X Deputy Chief Minister Lakshman Saudi watched “Desai” movie. ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಶ್ರೀ ಲಕ್ಷ್ಮಣ ಸವದಿ ಹಾಗೂ ಬಾಗಲಕೋಟೆ ಜಿಲ್ಲಾ ಅಧಿಕಾರಿಗಳಿಂದ “ದೇಸಾಯಿ” ಚಿತ್ರ ವೀಕ್ಷಣೆ .

ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಶ್ರೀ ಲಕ್ಷ್ಮಣ ಸವದಿ ಹಾಗೂ ಬಾಗಲಕೋಟೆ ಜಿಲ್ಲಾ ಅಧಿಕಾರಿಗಳಿಂದ “ದೇಸಾಯಿ” ಚಿತ್ರ ವೀಕ್ಷಣೆ .

ಗ್ರಾಮೀಣ ಸೊಗಡಿನ ಕೌಟುಂಬಿಕ ಕಥಾ ಹಂದರ ಹೊಂದಿರುವ ಬಾಗಲಕೋಟೆಯ ಮಹಾಂತೇಶ ಚೋಳಚಗುಡ್ಡ ಕಥೆ ಬರೆದು ನಿಮಿ೯ಸಿರುವ, ನಾಗಿ ರೆಡ್ಡಿ ನಿದೇ೯ಶನದ, ಪ್ರವೀಣ ಕುಮಾರ್ ಮತ್ತು ರಾಧ್ಯ ಅಭಿನಯದ “ದೇಸಾಯಿ” ಚಲನಚಿತ್ರವನ್ನು ಇತ್ತೀಚಿಗೆ ಬೆಂಗಳೂರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಶ್ರೀ ಲಕ್ಷ್ಮಣ ಸವದಿ ಅವರು ವೀಕ್ಷಿಸಿ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳಾಡಿದರು.


ಬಾಗಲಕೋಟೆಯ ವಾಸವಿ ಚಿತ್ರಮಂದಿರದಲ್ಲಿ ಬಾಗಲಕೋಟೆ ಜಿಲ್ಲಾ ಅಧಿಕಾರಿಗಳಾದ ಜಾನಕಿ ಕೆ ಎಂ ಹಾಗೂ ಎಸ್ ಪಿ ಅಮರನಾಥ ರೆಡ್ಡಿ ಇವರು ಕುಟುಂಬ ಸಮೇತರಾಗಿ ಚಿತ್ರವನ್ನು ವೀಕ್ಷಿಸಿದರು. ನಂತರ ಮಾತನಾಡಿದ ಅವರು, “ದೇಸಾಯಿ” ಚಲನಚಿತ್ರವು ಅತ್ಯುತ್ತಮವಾದ ಕೌಟುಂಬಿಕ ಕಥೆ ಹೊಂದ್ದಿದ್ದು ,ಬಾಗಲಕೋಟೆಯ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರಿಕರಿಸಲಾಗಿದೆ . ಈ ಚಿತ್ರದಲ್ಲಿ ಸಮಾಜಕ್ಕೆ ಮತ್ತು ಇಗಿನ ಯುವ ಪೀಳಿಗೆಗೆ ಹಲವಾರು ಸಂದೇಶಗಳನ್ನು ನೀಡಲಾಗಿದೆ. ಈ ಚಿತ್ರವನ್ನು ಎಲ್ಲರೂ ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜೊತೆಯಲ್ಲಿದ್ದ ನಿಮಾ೯ಪಕರಿಗೆ ಶುಭ ಕೋರಿದರು..

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor