Marakastra movie today release. ಇಂದಿನಿಂದ “ಮಾರಕಾಸ್ತ್ರ” ಚಿತ್ರ ರಾಜ್ಯದಾದ್ಯಂತ ತೆರೆಗೆ
ಇಂದಿನಿಂದ “ಮಾರಕಾಸ್ತ್ರ ಚಿತ್ರ ರಾಜ್ಯದಾದ್ಯಂತ ತೆರೆಗೆ
ಕನಸಿನ ರಾಣಿ ಮಾಲಾಶ್ರೀ ಅಭಿನಯದ “ಮಾರಕಾಸ್ತ್ರ” ಚಿತ್ರ ಇಂದು ತೆರೆ ಕಾಣಲಿದೆ. ಬಹು ದಿನಗಳಿಂದ ಮಾಲಾಶ್ರೀ ಯವರ ಚಿತ್ರಗಳು ತೆರೆ ಕಂಡಿರಲಿಲ್ಲ.

ಇಂದು ಬಹುದಿನಗಳ ನಂತರ ಮಾಲಾಶ್ರೀ ಯವರ ಮಾರಕಾಸ್ತ್ರ ಚಿತ್ರ ತೆರೆ ಕಾಣುತಿದ್ದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

ಚಿತ್ರದಲ್ಲಿ ಹರ್ಶಿಕಾ ಪೂಣಚ್ಚ, ಆನಂದ್ ಆರ್ಯ ಜೋಡಿಯಾಗಿ ಅಭಿನಯಿಸಿದ್ದಾರೆ. ಹಾಗೂ ಚಿತ್ರದಲ್ಲಿ ಉಗ್ರಂ ಮಂಜು, ಅಯ್ಯಪ್ಪ, ಮೈಕೋ ನಾಗರಾಜ್ ಹಾಗೂ ನಟರಾಜ್ ಅಭಿನಯಿಸಿದ್ದಾರೆ.

ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಗುರುಮೂರ್ತಿ ಸುನಾಮಿ. ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಕೋಮಲ ನಟರಾಜ್ ಹೊತ್ತಿದ್ದಾರೆ.

ಮಂಜುಕವಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ, ಧನುಕುಮಾರ್ ನೃತ್ಯ, N.M.ವಿಶ್ವರವರ ಸಂಕಲನ ಥ್ರಿಲ್ಲರ್ ಮಂಜು ಸಾಹಸ ಚಿತ್ರದಲ್ಲಿದೆ.