Nadahabba Dasara 2023 ಈ ಬಾರಿ ನವರಾತ್ರಿಗೆ ತಾಯಿ ಜಗನ್ಮಾತೆ ದುರ್ಗೆ ಆನೆಯ ಮೇಲೆ ಬರಲಿದ್ದಾಳೆ ಇದು ಬ್ರಹ್ಮಾಂಡಕ್ಕೆ ಶುಭವೋ..? ಅಶುಭವೋ…?
ಈ ಬಾರಿ ಇದೇ ದುರ್ಗೆಯ ವಾಹನ ಆನೆ.! ಇದು ಬ್ರಹ್ಮಾಂಡಕ್ಕೆ ಶುಭವೋ..? ಅಶುಭವೋ..?
ಶಾರದೀಯ ನವರಾತ್ರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಜನರು ದುರ್ಗಾ ದೇವಿಯ 9 ವಿಭಿನ್ನ ರೂಪಗಳನ್ನು ಪೂಜಿಸುತ್ತಾರೆ. ಪ್ರತಿ ವರ್ಷ, ಶಾರದೀಯ ನವರಾತ್ರಿಯು ಆಶ್ವೀಜ ಮಾಸದ ಶುಕ್ಲ ಪಕ್ಷದ ಪ್ರತಿಪಾದ ದಿನದಿಂದ ಪ್ರಾರಂಭವಾಗುತ್ತದೆ. ಈ ವರ್ಷ ಶಾರದೀಯ ನವರಾತ್ರಿ ಹಬ್ಬವು ಅಕ್ಟೋಬರ್ 15 ರಿಂದ ಪ್ರಾರಂಭವಾಗಿ ಅಕ್ಟೋಬರ್ 24 ರಂದು ಕೊನೆಗೊಳ್ಳಲಿದೆ. ಪ್ರತೀ ವರ್ಷ ದುರ್ಗಾ ದೇವಿಯು ನವರಾತ್ರಿ ಸಮಯದಲ್ಲಿ ವಿಭಿನ್ನ ವಾಹನಗಳು ಮೂಲಕ ಭೂಮಿಗೆ ಆಗಮಿಸುತ್ತಾಳೆ. ಈ ಬಾರಿ ಕೂಡ ದುರ್ಗಾ ವಿಭಿನ್ನ ವಾಹನದೊಂದಿಗೆ ಭೂಮಿಗೆ ಬರುತ್ತಾಳೆ ಈ ಬಾರಿ ದುರ್ಗಾ ದೇವಿಯು ಆನೆಯ ಮೇಲೆ ಕುಳಿತು ಬರುತ್ತಾಳೆ. ಈ ಬಾರಿ ದುರ್ಗಾ ದೇವಿ ಆನೆಯ ಮೇಲೆ ಕುಳಿತು ಭೂಮಿಗೆ ಬರುವುದರಿಂದ ಜನರ ಜೀವನದಲ್ಲಿ ಯಾವೆಲ್ಲಾ ಬದಲಾವಣೆಗಳಾಗುತ್ತದೆ..?

ಈ ವರ್ಷ ಆನೆ ದುರ್ಗೆಯ ವಾಹನ:
ಧಾರ್ಮಿಕ ಗ್ರಂಥಗಳ ಪ್ರಕಾರ, ನವರಾತ್ರಿಯ ಸಮಯದಲ್ಲಿ, ತಾಯಿ ದುರ್ಗಾ ಮಾತೆಯು ವಿವಿಧ ವಾಹನಗಳಲ್ಲಿ ಭೂಮಿಗೆ ಬರುತ್ತಾಳೆ. ಈ ವಾಹನಗಳು ಶುಭ ಮತ್ತು ಅಶುಭ ಸಮಯಗಳನ್ನು ಸೂಚಿಸುತ್ತವೆ. ಶಾಸ್ತ್ರದ ಪ್ರಕಾರ, ಈ ವರ್ಷ ದುರ್ಗಾ ದೇವಿಯು ಆನೆಯ ಮೂಲಕ ಭೂಮಿಗೆ ಆಗಮಿಸುತ್ತಾಳೆ. ಅಂದರೆ ದುರ್ಗ ಮಾತೆ ಆನೆಯ ಮೇಲೆ ಸವಾರಿ ಮಾಡುತ್ತಾಳೆ.

ಆನೆಯ ಮೇಲೆ ದುರ್ಗಾ ದೇವಿ ಆಗಮಿಸುವುದು ಶುಭವೋ..? ಅಶುಭವೋ..?
ದುರ್ಗಾ ದೇವಿಯ ವಾಹನ ಸಿಂಹವಾಗಿದ್ದರೂ ಆಕೆ ನವರಾತ್ರಿ ಸಮಯದಲ್ಲಿ ಆನೆಯ ಮೇಲೆ ಸವಾರಿ ಮಾಡಿಕೊಂಡು ಭೂಮಿಗೆ ಆಗಮಿಸುತ್ತಾಳೆ. ಸಿಂಹವನ್ನು ಹೊರತುಪಡಿಸಿ, ದುರ್ಗಾ ದೇವಿಯು ಕುದುರೆಯ ಮೇಲೆ, ಎಮ್ಮೆಯ ಮೇಲೆ, ಡೋಲಿಯ ಮೇಲೆ, ದೋಣಿಯ ಮೇಲೆ, ಮಾನವನ ಮೇಲೆ ಅಥವಾ ಆನೆಯ ಮೇಲೆ ಸವಾರಿ ಮಾಡಿಕೊಂಡು ಬರುತ್ತಾಳೆ. ಈ ಎಲ್ಲಾ ವಾಹನಗಳು ಬ್ರಹ್ಮಾಂಡದಲ್ಲಾಗುವ ಶುಭ ಮತ್ತು ಅಶುಭ ಬದಲಾವಣೆಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ.
ದುರ್ಗಾ ದೇವಿಯು ಸವಾರಿ ಮಾಡುವ ವಾಹನಗಳಲ್ಲಿ ದೋಣಿ ಅಥವಾ ಆನೆಯ ಮೇಲೆ ಸವಾರಿ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ವರ್ಷ, ದುರ್ಗಾ ದೇವಿಯ ವಾಹನವು ಆನೆಯಾಗಿದ್ದು, ಇದು ಅತ್ಯಂತ ಮಂಗಳಕರ ಸಂಕೇತವಾಗಿದೆ. ತಾಯಿ ದುರ್ಗೆಯು ಆನೆಯ ಮೇಲೆ ಸವಾರಿ ಮಾಡಿದಾಗ, ಅವಳು ತನ್ನೊಂದಿಗೆ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ತರುತ್ತಾಳೆ ಎಂದು ಹೇಳಲಾಗಿದೆ.

ಜ್ಯೋತಿಷ್ಯದ ಪ್ರಕಾರ, ದುರ್ಗಾ ದೇವಿಯ ಸವಾರಿ:
ಜ್ಯೋತಿಷಿಗಳ ಪ್ರಕಾರ, ದುರ್ಗಾ ದೇವಿಯು ಆನೆಯ ಮೇಲೆ ಸವಾರಿ ಮಾಡುತ್ತಾ ಭೂಮಿಗೆ ಬರುತ್ತಾಳೆ. ಇದು ತುಂಬಾ ಶುಭ ಸಂಕೇತವಾಗಿದೆ. ಅಂದರೆ ಈ ವರ್ಷ ಉತ್ತಮ ಮಳೆಯಾಗಲಿದ್ದು, ಕೃಷಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಲಿದೆ. ಅಲ್ಲದೆ, ದೇಶದಲ್ಲಿ ಆಹಾರ ಮಳಿಗೆಗಳು ತುಂಬಿರುತ್ತವೆ ಮತ್ತು ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಆನೆಯ ಮೇಲೆ ಸವಾರಿ ಮಾಡುವ ಮಾತೆ ದುರ್ಗೆಯ ಆಗಮನವು ಮುಂಬರುವ ದಿನಗಳು ತುಂಬಾ ಮಂಗಳಕರವಾಗಿರುತ್ತದೆ ಎಂದು ಸೂಚಿಸುತ್ತದೆ. ಆನೆಯನ್ನು ಜ್ಞಾನ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಆನೆಯ ಮೇಲೆ ತಾಯಿಯ ಆಗಮನವು ದೇಶಕ್ಕೆ ಆರ್ಥಿಕ ಸಮೃದ್ಧಿಯನ್ನು ತರುತ್ತದೆ. ಈ ಅವಧಿಯಲ್ಲಿ, ದುರ್ಗಾ ದೇವಿಯನ್ನು ವಿಧಿ – ವಿಧಾನಗಳ ಪ್ರಕಾರ ಪೂಜಿಸಿದರೆ, ಅವಳು ತನ್ನ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂದು ಹೇಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಬಾರಿ ದುರ್ಗಾ ದೇವಿಯು ಆನೆಯ ಮೇಲೆ ಕುಳಿತು ಸವಾರಿ ಮಾಡಿಕೊಂಡು ಬರುವುದರಿಂದ ಬ್ರಹ್ಮಾಂಡದಲ್ಲಿ ಸುಖ, ಸಂತೋಷ, ಸಮೃದ್ಧಿ ಹೆಚ್ಚಾಗುತ್ತದೆ. ಕೃಷಿ ವಿಚಾರಗಳಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ.