“Interval” Movie Review. “ಇಂಟರ್ ವೆಲ್” ಚಿತ್ರ ವಿಮರ್ಶೆ. ಅನ್ ಎಂಪ್ಲಾಯ್ ಮೆಂಟ್ ಅಬ್ಬೆಪಾರಿಗಳ ಪಾಡು
ಚಿತ್ರ ವಿಮರ್ಶೆ – ಇಂಟರ್ ವೆಲ್
Rating – 3/5.
ಚಿತ್ರ: ಇಂಟರ್ ವೆಲ್
ನಿರ್ಮಾಣ: ಸಖೀ, ಭರತ್
ನಿರ್ದೇಶನ: ಭರತ್
ಸಂಗೀತ : ವಿಕಾಸ್ ವಸಿಷ್ಠ
ಛಾಯಾಗ್ರಹಣ : ರಾಜ್ ಕಾಂತ್
ಸಂಕಲನ : ಶಶಿಧರ್
ತಾರಗಣ : ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರರಾವ್, ಸಹನ ಆರಾಧ್ಯ, ಸಮೀಕ್ಷ, ದಾನಂ ಮುಂತಾದವರು.
ಪ್ರತಿಯೊಂದು ಬದುಕಿಗೂ ಒಂದು ಟರ್ನಿಂಗ್ ಪಾಯಿಂಟ್ ಬರುತ್ತೆ. ಅದು ಯಾವಾಗ ಯಾವ ರೀತಿ ಬರುತ್ತೆ ಅನ್ನೋದೆ ನಿಗೂಡ.

ಇದೇ ರೀತಿ ಮೂವರು ತರಲೆ, ಉಡಾಫೆ, ಸುಳ್ಳು ಬೇಜವಾಬ್ದಾರಿಯನ್ನೇ ಬಂಡವಾಳ ಮಾಡಿಕೊಂಡ ಮೂವರು ಹುಡುಗರ ಕಥೆಯೇ ಇಂಟರ್ ವಲ್ ಚಿತ್ರದ ಕಥೆ.
ಈ ಮೂರು ಜನ ಹುಡುಗರು
ಗಣೇಶ್ S. ಗಣೇಶ್ U. ಗಣೇಶ್ T. ಒಂದೇ ಶಾಲೆಯ, ಒಂದೇ ಬೆಂಚಿನ ತರಲೆ ಹುಡುಗರು
ಚಿಕ್ಕಂದಿನಿಂದ ಸ್ಕೂಲಿನಿಂದಲೇ ಓದು ತಲೆಗತ್ತದೇ ಮನೆಯವರ ಬಲವಂತಕ್ಕೆ ಪೆನ್ನು ಪುಸ್ತಕ ಕೈಯಲ್ಲಿ ಹಿಡಿದು ಸ್ಕೂಲಿನ ಮೆಟ್ಟಿಲು ಹತ್ತುತ್ತಾರೆ, ಹಾಗೂ ಹೀಗೂ ಇಂಜಿನಿಯರ್ ವಿಧ್ಯಾರ್ಥಿಗಳಾಗಿ ಕಾಲೇಜು ಮೆಟ್ಟಿಲು ಹತ್ತುತ್ತಾರೆ. ಏನು ಓದಲು ಬರದ ಇವರು ಇಂಜಿನಿಯರಿಂಗ್ ಸ್ಟೂಡೆಂಟ್ ಗಳಾಗುತ್ತಾರೆ ಅನ್ನೋದೆ ಹಾಸ್ಯಭರಿತವಾಗಿದೆ.

ತಮ್ಮ ಹಳ್ಳಿಯ ಜನರನ್ನು ಯಾಮಾರಿಸುತ್ತಾ, ಹೆತ್ತವರನ್ನು ಗೋಳುಹೊಯ್ದು ಕೊಳ್ಳುತ್ತಾ ಕುಡಿತ, ಮೊಜು ಮಸ್ತಿ ಮಾಡಿಕೊಂಡಿದ್ದ ನಾಯಕನಿಗೆ ಯುವತಿಯರಿಬ್ಬರ ಜೊತೆ ನಡೆಯುವ ಪ್ರೇಮಾಯಣದ ಎರಡು ದುರಂತವೇ ಇಂಟರ್ ವೆಲ್ ಚಿತ್ರಕ್ಕೆ ಎರಡು ಬಾರಿ ಟರ್ನಿಂಗ್ ಪಾಯಿಂಟ್. ಒಂದು ಸಿನಿಮಾದ ರಿಯಲ್ ಇಂಟರ್ ವೆಲ್ ಹಾಗೂ ಕ್ಲೈಮ್ಯಾಕ್ಸ್ ಎರಡನ್ನು ನಿರ್ದೇಶಕ ಭರತ್ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಒಂದು ಹಳ್ಳಿಯಲ್ಲಿ ಇಂದಿನ ಕೆಲವು ಸೋಮಾರಿ ಯುವ ಜನತೆಯ ಸುತ್ತ ನಡೆಯುವ ಒಂದಷ್ಟು ಹಾಸ್ಯಘಟನೆಗಳನ್ನು ಇಟ್ಟುಕೊಂಡು, ಯೂಥ್ ಫುಲ್ ಮನಸ್ಸಿನ ಗೊಂದಲಗಳನ್ನು, ಆಸೆಗಳನ್ನು,ಬೇಜವಾಬ್ಧಾರಿಯನ್ನು ಬೇಸ್ ಮಾಡಿಕೊಂಡು ಸಖೀ ಯವರು ಕಥೆ ಎಣೆದಿದ್ದಾರೆ. ಊರಿನಲ್ಲಿ ಚುನಾವಣೆ, ಗಣೇಶನ ಹಬ್ಬ, ಬಾರು, ಕುಡಿತ, ಸಾಲ, ಸುಳ್ಳು, ತುಂಟಾಟ, ಪ್ರೀತಿ, ಪ್ರೇಮ, ವಿರಹ, ಬ್ರೇಕಪ್ ಎಲ್ಲವನ್ನು ನಿರ್ದೇಶಕರು ನೈಜವಾಗಿ ತೋರಿಸಿದ್ದಾರೆ.

ಬೆಂಗಳೂರಿನ ಕಾಂಕ್ರೀಟ್ ಕಾಡು ಹಾಗೂ ಶಿವಮೊಗ್ಗ, ತೀರ್ಥಹಳ್ಳಿ ಸುತ್ತಮುತ್ತಲ ಸುಂದರ ಪ್ರಕೃತಿಯಲ್ಲಿ ರಾಜ್ ಕಾಂತ್ ರವರ ಕ್ಯಾಮರಾ ಕೈಚಳಕದಲ್ಲಿ ಚನ್ನಾಗಿ ಚಿತ್ರೀಕರಿಸಿದ್ದಾರೆ.
ಈ ಚಿತ್ರದಲ್ಲಿ ಶಶಿರಾಜ್ (ಗಣೇಶ್ S.) ಸುಕೇಶ್ ಸುಖಿ( ಗಣೇಶ್ T. ) ಹಾಗೂ ಪ್ರಜ್ವಲ್ ಕುಮಾರ್ (ಗಣೇಶ್ U. ) ಈ ಮೂವರೂ ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ಚಿತ್ರದ ಕಥೆಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೆ ಕಥೆಯ ಭಾರವನ್ನು ಸಮನಾಗಿ ಹೆಗಲಮೇಲೆ ಹೊತ್ತಿದ್ದಾರೆ ಜೊತೆಗೆ ಸಹಜವಾಗಿ ಅಭಿನಯಿಸುವುದರ ಮೂಲಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಶಶಿರಾಜ್ ಗೆ ನಾಯಕಿಯರಾಗಿ
ಚರಿತ್ರ ರಾವ್, ಸಹನ ಆರಾಧ್ಯ, ನಿಶಾ ಪಾತ್ರದಲ್ಲಿ ಹಳ್ಳಿಯ ಹುಡುಗಿಯಾಗಿ ಚಿಕ್ಕಂದಿನಿಂದ ನಾಯಕನನ್ನು ಪ್ರೀತಿಸುವ ಹುಡುಗಿಯಾಗಿ ನಟಿಸಿದ್ದಾರೆ. ಹಾಗೂ ಸಮೀಕ್ಷ, ದಾನಂ ಸಿಹಿ ಪಾತ್ರದಲ್ಲಿ ಸಿಲಿಕಾನ್ ಸಿಟಿಯ ಬೆಡಗಿಯಾಗಿ ಬಣ್ಣ ಹಚ್ಚಿಕೊಂಡಿದ್ದಾರೆ.

ರಂಗನಾಥ್ ಶಿವಮೊಗ್ಗ ಹಾಗೂ ಧಾಬಂ ಶಿವಮೊಗ್ಗ ಮುಂತಾದವರು ತಮ್ಮ ಪಾತ್ರಗಳಿಗೆ ನ್ಯಾಯ ನೀಡಿದ್ದಾರೆ.
ವಿಕಾಸ್ ವಸಿಷ್ಠ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿಬಂದಿದ್ದು, ವಿಜಯ್ ಪ್ರಕಾಶ್, ವಾಣಿ ಹರಿಕೃಷ್ಣ, ಚಂದನ್ ಶಟ್ಟಿ, ಸುನಿಧಿ ಗಣೇಶ್, ಆಲ್ ಓಕೆ ಅಲೋಕ್ ಚಿತ್ರದ ಹಾಡುಗಳಿಗೆ ತಮ್ಮ ಕಂಠಸಿರಿಯಿಂದ ಜೀವ ತುಂಬಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ ಸುಕೇಶ್ ಅವರು ನಿಭಾಯಿಸಿದ್ದಾರೆ.
ಚಂದ್ರು ಬಂಡೆ ಅವರು ತಮ್ಮ ಸಾಹಸ ನಿರ್ದೇಶನದಲ್ಲಿ ಫೈಟಿಂಗ್ ದೃಶ್ಯಗಳನ್ನು ಅದರಲ್ಲೂ ಕೆಸರಿನ ಗದ್ದೆಯಲ್ಲಿ ನೈಜವಾಗಿ ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ.

ಶಶಿಧರ್ ರವರು ಚಿತ್ರಕ್ಕೆ ಕತ್ತರಿ ಆಡಿಸಿದ್ದಾರೆ.
ಭರತವಷ್೯ ಪಿಚ್ಚರ್ಸ್ ಅಡಿ, ಸುಖೀ ಹಾಗೂ ಭರತ್ ಸೇರಿ ನಿರ್ಮಿಸಿರುವ ಹಾಗೂ ಭರತ್ ನಿರ್ದೇಶಿಸಿರುವ ಚಿತ್ರ ‘ಇಂಟರ್ ವಲ್’ ಈ ವಾರ ತೆರೆ ಕಂಡಿದೆ.
ಬದುಕಿನಲ್ಲಿ ಸುಳ್ಳು, ಸೋಮಾರಿತನ, ಮೋಸ, ವಂಚನೆ, ದುರಾಸೆಯನ್ನೇ ಬಂಡವಾಳ ಮಾಡಿಕೊಂಡರೆ ಬದುಕಿನ ಇಂಟರ್ ವಲ್ ಏನೆಲ್ಲಾ ಪಾಠ ಕಲಿಸುತ್ತದೆ ಎಂದು “ಇಂಟರ್ ವೆಲ್” ಚಿತ್ರದ ಕ್ಲೈಮ್ಯಾಕ್ಸ್ ಪಾಠ ಹೇಳುತ್ತದೆ.
ಹೊಸಬರ ಚಿತ್ರ ಹೊಸತನದಿಂದ ಕೂಡಿದೆ.