Notout Movie artist protection. “ನಾಟ್ ಔಟ್” ಬಿಡುಗಡೆಗೆಗಾಗಿ ಸಹ ಕಲಾವಿದರ ಪ್ರತಿಭಟನೆ .
“ನಾಟ್ ಔಟ್” ಬಿಡುಗಡೆಗೆಗಾಗಿ ಸಹ ಕಲಾವಿದರ ಪ್ರತಿಭಟನೆ .
ರವಿಶಂಕರ್ (ಆರ್ಮುಗಂ), ಅಜಯ್ ಪೃಥ್ವಿ, ರಚನ ಇಂದರ್, ಕಾಕ್ರೋಚ್ ಸುದಿ, ಗೋಪಾಲಕೃಷ್ಣ ದೇಶಪಾಂಡೆ, ಅಶ್ವಿನ್ ಹಾಸನ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ, ಸಲ್ಮಾನ್, ನಟರ ಜೊತೆ ಇನ್ನು ಹತ್ತಾರು ಜನ ಕನ್ನಡ ಚಿತ್ರರಂಗದ ಸಹ ಕಲಾವಿದರಾಗಿ ನಟನೆ ಮಾಡುತ್ತಾ ಬಂದಿರುತ್ತಾರೆ. ಅವರಿಗೂ ಕೂಡ “ನಾಟ್ ಔಟ್” ಚಿತ್ರದಲ್ಲಿ ಒಂದು ಬಹುಮುಖ್ಯವಾದ ಪಾತ್ರಗಳನ್ನು ಕೊಡುವುದರ ಮೂಲಕ ಅವರ ಪ್ರತಿಭೆಯನ್ನ ಗುರುತಿಸುವ ಒಂದು ಅವಕಾಶ ಸಿಕ್ಕಿದೆ.

ಆ ಸಹ ಕಲಾವಿದರು ತಾವು ಅಭಿನಯಿಸಿರುವ “ನಾಟ್ ಔಟ್” ಚಿತ್ರ ಬಹುಬೇಗ ಬಿಡುಗಡೆಯಾಗಲಿ ಮತ್ತು ಇನ್ನಷ್ಟು ಅವಕಾಶಗಳು ಚಿತ್ರರಂಗದಲ್ಲಿ ತಮಗೆ ಸಿಗಲಿ ಎನ್ನುವ ಅವರ ಆಸೆ, ಇಷ್ಟು ದಿನ ಜೂನಿಯರ್ ಆರ್ಟಿಸ್ಟ್ ಗಳಾಗಿ ನಟನೆ ಮಾಡಿದ್ದ ಅವರು “ನಾಟ್ ಔಟ್” ಚಿತ್ರದ ನಂತರ ಒಂದು ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಈ ನಿರೀಕ್ಷೆ ಗೋಸ್ಕರ ನೇ “ನಾಟ್ ಔಟ್” ಚಿತ್ರ ಆದಷ್ಟು ಬೇಗ ಬಿಡುಗಡೆಯಾಗಲಿ ಎನ್ನುವ ಅವರ ಕಳಕಳಿ ಮತ್ತು ಆಸೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸಹಕಲಾವಿದರು ಒಂದು ಚಿತ್ರದ ಬಿಡುಗಡೆಗಾಗಿ ಒಟ್ಟಾಗಿ ಸೇರಿ ಪ್ರತಿಭಟನೆ ಮಾಡಿದ್ದಾರೆ.

“ನಾಟ್ ಔಟ್” ಚಿತ್ರವು ರಾಷ್ಟ್ರಕೂಟ ಪಿಕ್ಚರ್ಸ್ ಅಡಿಯಲ್ಲಿ ಮೂಡಿ ಬಂದಿದೆ. ವಿ ರವಿಕುಮಾರ್ ಮತ್ತು ಸಂಶುದ್ದೀನ್ ಚಿತ್ರದ ನಿರ್ಮಾಪಕರು, ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದು ಅಂಬರೀಶ್ ಎಂ. ಸಹ ನಿರ್ಮಾಪಕರು ಎಚ್ ಕುಮಾರ್.

ಜೂಡ ಸ್ಯಾಂಡಿ ಸಂಗೀತ ನಿರ್ದೇಶನ, ಕೆ ಎಂ ಪ್ರಕಾಶ್ ಸಂಕಲನ ಹಾಗೂ ಪ್ರಮೋದ್ ಮರವಂತೆ ಗೀತರಚನೆ ಮಾಡಿರುವ ಈ ಚಿತ್ರದ ಹಾಡುಗಳನ್ನು ವಾಸುಕಿ ವೈಭವ್, ಅದಿತಿ ಸಾಗರ್, ಪಂಚಮ್ ಜೀವ,ಹಾಡಿದ್ದಾರೆ ಹಾಗೂ ಕಲೆ ಸತೀಶ್ ಪೂಜಾರ. ಈ ಪ್ರತಿಭಟನೆಯ ನಂತರ ಚಿತ್ರತಂಡವು ಮುಂದಿನ ತಿಂಗಳು ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.