Forest movie review “ಫಾರೆಸ್ಟ್ ಚಿತ್ರ ವಿಮರ್ಶೆ” ನಿಧಿಯ ಹಿಂದೆ ಬಿದ್ದ ಐದು ಜನರ ಹಾಸ್ಯಭರಿತ ರೋಚಕ ಕಥೆ.

ಚಿತ್ರ ವಿಮರ್ಶೆ

ಚಿತ್ರ : ಫಾರೆಸ್ಟ್
ನಿರ್ದೇಶಕ : ಚಂದ್ರ ಮೋಹನ್
ನಿರ್ಮಾಪಕ :  ಕಾಂತರಾಜ್
ಸಂಗೀತ : ಧರ್ಮ ವಿಶ್
ಛಾಯಾಗ್ರಹಣ : ವಿ.ರವಿ

Rating – 3.5/5

ತಾರಾಗಣ : ಅವಿನಾಶ್, ರಂಗಾಯಣ ರಘು, ಚಿಕ್ಕಣ್ಣ , ಅನೀಶ್ ತೇಜೇಶ್ವರ್, ಗುರುನಂದನ್,  ಅರ್ಚನ  ಕೊಟ್ಟಿಗೆ , ಶರಣ್ಯ ಶೆಟ್ಟಿ, ಸೂರಜ್ ಪಾಪ್ಸ್ ಮುಂತಾದವರು.

ಒಂದು ಜಮೀನಿಗೆ ಅಡ್ಡಲಾಗಿ ಹಾಕಿದ ಬೇಲಿಯಿಂದ ಶುರುವಾದ ಕಥೆ, ಮುಂದೆ ದಟ್ಟ ಅರಣ್ಯದಲ್ಲಿ ಎದೆ ಝೆಲ್ಲೆನ್ನಿಸುವ ದೃಶ್ಯಗಳೊಂದಿಗೆ, ಹಾಸ್ಯದ ಕಚಗುಳಿ ಇಡುತ್ತಲೇ ಗಂಭೀರ ಸ್ವರೂಪ ತಾಳುತ್ತದೆ.

ಇತ್ತೀಚೆಗೆ ಪರಿಪೂರ್ಣ ಹಾಸ್ಯ ಚಿತ್ರ ಬಂದಿರಲಿಲ್ಲ.
ಈ ವರ್ಷದ ಎರಡನೇ ಕಾಮಿಡಿ,ಹಾರರ್, ಥ್ರಿಲ್ಲರ್ ಸಿನಿಮಾ ಫಾರೆಸ್ಟ್  ಎನ್ನಬಹುದು.

ನಿರ್ದೇಶಕ ಚಂದ್ರ ಮೋಹನ್ ಈಗಾಗಲೇ ಕೆಲವು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಆದರೆ ಈ ಚಿತ್ರ ಅವರ ಸಿನಿಮಾ ಪಯಣದ ಮೈಲಿಗಲ್ಲಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಇದೊಂದು ನಿಧಿಯ ಹಿಂದೆ ಬಿದ್ದ ಐದು ಜನರ ಹಾಸ್ಯಭರಿತ ರೋಚಕ ಕಥೆ.
ರಂಗಾಯಣ ರಘು, ಚಿಕ್ಕಣ್ಣ, ಅನೀಶ್, ರಘುನಂದನ್ ಹಾಗೂ ಅರ್ಚನಾ ಕೊಟ್ಟಿಗೆ ಈ ಐದು ಜನರು ದಟ್ಟ ಅರಣ್ಯದೊಳಗೆ ನಿಧಿ ಹುಡುಕುವ ಬವಣೆ ಪ್ರೇಕ್ಷಕನಿಗೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತದೆ.
ರಂಗಾಯಣ ರಘು ಮೊದಲಬಾರಿಗೆ ಒಬ್ಬ ಮಂತ್ರವಾದಿಯಾಗಿ ಬಾಳೆ ಪಟ್ಟಿ ಗೋಪಾಲಸ್ವಾಮಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಹಾಗೆ ಕಿವುಡ ಬಡ್ಡಿ ವ್ಯವಹಾರ ಮಾಡುವ ಕುಮಾರನ ಪಾತ್ರಕ್ಕೆ ಬಣ್ಣ ಹಚ್ಚಿರೋದು ಚಿಕ್ಕಣ್ಣ.

ಅನೀಶ್ ಈಗಾಗಲೇ ಹಿಟ್ ಸಿನಿಮಾಗಳನ್ನು ನೀಡಿ ನಟನೆಯ ಜೊತೆಗೆ ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ತನ್ನದೇ ಛಾಪನ್ನು ಒತ್ತಿರುವ ಅನೀಶ್ ತೇಜಸ್ವರ್ (ಸತೀಶನ ಪಾತ್ರದಲ್ಲಿ, ಹಾಗೂ ಫಸ್ಟ್‌ ರಾಂಕ್ ರಾಜು ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಗುರು ನಂದನ್ ಮೊದಲ ಪ್ರಯತ್ನದಲ್ಲೇ ಯಶಸ್ವಿ ಚಿತ್ರವನ್ನು ನೀಡಿ ಸೈ ಎನಿಸಿಕೊಂಡವರು. ಈಗ ಮತ್ತೊಂದು ಯಶಸ್ವಿ ಚಿತ್ರದ ಭಾಗವಾಗಿದ್ದಾರೆ.
ಪ್ರೇಕ್ಷಕರಿಗೆ ತೆರೆ ಮೇಲೆ ನೋಡಿದ ಕೂಡಲೇ ತಮ್ಮ ಮನೆಯ ಮಗಳು ಎಂಬಂತೆ ಭಾವನೆ ಮೂಡುವ ನಟಿ ಅರ್ಚನ ಕೊಟ್ಟಿಗೆ. ಅರ್ಚನಾ ಕೂಡ ಈ ಗ್ಯಾಂಗ್ ನಲ್ಲಿ ಒಬ್ಬಳು.
ಈ ಐದು ಜನ ಒಟ್ಟಿಗೆ ಸೇರಿ ಕಾಡಿನೊಳಗೆ ಚಿನ್ನದ ನಿಧಿಯನ್ನು ಹುಡುಕಿಕೊಂಡು ಹೋಗುತ್ತಾರೆ. ಕಾಡಿನೊಳಗೆ ಕುಖ್ಯಾತ ಹಂತಕನ ಆತ್ಮದ ಕೈಗೆ ಸಿಲುಕಿ ಕಷ್ಟ ಪಡುವ ಈ ಐದು ಜನ ಈ ಎಲ್ಲಾ ಸಮಸ್ಯೆಗಳನ್ನು ಹೆದರಿಸಿ ನಿಧಿಯನ್ನು ಹೊರಗೆ ತರುತ್ತಾರಾ… ಎನ್ನುವುದೇ ಫಾರೆಸ್ಟ್ ಚಿತ್ರ
ಚಿತ್ರದ ಸುಂದರ ದೃಶ್ಯಗಳಂತು ಮನ ಮೋಹಕವಾಗಿ ತೋರಿಸಿದ್ದಾರೆ ಛಾಯಾಗ್ರಾಹಕ ವಿ. ರವಿ.
ಹಾಗೂ ಧರ್ಮ ವಿಶ್ ಚಿತ್ರದ ಪ್ರತೀ ಹೆಜ್ಜೆಗೂ ಸಂಗೀತದ ಮೂಲಕ ತಮ್ಮದೇ ಆದ ಛಾಪನ್ನು ಒತ್ತಿದ್ದರೆ.
ಇನ್ನು ನಿರ್ಮಾಪಕ ಕಾಂತರಾಜು ರವರ ಬಗ್ಗೆ ಹೇಳಲೇ ಬೇಕು. ಅವರಿಗೆ ಹಣಕ್ಕಿಂತ ಒಂದು ಒಳ್ಳೆಯ ಚಿತ್ರವನ್ನು ಪ್ರೇಕ್ಷಕರಿಗೆ ನೀಡಿದ್ದೇನೆ ಎನ್ನುವ ಖುಷಿ ಇವರಿಗಿದೆ. ಹತ್ತಾರು ಯಶಸ್ವಿ ಚಿತ್ರಗಳನ್ನು ನಿರ್ಮಿಸುವ ಕನಸ್ಸನ್ನು ಹೊತ್ತು ಬಂದಿರುವ ಇವರು ಮೊದಲ ಬಾರಿಗೆ ಪ್ರೇಕ್ಷಕರ ಮನಸ್ಸನ್ನು ತಮ್ಮ ಚಿತ್ರದ ಮೂಲಕ ಗೆದ್ದಿದ್ದಾರೆ ಎನ್ನಬಹುದು.

ನಟಿ ಅರ್ಚನಾ ಕೊಟ್ಟಿಗೆ ಸಿನಿಮಾದಲ್ಲಿ ಹೀರೋ ರೇಂಜಿಗೆ ರಿಸ್ಕ್ ದೃಶ್ಯಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. .

ವಿಶೇಷ ಪಾತ್ರದಲ್ಲಿ ಬರುವ ಶರಣ್ಯ ಶೆಟ್ಟಿ ಕೂಡ ಮಿಂಚಿ ಮಾಯವಾಗಿದ್ದಾರೆ. ಖಳನಾಯಕನಾಗಿ ಕಾಣಿಸಿಕೊಂಡಿರುವ ಸೂರಜ್ ಪಾಪ್ಸ್  ಅವರ ನೋಟವೇ ಭಯಾನಕವಾಗಿದೆ. ಉಳಿದಂತೆ ಪ್ರಕಾಶ್ ತುಮ್ಮಿ ನಾಡು ಹಾಗೂ ದೀಪಕ್ ರೈ ತಮ್ಮ ಪಾತ್ರಗಳಿಗೆ ನ್ಯಾಯವನ್ನು ಒದಗಿಸಿದ್ದಾರೆ.

ಒಟ್ಟಾರೆ ಸಸ್ಪೆನ್ಸ್ ಹಾಗೂ ಅಡ್ವೆಂಚರಸ್ ಚಿತ್ರ ಪ್ರೇಮಿಗಳನ್ನ ಸೆಳೆಯುವ ಈ ಚಿತ್ರವನ್ನು ಎಲ್ಲರೂ ಸಿನಿಮಾ ನೋಡುವಂತಿದೆ.
ಕಾಡಿನಲ್ಲಿರುವ ಚಿನ್ನ ಯಾರದ್ದು, ಆ ಆತ್ಮ ಯಾರು, ಆತ್ಮವನ್ನು ಮಾಟ, ಮಂತ್ರದಿಂದ ಮಣಿಸಿ ನಾಡಿಗೆ ನಿಧಿಯನ್ನು ತರುತ್ತಾರ ಈ ಎಲ್ಲಾ ಗೊಂದಲಗಳಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಬೇಕಾಗುತ್ತದೆ.
ಒಂದು ಒಳ್ಳೆಯ ಪ್ರಯತ್ನದ ಚಿತ್ರವನ್ನು ಗೆಲ್ಲಿಸಬೇಕಾಗುತ್ತದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor