Dhairyam Sarvatra sadhana Movie Reviw ಜಾತೀಯತೆಯ ಹಿಂದಿನ ಕ್ರೌರ್ಯಕ್ಕೆ ಧೈರ್ಯಂ ಸರ್ವತ್ರ ಸಾಧನಂ.

ಚಿತ್ರ: ಧೈರ್ಯಂ ಸರ್ವತ್ರ ಸಾಧನಂ
ನಿರ್ದೇಶಕ: A.R. ಸಾಯಿ ರಾಮ್
ನಿರ್ಮಾಣ: ಆನಂದ ಬಾಬು
ತಾರಾಗಣ: ವಿವಾನ್, ಅನುಷಾ ರೈ, ಯಶ್ ಶೆಟ್ಟಿ ಮುಂತಾದವರು
ರೇಟಿಂಗ್:- 3/5

ಧೈರ್ಯ ಅನ್ನೋದು ಇದ್ದರೆ ಜೀವನದಲ್ಲಿ ಏನೇ ಕಷ್ಟ ಬಂದರು ಎದುರಿಸ ಬಹುದು ಎನ್ನುವ ಸಾರಾಂಶವೇ “ಧೈರ್ಯಂ ಸರ್ವತ್ರ ಸಾಧನಂ” ಚಿತ್ರ.

ಮೇಲ್ಜಾತಿ- ಕೆಳಜಾತಿಯ ಸಂಘರ್ಷ ಗಳ ಬಗ್ಗೆ ಹಲವಾರುಚಿತ್ರಗಳು ಬಂದಿವೆ. ಅದರ ವಿರುದ್ಧವಾಗಿ ಹೋರಾಡಿ ಅಸೃಷ್ಯತೆಯ ಪಿಡುಗನ್ನು ಹೋಗಲಾಡಿಸಲು ತಮ್ಮ ಬದುಕನ್ನೇ ಮುಡುಪಾಗಿಟ್ಟ ಅಂಬೇಡ್ಕರ್ ರವರ ಬದುಕನ್ನು ಆದರ್ಶವಾಗಿ ತೆಗೆದು ಕೊಂಡು ಸಮಾಜಕ್ಕಾಗಿ ದುಡಿಯುವ ಯಾವ ನಾಯಕರು ಇಂದು ಕಾಣುವುದಿಲ್ಲ. ಆದರೆ ಈ ಚಿತ್ರದಲ್ಲಿ ಇಷ್ಟು ವರ್ಷವಾದರು ಶ್ರೀಮಂತ ಹಾಗೂ ಬಡವರ ನಡುವಿನ ಸಂಘರ್ಷ, ಗುಲಾಮ ಗಿರಿಯನ್ನು ಬಿಂಬಿಸುವ ಕಥೆ ಮೇಳೇಯಿಸಿದೆ ಎನ್ನಬಹುದು. ಇವುಗಳನ್ನು ಮೆಟ್ಟಿ ನಿಲ್ಲುವ ಹಠ ತೊಟ್ಟ ಸಾಮಾನ್ಯ ಯುವಕ ಶ್ರೀಮಂತರ ದರ್ಪದ ವಿರುದ್ಧ ಗೆಲ್ಲುತ್ತಾನಾ ಎನ್ನುವುದು ಚಿತ್ರದ ಕಥೆಯಾಗಿದೆ.

ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಬಂದೂಕು. ಬಂದೂಕೂ ಇಲ್ಲಿ ಸ್ವಾಭಿಮಾನದ ಸಂಕೇತ, ಬಂದೂಕು ಆಕ್ರೋಷದ ಕಿಡಿ, ಅವಮಾನದ ದಳ್ಳುರಿಯೊಂದಿಗೆ ಸದ್ದು ಮಾಡಿದೆ.

ಇಲ್ಲಿ ಕಥಾನಾಯಕನಿಗೆ ತಂದೆ ಬಂದೂಕನ್ನು ಕಳೆದುಕೊಳ್ಳಬೇಡ ಹೇಳುತ್ತಾನೆ, ತಾಯಿ ಸರ್ಕಾರಿ ಕೆಲಸ ಮಾಡು ಎಂದು ಸಲಹೆ ನೀಡುತ್ತಾಳೆ. ಸಮಾಜದಲ್ಲಿ ತನ್ನ ಸುತ್ತ ನಡೆಯುವ ಅವಘಡಗಳಿಂದ ತಾಯಿಯ ಕನಸು ಕಮರಿ ಹೋಗುತ್ತದೆ ಎನ್ನುವ ಸಂದರ್ಭದಲ್ಲಿ ಯುವಕನ ನೆರವಿಗೆ ಬರುವುದು ಧೈರ್ಯ ಮಾತ್ರ. ಧೈರ್ಯ ಯುವಕನ ಕೈ ಹೇಗೆ ಹಿಡಿಯುತ್ತದೆ ಬಂದೂಕು ಹೇಗೆ ಅವನ ಜೀವನದಲ್ಲಿ ಪ್ರಮುಖವಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.

ಚಿತ್ರದಲ್ಲಿ ಆರ್ಯ ಮತ್ತು ದ್ರಾವಿಡ ಎನ್ನುವ ಎರಡು ಪಾತ್ರಗಳ ಮೂಲಕ ಸಂಘರ್ಷ ಮತ್ತು ಸಿದ್ಧಾಂತಗಳನ್ನು ಚಿತ್ರದಲ್ಲಿ ಹೆಣೆಯುವ ಯತ್ನವನ್ನು ಮಾಡಲಾಗಿದೆ. ದ್ರಾವಿಡ ನಾಯಕನಾದರೆ ಆರ್ಯನನ್ನು ಖಳ ನಾಯಕ ಎನ್ನುವಂತೆ ಬಿಂಬಿಸಲಾಗಿದೆ. ಮಹಾನ್ ಪುರುಷರ ಸಿದ್ಧಾಂತಗಳನ್ನು ಪಾತ್ರದ ಮೂಲಕ ತೋರಿಸುವ ಯತ್ನವನ್ನು ಮಾಡಲಾಗಿದೆ.

ನಿರ್ದೇಶಕರು ಚಿತ್ರದಲ್ಲಿ ಸೂಕ್ಷ್ಮವಾದ ವಿಚಾರಗಳನ್ನು ಜೊತೆಗೆ ಹಲವು ಗಹನ ವಿಷಯಗಳನ್ನು ಹೇಳುವ ಯತ್ನ ಮಾಡಿದ್ದಾರೆ. ಆದರೆ ಇಂದಿನ ಕಾಲಘಟ್ಟಕ್ಕೆ ಈ ಕಥೆ ಹಳೆಯದೆನಿಸಿದರೂ ನಿರ್ದೇಶಕರು ಹೊಸದೇನೋ ಹೇಳುವ ಪ್ರಯತ್ನ ಮಾಡಿದ್ದಾರೆ.

ಚಿತ್ರದ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ಜೂಡ್ ಸ್ಯಾಂಡಿ ಸಂಗೀತ ಚಿತ್ರಕ್ಕೆ ಮೆರಗು ನೀಡಿದೆ.


Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor