Yadaa yadaa hi premier show just one rupee ಯದಾ ಯದಾ ಹಿ 1ರೂ.ಗೆ ಪ್ರೀಮಿಯರ್ ಶೋ..
ಯದಾ ಯದಾ ಹಿ 1ರೂ.ಗೆ ಪ್ರೀಮಿಯರ್ ಶೋ..
ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕುತೂಹಲಕಾರಿ ಕಥಾಹಂದರ ಹೊಂದಿರುವ ಚಿತ್ರ ಯದಾ ಯದಾ ಹಿ ಇದೇ ಶುಕ್ರವಾರ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. ಯುವ ತಾರಾಜೋಡಿ ವಸಿಷ್ಠಸಿಂಹ ಹಾಗೂ ಹರಿಪ್ರಿಯ ತೆರೆಮೇಲೂ ಒಟ್ಟಾಗಿ ಕಾಣಿಸಿಕೊಂಡಿರುವ ಚಿತ್ರ ಇದಾಗಿದ್ದು, ಒಂದಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಅಲ್ಕದೆ ಹರಿಪ್ರಿಯಾ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಲ್ಲದೆ ಇಡೀ ಚಿತ್ರಕಥೆ ನಿಂತಿರುವುದೆ ಅವರ ಪಾತ್ರದ ಮೇಲೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಈ ಚಿತ್ರದ ಪ್ರೀಮಿಯರ್ ಶೋವನ್ನು ಕೇವಲ ಒಂದು ರೂಪಾಯಿಯಲ್ಲಿ ನೋಡಬಹುದು,
ಹೌದು, ದಿ.31ರ ಬುಧವಾರ ಸಂಜೆ ನಡೆಯಲಿರುವ ಯದಾ ಯದಾ ಹಿ ಚಿತ್ರದ ಪ್ರೀಮಿಯರ್ ಶೋವನ್ನು ಬೆಂಗಳೂರಿನ ವೀರೇಶ ಚಿತ್ರಮಂದಿರ ಹಾಗೂ ಹುಬ್ಬಳ್ಳಿಯ ಸುಧಾ ಚಿತ್ರಮಂದಿರಗಳಲ್ಲಿ 1 ರೂ.ಪ್ರವೇಶ ದರ ನೀಡಿ ಚಿತ್ರ ವೀಕ್ಷಿಸುವ ಅವಕಾಶವನ್ನು ನಿರ್ಮಾಪಕರು ಒದಗಿಸಿಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲಬಾರಿಗೆ ಇಂಥದ್ದೊಂದು ವಿಭಿನ್ನ ಪ್ರಯತ್ನ ನಡೆಯುತ್ತಿದೆ.
ಶಾಲಿನಿ ಎಂಟರ್ ಪ್ರೈಸಸ್ ಮೂಲಕ ಜಾಕ್ ಮಂಜು ಅವರು ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ. ವಿಶೇಷವಾಗಿ ಈ ಚಿತ್ರದ ಟೈಟಲ್ ಸಾಂಗನ್ನು ವಸಿಷ್ಠಸಿಂಹ ಹಾಗೂ ಹರಿಪ್ರಿಯ ಹಾಡಿದ್ದಾರೆ. ತೆಲುಗು ಮೂಲದ ಅಶೋಕ ತೇಜ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಗೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದ್ರಾಬಾದ್ ನ ರಾಜೇಶ್ ಅಗರವಾಲ್ ಅವರು ನಿರ್ಮಿಸಿದ್ದಾರೆ.
*ಯದಾ ಯದಾ ಹಿ*
*1 ರೂ.ಗೆ ಪ್ರೀಮಿಯರ್ ಶೋ..!*