yongman ಯಂಗ್ ಮ್ಯಾನ್” ಚಿತ್ರದಲ್ಲಿ ದೇಶಪ್ರೇಮದ ಕಥೆ .

“ಯಂಗ್ ಮ್ಯಾನ್” ಚಿತ್ರದಲ್ಲಿ ದೇಶಪ್ರೇಮದ ಕಥೆ .

ಕನ್ನಡದಲ್ಲಿ ನಿರ್ಮಾಣವಾಯಿತು ಮತ್ತೊಂದು ಸಿಂಗಲ್ ಟೇಕ್ ಚಿತ್ರ .

ಕನ್ನಡ ಚಿತ್ರರಂಗದಲ್ಲಿ ಹೊಸಪ್ರಯತ್ನಗಳು ನಡೆಯುತ್ತಿರುತ್ತದೆ. ಹೊಸತಂಡದಿಂದ 2 ಗಂಟೆ 38 ನಿಮಿಷಗಳ ಅವಧಿಯ “ಯಂಗ್ ಮ್ಯಾನ್” ಎಂಬ ಚಿತ್ರ ನಿರ್ಮಾಣವಾಗಿದೆ. ಸಿಂಗಲ್ ಟೇಕ್ ನಲ್ಲಿ ಚಿತ್ರೀಕರಣವಾಗಿರುವುದು ಈ ಚಿತ್ರದ ವಿಶೇಷ. ಈ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಾನು ಈ ಹಿಂದೆ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ಮೊದಲ ನಿರ್ದೇಶನದ ಸಿನಿಮಾ. ಚೊಚ್ಚಲ ನಿರ್ದೇಶನದಲ್ಲೇ ಏನಾದರೂ ವಿಶೇಷತೆ ಇರಬೇಕೆಂಬ ಹಂಬಲದಿಂದ ಈ ಚಿತ್ರವನ್ನು ಸಿಂಗಲ್ ಟೇಕ್ ನಲ್ಲಿ ಮಾಡಿ ಮುಗಿಸಿದ್ದೇನೆ. ಈ ಹಿಂದೆ ಶಂಕರ್ ನಾಗ್, ಎಸ್ ನಾರಾಯಣ್ ಮುಂತಾದವರು ಈ ಪ್ರಯತ್ನ ಮಾಡಿದ್ದಾರೆ. ಆ ಸಿನಿಮಾಗಳ ಸ್ಪೂರ್ತಿಯಿಂದ ನಾನು ಈ ಪ್ರಯತ್ನವನ್ನು ಮಾಡಿದ್ದೇನೆ. ಸುಮಾರು ಮೂರು ತಿಂಗಳು ಪೂರ್ವ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೆ ನಟಿಸಿರುವ ಕಾರಣ ಅವರಿಗೆಲ್ಲಾ ತರಭೇತಿ ನೀಡಿ ಆನಂತರ ಚಿತ್ರೀಕರಣ ಮಾಡಿದ್ದೇನೆ. ನಮ್ಮ ಚಿತ್ರದಲ್ಲಿ ದೇಶಪ್ರೇಮವನ್ನು ಆಧರಿಸಿದ ಕಥೆಯಿದೆ. ಯಾರು ಊಹಿಸಲಾಗದ್ದ ಕ್ಲೈಮ್ಯಾಕ್ಸ್ ಸಹ ಇದೆ. ನನ್ನ ಈ ಕನಸ್ಸನ್ನು ನನಸು ಮಾಡಿದ ನನ್ನ ತಾಯಿ ತಂದೆ ವಿಜಯಲಕ್ಷ್ಮಿ – ರಾಮೇಗೌಡ, ಹರೀಶ್ ಹೆಚ್ ಎಸ್ ಹಾಗೂ ಕ್ರಿಯೇಟಿವ್ ಹೆಡ್ ಮುರಳಿ ಎಸ್ ವೈ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಮುತ್ತುರಾಜ್.

ಸಿಂಗಲ್ ಟೇಕ್ ನಲ್ಲಿ ಚಿತ್ರ ಮಾಡುವುದು ಸುಲಭದ ಮಾತಲ್ಲ ಎಂದು ಮಾತನಾಡಿದ ಛಾಯಾಗ್ರಾಹಕ ವೀನಸ್ ನಾಗರಾಜ್ ಮೂರ್ತಿ, ನಾವು ಅಂದುಕೊಂಡ ಹಾಗೆ ಚಿತ್ರೀಕರಣ ಮಾಡಲು ಸಹಕಾರ ನೀಡಿದ ಕಲಾವಿದರಿಗೆ ಧನ್ಯವಾದ ಹೇಳಬೇಕು. ಅವರ ಸಹಕಾರವಿಲ್ಲದಿದ್ದರೆ ಸಿಂಗಲ್ ಟೇಕ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತಿರಲಿಲ್ಲ. ಕನಕಪುರದ ಬಳಿಯ ಮನೆಯೊಂದರಲ್ಲಿ ವಿಶೇಷ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಿರುವುದಾಗಿ ಹೇಳಿದರು.

ಚಿತ್ರವನ್ನು ಲಿಮ್ಕಾ ದಾಖಲೆಗೆ ಹಾಗೂ ಕೆಲವು ಚಿತ್ರೋತ್ಸವಗಳಿಗೆ ಕಳುಹಿಸುತ್ತಿರುವುದಾಗಿ ಕ್ರಿಯೇಟಿವ್ ಹಡ್ ಮುರಳಿ ತಿಳಿಸಿದರು.

ನಿರ್ಮಾಪಕರಾದ ವಿಜಯಲಕ್ಷ್ಮಿ ರಾಮೇಗೌಡ, ಹರೀಶ್ ಹೆಚ್ ಎಸ್ ಹಾಗೂ ಕಲಾವಿದರಾದ ಸುನೀಲ್ ಗೌಡ, ನಯನ ಪುಟ್ಟಸ್ವಾಮಿ, ಹರೀಶ್ ಆಚಾರ್ಯ, ಆನಂದ್ ಕೆಂಗೇರಿ, ರಾಶಿಕ ಪುಟ್ಟಸ್ವಾಮಿ, ತನುಜಾ, ಶೃತಿ ಗೌಡ ಮುಂತಾದವರು “ಯಂಗ್ ಮ್ಯಾನ್” ಚಿತ್ರದ ಕುರಿತು ಮಾತನಾಡಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor