ಪ್ರೈಮ್ ವೀಡಿಯೋದಿಂದ ‘ಮೈತ್ರಿ-ಫೀಮೇಲ್ ಫಸ್ಟ್ ಕಲೆಕ್ಟಿವ್’ ಬಿಡುಗಡೆ
ಮಾಧ್ಯಮಲೋಕದಲ್ಲಿ ಮಹಿಳೆಯರು ಎದುರಿಸುವ ಸವಾಲಿನ ಕುರಿತು ಒಂದು ಚರ್ಚೆ
ಚರ್ಚೆಯಲ್ಲಿ ‘ಮಿಲನಾ’ ಖ್ಯಾತಿಯ ಪಾರ್ವತಿ ಸೇರಿದಂತೆ 9 ವೃತ್ತಿಪರ ಮಹಿಳೆಯರು
ಭಾರತದ ಅತ್ಯಂತ ಪ್ರೀತಿಪಾತ್ರವಾದ ಮತ್ತು ಅತೀ ಹೆಚ್ಚು ವೀಕ್ಷಣೆಯಾಗುವ ಓಟಿಟಿಯಾದ ಅಮೇಜಾನ್ ಪ್ರೈಮ್ ಇಂದು ಹೊಸ ಸೀರೀಸ್ ಬಿಡುಗಡೆ ಮಾಡಿದೆ. ‘ಮೈತ್ರಿ: ಫೀಮೇಲ್ ಫಸ್ಟ್ ಕಲೆಕ್ಟಿವ್’ ಎಂಬ ಮಹಿಳಾ ಪ್ರಧಾನವಾದ ಈ ಸೀರೀಸ್ನಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಒಂಬತ್ತು ಮಹಿಳೆಯರು ಒಂದೇ ವೇದಿಕೆಯಲ್ಲಿ, ಈ ಕ್ಷೇತ್ರದಲ್ಲಿ ತಾವು ಎದುರಿಸಿದ ಸವಾಲುಗಳು, ಪಡೆದ ಯಶಸ್ಸುಗಳು ಸೇರಿದಂತೆ ಹಲವು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಅಗತ್ಯವಿರುವವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನೂ ಅವರು ನೀಡಲಿದ್ದಾರೆ.
ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಅಪರ್ಣಾ ಪುರೋಹಿತ್ (ಮೈತ್ರಿ ಮತ್ತು ಇಂಡಿಯಾ ಒರಿಜಿನಲ್ಸ್ ಮುಖ್ಯಸ್ಥೆ), ಇಂಧು ವಿ.ಎಸ್ (ಬರಹಗಾರ್ತಿ ಮತ್ತು ನಿರ್ದೇಶಕಿ), ರತೀನಾ ಪ್ಲತ್ತೋತ್ತಿಲ್ (ಬರಹಗಾರ್ತಿ, ನಿರ್ದೇಶಕಿ ಮತ್ತು ನಿರ್ಮಾಪಕಿ), ಇಲಾಹೆ ಹಿಪ್ತೂಲ (ನಿರ್ಮಾಪಕಿ), ಪಾರ್ವತಿ ತಿರುವೋತ್ತು (ನಟಿ, ನಿರ್ದೇಶಕಿ) ರೀಮಾ ಕಲ್ಲಿಂಗಳ್ (ನಟಿ ಮತ್ತು ನಿರ್ದೇಶಕಿ, ಶ್ರೇಯಾ ದೇವ್ ದೂಬೆ (ನಿರ್ದೇಶಕಿ ಮತ್ತು ಛಾಯಾಗ್ರಾಹಕಿ) ಮತ್ತು ನೇಹಾ ಪಾರ್ತಿ ಮತಿಯಾನಿ (ಛಾಯಾಗ್ರಾಹಕಿ) ಈ ಸೀಸನ್ನಲ್ಲಿ ಭಾಗವಹಿಸಲಿದ್ದಾರೆ. ಅವರನ್ನು ಕೂರಿಸಿ ಮಾತನಾಡಿಸುವುದರ ಜತೆಗೆ, ಅವರಿಂದ ಹಲವು ಮುಖ್ಯ ವಿಷಯಗಳನ್ನು ಹೊರ ತೆಗೆಯಲಿದ್ದಾರೆ ಮೈತ್ರಿಯ ಕ್ಯೂರೇಟರ್ ಆದ ಸ್ಮೃತಿ ಕಿರಣ್.
ಈ ಸೀರೀಸ್ನಲ್ಲಿ ಮನರಂಜನಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಹೇಗೆ ಎಂಬುದರ ಜತೆಗೆ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದು ಮತ್ತು ಅವರಿಗೆ ಭಯಮುಕ್ತ ವಾತಾವರಣವನ್ನು ನಿರ್ಮಿಸುವುದು ಹೇಗೆ ಎಂಬ ವಿಷಯಗಳನ್ನು ಚರ್ಚಿಸಲಾಗುತ್ತದೆ.
ಈ ಸೀಸನ್ನಲ್ಲಿ ಭಾಗವಹಿಸಿರುವ ವೃತ್ತಿಪರ ಮಹಿಳೆಯರು, ಈ ವೃತ್ತಿಯಲ್ಲಿ ತಾವು ಎದುರಿಸುತ್ತಿರುವ ಸವಾಲುಗಳ ಜತೆಗೆ, ತಮ್ಮ ವೈಯಕ್ತಿಕ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ. ಕಷ್ಟದ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಮಾತನಾಡಿದ್ದಾರೆ. ಈ ಆಧುನಿಕ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುರುಷರಿಗೆ ಸಮನಾಗಿ ಮಹಿಳೆಯರು ಹೇಗೆ ಭಾಗವಹಿಸಬಹುದು ಎಂಬುದನ್ನು ಚರ್ಚಿಸಲಾಗಿದೆ.