panjurli daiva ಮಲ್ಲೇಶ್ವರದ ಕನ್ಯಕಾಪರಮೇಶ್ವರಿ ದೇವಿ ಪಂಜುರ್ಲಿ ದೈವದ ಅಲಂಕಾರದಲ್ಲಿ
ಬೆಂಗಳೂರಿನ ಮಲ್ಲೇಶ್ವರದ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ವಾಸವಿ ದೇವಿಗೆ ನವರಾತ್ರಿ ಪ್ರಯುಕ್ತ ಪಂಜುರ್ಲಿ ದೈವದ ಅಲಂಕಾರ. ಇದು ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಏಕೆಂದರೆ ಈ ವರೆಗೂ ದಕ್ಷಿಣ ಕನ್ನಡದ ಪ್ರಾಂತ್ಯಗಳನ್ನು ಬಿಟ್ಟರೆ ಈ ಕಡೆ ಈ ರೀತಿಯಾಗಿ ಪಂಜುರ್ಲಿ ದೈವದ ಅಲಂಕಾರ ಯಾವ ದೇವಾಲಯದಲ್ಲೂ ಮಾಡಿರಲಿಲ್ಲ.

ಮಲ್ಲೇಶ್ವರದ 8ನೇ ಕ್ರಾಸ್ ನಲ್ಲಿರುವ ಕನ್ಯಕಾಪರಮೇಶ್ವರಿ ದೇಗುಲದಲ್ಲಿ ತಾಯಿ ವಾಸವಾಂಬ ರವರಿಗೆ ಪಂಜುರ್ಲಿ ದೈವದ ಅಲಂಕಾರ ಮಾಡಿದ್ದು. ನಿಜಕ್ಕೂ ಕಣ್ಮನ ಸೆಳೆಯುವ ಹಾಗೂ ಭಕ್ತಿಭಾವ ತುಂಬುತ್ತಿತ್ತು.
ಈರೀತಿಯ ವಿಶೇಷತೆಗಳಿಗೆ ಈ ದೇವಾಲಯ ತುಂಬಾ ಪ್ರಸಿದ್ದಿಯಾಗಿದೆ.