ನು ಸೆಳೆಯುತ್ತಾಳೆ ನಟಿ ಅಂಜಲಿ.
ಇವಳ ಮೈ ಮಾಟಕ್ಕೆ ಕೆಲವು ಪುರುಷರು ಮುಗಿಬಿದ್ದು ಪತ್ನಿಯರಿಗೆ ಡೈವೋರ್ಸ್ ನೀಡಿ ಇವಳ ಹಿಂದೆ ಬರಲು ಸಿದ್ಧರಾಗಿರುತ್ತಾರೆ.
ನಟಿ ಅಂಜಲಿ ಮತ್ತು ಅವಳ ಹಿಂದೆ ಬಿದ್ದವರೆಲ್ಲಾ ಒಬ್ಬೊಬ್ಬರಾಗಿ ಕೊಲೆಯಾಗುತ್ತಾರೆ.
ಈ ರೀತಿಯ ಸರಣಿ ಕೊಲೆ ಯಾಕಾಗುತ್ತಿದೆ, ಯಾರು
ಮಾಡಿತ್ತಿದ್ದಾರೆ,
ಸೈಕೋ ಶಾಮ್ ಏನಾಗುತ್ತಾನೆ,
ಕ್ಲೈಮಾಕ್ಸ್ ನಲ್ಲಿ ಏನಾಗುತ್ತದೆ
ಈ ಎಲ್ಲಾ ವಿಚಾರ ತಿಳಿದುಕೊಳ್ಳ ಬೇಕಾದರೆ ಒಮ್ಮೆ
ಪರಿಶುದ್ಧಂ ಚಿತ್ರ ನೋಡಬೇಕು.
ಇನ್ನು ಮನೋವೈದ್ಯ ಪಾತ್ರದಲ್ಲಿ ನಟಿಸಿರುವ ಸ್ಪರ್ಶ ರೇಖಾ ಅಭಿನಯ ಎಲ್ಲರ ಗಮನ ಸೆಳೆಯುತ್ತದೆ.
ರೇಖಾ ಚಿತ್ರದ ಕೇಂದ್ರ ಬಿಂದುವಾಗಿ ಪಾತ್ರ ನಿರ್ವಹಿಸಿದ್ದಾರೆ.
ಇನ್ನು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರವನ್ನು ನಿರ್ವಹಿಸಿರುವ ದಿಶಾ ಪೂವಯ್ಯ ಕೂಡ ತಮ್ಮ ಪಾತ್ರವನ್ನು ಸಮರ್ಥವಾಗಿ ಎದುರಿಸಿದ್ದಾರೆ.

ಸೈಕೋ ಶಾಮ್ ಪಾತ್ರ ನಿರ್ವಹಿಸಿರುವ ರಾಜ್ ಚರಣ್ 1ಠ ತನ್ನ ಅಭಿನಯದ ಕೌಶಲ್ಯವನ್ನು ತೆರೆದಿಟ್ಟಿದ್ದಾರೆ.
ಅದೇ ರೀತಿ ಅಂಜಲಿ ಯಾಗಿ ಬೋಲ್ಡ್ ಪಾತ್ರದಲ್ಲಿ ಮಿಂಚಿರುವ ಅರ್ಚನಾ
ಉಳಿದ ಕಲಾವಿದರಾದ ಭಾರ್ಗವ , ರೋಹನ್ , ನೀತು ಶೆಟ್ಟಿ , ಕೀರ್ತಿ ಕೃಷ್ಣ , ರಮೇಶ್ ಪಂಡಿತ್ , ವಿಕ್ಟರಿ ವಾಸು , ಯತಿರಾಜ್ , ಕುರಿ ಬಾಂಡ್ ರಂಗ , ಮೈಸೂರು ರಮಾನಂದ , ದುಬೈ ರಫೀಕ್ ಸೇರಿದಂತೆ ಎಲ್ಲಾ ಪಾತ್ರದಾರಿಗಳು ಕೂಡ ಚಿತ್ರದ ಓಟಕ್ಕೆ ಒಂದು ಉತ್ತಮ ಸಾಥ್ ನೀಡಿದ್ದಾರೆ.
ಒಟ್ಟಾರೆ ಪರಿಶುದ್ಧಂ ಚಿತ್ರ ಸಮಾಜದ ಕೊಳಕನ್ನು ತೆಗೆಯು ನಿಟ್ಟಿನಲ್ಲಿ ಮೂಡಿ ಬಂದಿದೆ. ಒಮ್ಮೆ ಸಿನಿಮಾ ನೋಡಿ ಥ್ರಿಲ್ಲಿಂಗ್ ಅನುಭವ ಪಡೆಯಬಹುದು.