director Association Mahasabha meeting on June 23rd. ನಿರ್ದೇಶಕರ ಸಂಘದ ಮಹಾಸಭೆ ಜೂನ್ 23ರಂದು ನೆರವೇರಲಿದೆ.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ “ಮಹಾಸಭೆ” ಜೂನ್ 23ರಂದು ಬೆಳಿಗ್ಗೆ 10.30ಕ್ಕೆ ನೆರವೇರಲಿದೆ.
ದಿವಂಗತ ಪುಟ್ಟಣ್ಣ ಕಣಗಾಲ್ ರವರು ಕಟ್ಟಿದ ನಿರ್ದೇಶಕರ ಸಂಘ ಈಗಾಗಲೇ ಬರೋಬ್ಬರಿ 40ವರ್ಷಗಳನ್ನು ಪೂರೈಸಿದೆ. ಹಲವಾರು ಏಳು ಬೀಳುಗಳೊಂದಿಗೆ, ಹಲವಾರು ಅಧ್ಯಕ್ಷರು ಈ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದು. ಈಗ ಪತ್ರಕರ್ತ ಹಾಗೂ ನಿರ್ದೇಶಕ ಎನ್. ಆರ್. ಕೆ. ವಿಶ್ವನಾಥ್ ಈ ಸಂಘಕ್ಕೆ ಅಧ್ಯಕ್ಷರಾಗಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತಿದ್ದು. ಅವರ ಸಹವರ್ತಿಗಳೊಂದಿಗೆ ಕೂಡಿ ಹರಿದು ಹಂಚಿ ಹೋಗಿದ್ದ ಸಂಘವನ್ನು ಮತ್ತೆ ಒಗ್ಗೂಡಿಸಲು ಇವರ ತಂಡ ಹಗಲಿರುಳು ಸೇವಕರಂತೆ ಶ್ರಮ ವಹಿಸುತ್ತಿದೆ. ಈಗ ಇದೇ ಜೂನ್ 23ರಂದು ಸಂಘದ ಮಹಾಸಭೆಯನ್ನು ಕರೆದಿದ್ದಾರೆ. ಅವರ ಮಾತುಗಳಲ್ಲಿ ಕೇಳಿ.
ಧೀಮಂತ ನಿರ್ದೇಶಕರಾದ ಶ್ರೀಯುತ ಪುಟ್ಟಣ್ಣ ಕಣಗಾಲರು ಕಟ್ಠಿರುವ ಸಂಸ್ಥೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ. ಅದನ್ನು ಉಳಿಸಿ ಬೆಳೆಸುವಲ್ಲಿ ನಮ್ಮೆಲ್ಲರ ಪಾತ್ರ ಮುಖ್ಯವಾಗಿರಲಿ..
ಬಿಡುವು ಮಾಡಿಕೊಂಡು ಬನ್ನಿ.. ಸಂಘದ ಮತ್ತು ಸದಸ್ಯರ ಏಳಿಗೆಗಾಗಿ ದಿಟ್ಟವಾದ ನಿರ್ಧಾರ ತೆಗೆದುಕೊಳ್ಳೋಣ.. ನಿರ್ದೇಶಕನೇ ಸಾರ್ವಭೌಮ ಎನ್ನುವುದನ್ನ ನಿರೂಪಿಸೋಣ..
ಯಾವತ್ತಿಗೂ ನಮ್ಮ ಒಗ್ಗಟ್ಟನ್ನು ಮುರಿಯಲಾರೆವು ಎಂಬುದನ್ನು ಸಾಬೀತು ಪಡಿಸೋಣ..
ದಯವಿಟ್ಟು ಬನ್ನಿ.. ಮರೆಯದೆ ಬನ್ನಿ.🙏🙏
ತಮ್ಮ ಆಗಮನದ ನಿರೀಕ್ಷೆಯಲ್ಲಿ..
ನಿಮಗಾಗಿ ನಿಮ್ಮ ಸೇವಕರಾದ ನಾವು ಕಾಯುತ್ತಿರುತ್ತೇವೆ..🙏🙏 ಅಧ್ಯಕ್ಷರು, ಉಪಾಧ್ಯಕ್ಷರು , ಕಾರ್ಯದರ್ಶಿಗಳು, ಉಪ ಕಾರ್ಯದರ್ಶಿ, ಖಜಾಂಚಿ, ಪದಾಧಿಕಾರಿಗಳು, ಹಾಗೂ ಕಾರ್ಯಕಾರಿ ಸಮಿತಿಯವರು.