FIR 6to6 movie release on 28 February. ಸಸ್ಪೆನ್ಸ್ ಥ್ರಿಲ್ಲರ್ ‘ಎಪ್.ಐ.ಆರ್.6 to 6’ ಈವಾರ ತೆರೆಗೆ
ಸಸ್ಪೆನ್ಸ್ ಥ್ರಿಲ್ಲರ್ ‘ಎಪ್.ಐ.ಆರ್.
6 to 6′ ಈವಾರ ತೆರೆಗೆ

ಕೆ.ವಿ.ರಮಣರಾಜ್ ಅವರ ನಿರ್ದೇಶನದ, ನಟ ವಿಜಯ ರಾಘವೇಂದ್ರ ನಸಯಕನಾಗಿ ಅಭಿನಯಿಸಿರುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ 'ಎಫ್.ಐ.ಆರ್. 6 to 6' ಇದೇ ತಿಂಗಳ 28ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ ಪಟ್ಟಾಭಿಷೇಕೆಂಬ ಎಂಬ ಚಿತ್ರವನ್ನು ನಿರ್ಮಿಸಿದ್ದ ಭಾಗ್ಯರಮೇಶ್ ಅವರ ನಿರ್ಮಾಣದ ಈ ಚಿತ್ರಕ್ಕೆ ಓಂಜಿ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.
ಇತ್ತೀಚೆಗೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಚಿತ್ರತಂಡ ಬಿಡುಗಡೆ ಸಿದ್ದತೆಗಳ ಕುರಿತಂತೆ ಮಾಹಿತಿ ಹಂಚಿಕೊಂಡಿತು.
ನಿರ್ದೇಶಕ ರಮಣರಾಜ್ ಮಾತನಾಡುತ್ತ ಇದೇ ಶುಕ್ರವಾರ ನಮ್ಮ ಚಿತ್ರ ಎಪ್.ಐ.ಆರ್. 6 to 6 ರಿಲೀಸಾಗುತ್ತಿದೆ. ಒಂದೇ ರಾತ್ರಿಯಲ್ಲಿ ನಡೆಯುವ ಆಕ್ಷನ್, ಥ್ರಿಲ್ಲಿಂಗ್ ಕಥೆಯಿದು. ಯುವಕನೊಬ್ಬ ಒಂದು ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡು ನಂತರ ಆ ಸಂದರ್ಭವನ್ನು ಹೇಗೆ ಫೇಸ್ ಮಾಡುತ್ತಾನೆ ಅನ್ನೋದನ್ನು ಸಂಜೆ ಆರರಿಂದ ಬೆಳಗಿನ ಜಾವ ಆರರವರೆಗೆ ನಡೆಯುವ ಕಥೆಯ ಮೂಲಕ ಥ್ರಿಲ್ಲಿಂಗ್ ಆಗಿ ಹೇಳಲು ಪ್ರಯತ್ನಿಸಿದ್ದೇವೆ.

35 ದಿನ ಪೂರ್ತಿ ರಾತ್ರಿ ವೇಳೆಯಲ್ಲೇ ಶೂಟ್ ಮಾಡಿದ್ದೇವೆ ಎಂದರು. ನಿರ್ಮಾಪಕಿ ಭಾಗ್ಯ ರಮೇಶ್ ಮಾತನಾಡುತ್ತ ಪಟ್ಟಾಭಿಷೇಕ ನಂತರ ನಮ್ಮ ಬ್ಯಾನರ್ ನ ಎರಡನೇ ಚಿತ್ರವಿದು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ನೋಡಿ ಹರಸಿ ಎಂದು ಕೇಳಿಕೊಂಡರು.

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡುತ್ತ ಈ ಚಿತ್ರದಲ್ಲಿ ನಾನು ೨ ಆಕ್ಷನ್ ಗಳನ್ನು ಕಂಪೋಜ್ ಮಾಡಿದ್ದು, ಎರಡನ್ನೂ ರಾತ್ರಿ ವೇಳೆಯಲ್ಲೇ ಮಾಡಿದ್ದೇವೆ. ರಾಘು ಅವರ ಡೆಡಿಕೇಶನ್, ಆಕ್ಷನ್ ತುಂಬಾ ಚೆನ್ನಾಗಿರುತ್ತದೆ.
