Aditi Prabhudeva Birthday wishes. ನಾಯಕಿ ಅದಿತಿ ಪ್ರಭುದೇವ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ “ಮಾಫಿಯಾ” ಚಿತ್ರತಂಡ. .
ನೂತನ ಪೋಸ್ಟರ್ ಬಿಡುಗಡೆ ಮಾಡಿ ನಾಯಕಿ ಅದಿತಿ ಪ್ರಭುದೇವ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ “ಮಾಫಿಯಾ” ಚಿತ್ರತಂಡ. .
ಕನ್ನಡದ ಹುಡುಗಿ, ಜನಪ್ರಿಯ ನಟಿ ಅದಿತಿ ಪ್ರಭುದೇವ ಅವರಿಗೆ ಜನವರಿ 13 ಹುಟ್ಟುಹಬ್ಬದ ಸಂಭ್ರಮ. ಪ್ರಸ್ತುತ ಅದಿತಿ ಪ್ರಭುದೇವ ಅವರು ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ “ಮಾಫಿಯಾ” ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ತಮ್ಮ ಚಿತ್ರದ ನಾಯಕಿಯ ಹುಟ್ಟುಹಬ್ಬಕ್ಕೆ ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ “ಮಾಫಿಯಾ” ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸಿರುವ ಈ ಚಿತ್ರವನ್ನು ಲೋಹಿತ್ ಹೆಚ್ ನಿರ್ದೇಶಿಸಿದ್ದಾರೆ.