WWCL-ವುಮೆನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಚಾಲನೆ..ಇದು N1 ಕ್ರಿಕೆಟ್ ಅಕಾಡೆಮಿಯ ಮತ್ತೊಂದು ಪ್ರಯತ್ನ

WWCL-ವುಮೆನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಚಾಲನೆ..ಇದು N1 ಕ್ರಿಕೆಟ್ ಅಕಾಡೆಮಿಯ ಮತ್ತೊಂದು ಪ್ರಯತ್ನ
ಯಾವುದೇ ಪ್ರೊಫೆಷನ್ ಆಗಲಿ ಕ್ರಿಕೆಟ್ ಅಂದರೆ ಪ್ರಾಣ ಕೊಡುವವರು ಬಹಳಷ್ಟು ಜನ ಇದ್ದಾರೆ. ಅಂತಹವರಿಗಾಗಿ ಎನ್ 1 ಕ್ರಿಕೆಟ್ ಅಕಾಡೆಮಿ ಕ್ರಿಕೆಟ್ ಟೂರ್ನಮೆಂಟ್ ನಡೆಸಿಕೊಂಡು ಬರುತ್ತಿದೆ. ಕಿರುತೆರೆ ಕಲಾವಿದರಿಗಾಗಿ ಟಿಪಿಎಲ್-ಟೆಲಿವಿಷನ್ ಪ್ರೀಮಿಯರ್ ಲೀಗ್ ಹಾಗೂ IPT12 ಪಂದ್ಯಾವಳಿ ಆಯೋಜಿಸಿ ಯಶಸ್ವಿಯಾಗಿರುವ ಎನ್-1 ಕ್ರಿಕೆಟ್ ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ ಆರ್ ಇದೀಗ WWCL-ವುಮೆನ್ಸ್ ವಿಂಡ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಶುರು ಮಾಡಿದ್ದಾರೆ.

WWCL ಕ್ರಿಕೆಟ್ ಪಂದ್ಯಾವಳಿಯ ಫ್ಲೇಯರ್ಸ್ ಸೆಲೆಕ್ಷನ್ ಕಾರ್ಯಕ್ರಮ ನಿನ್ನೆ ಚಿಕ್ಕನಹಳ್ಳಿಯ ಕಿನಿ ಸ್ಪೋರ್ಟ್ಸ್ ಅರೆನಾ ಗ್ರೌಂಡ್ ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎನ್ 1 ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಸುನಿಲ್ ಕುಮಾರ್ ಬಿ ಆರ್, ಯೂತ್ ಕಾಂಗ್ರೆಸ್ ಸದಸ್ಯೆ ದೀಪಿಕಾ ರೆಡ್ಡಿ, ಮಿಥುನ್ ರೆಡ್ಡಿ, ಅಶ್ವ ಸೂರ್ಯ ಓನರ್ ರಂಜಿತ್ ಕುಮಾರ್, ಅನಿಲ್ ಬಿ.ಆರ್ ಕಾರ್ಯಕ್ರಮಕ್ಕೆ ಸಾಥ್ ಕೊಟ್ಟರು.

ಯೂತ್ ಕಾಂಗ್ರೆಸ್ ಸದಸ್ಯೆ ದೀಪಿಕಾ ರೆಡ್ಡಿ ಮಾತನಾಡಿ, ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಕ್ರಿಕೆಟ್ ಮ್ಯಾಚ್ ಗಳ ಚಾಲನೆ ಸಿಕ್ಕಿದೆ. ಅದು ಹೆಣ್ಣು ಮಕ್ಕಳ ಮ್ಯಾಚ್ ಎಂದಾಗ ಬಹಳ ಖುಷಿಯಾಯ್ತು. ನಾನು ಹೆಣ್ಣು ಮಕ್ಕಳಾಗಿ ಸಮಾಜದಲ್ಲಿ ನಮ್ಮದೇ ಆದ ಒಂದು ನಿಲುವು ಪಡೆಯಬೇಕು ಎಂದರೆ. ನಮ್ಮನ್ನು ಸಮಾಜ ಗುರುತಿಸಬೇಕು ಎಂದರೆ ನಮ್ಮದೇ ಆದ ಹೋರಾಟ ಇರುತ್ತದೆ. ನಿಮ್ಮ ಫಿಲ್ಡ್ ಆಗಿರಬಹುದು. ಬೇರೆ ರಂಗ ಇರಬಹುದು. ಎಲ್ಲರಿಗೂ ಬೆಳೆಯಬೇಕು ಅಂದರೆ ಅವರದ್ದೇ ಆದ ಶ್ರಮ, ಧೃಡಸಂಕಲ್ಪ ಇರುತ್ತದೆ. ನಿಮ್ಮಲ್ಲರಿಗೂ ಒಳ್ಳೆಯದಾಗಲಿ. ಹೆಣ್ಮಕ್ಕಳು ಯಾವುದರಲ್ಲಿಯೂ ಕಮ್ಮಿ ಇಲ್ಲ. ಇಡೀ ಟೂರ್ನಮೆಂಟ್ ಗೆ ಆಲ್ ದಿ ಬೆಸ್ಟ್ ಎಂದು ತಿಳಿಸಿದರು.

ನಟಿ ಬೃಂದಾ ಆಚಾರ್ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಆಯೋಜಕರಿಗೆ ಧನ್ಯವಾದಗಳು. ಫಸ್ಟ್ ಡೇ ಇಷ್ಟು ಜೋಶ್ ನೋಡಿ ಖುಷಿಯಾಗುತ್ತಿದೆ. ನಾನು ಕ್ಯಾಪ್ಟನ್ ಆಗಿ ನನಗೂ ಬೆಸ್ಟ್ ಟೀಂ ಸಿಗಲಿದೆ ಎಂದುಕೊಂಡಿದ್ದೇನೆ. ನನ್ನ ತಂಡಕ್ಕೆ ನಾನು ಕ್ಯಾಪ್ಟನ್ ಮಾತ್ರವಲ್ಲ ಎಲ್ಲರೂ ಕ್ಯಾಪ್ಟನ್. ಎಲ್ಲಾ ತಂಡಗಳು ಹೆಲ್ದಿಯಾಗಿ ಆಟ ಆಡೋಣಾ ಎಂದು ಹೇಳಿದರು.

ಸಿನಿಮಾ, ಸೀರಿಯಲ್, ಸಿಂಗರ್ಸ್ , ಮಾಡೆಲ್ಸ್ ಹಾಗೂ ಮಾಧ್ಯಮದವರು ಸೇರಿದಂತೆ ಹಲವರು ವುಮೆನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ನಲ್ಲಿ ಆಡಲಿದ್ದಾರೆ. 7 ತಂಡಗಳಿಗೆ 7 ಕ್ಯಾಪ್ಟನ್ ಗಳು ಹಾಗೂ 23 ಪಂದ್ಯಾವಳಿ, 8 ಓವರ್ ನ ಮ್ಯಾಚ್ ನಡೆಯಲಿದೆ. ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಪಡೆದವರಿಗೆ 50 ಸಾವಿರ, ಅತ್ಯುತ್ತಮ ಆಟ ಆಡಿದ ಆಟಗಾರ್ತಿಗೆ 1 ಲಕ್ಷ ನೀಡಲಾಗುತ್ತದೆ.
7 ಕ್ಯಾಪ್ಟನ್ ಯಾರು?
1.ಶಾನ್ವಿ ಶ್ರೀವಾಸ್ತವ್
2.ಮಲೈಕಾ ವಸುಪಾಲ್
3.ಯಶ ಶಿವಕುಮಾರ್
4.ಆರೋಹಿ ನಾರಾಯಣ್
5.ಇತಿ ಆಚಾರ್ಯ
6.ಬೃಂದಾ ಆಚಾರ್ಯ

  1. ಅಪೂರ್ವ

ಮುಂದಿನ ಸುದ್ದಿಗೋಷ್ಠಿಯಲ್ಲಿ WWCL ಕ್ರಿಕೆಟ್ ಪಂದ್ಯಾವಳಿಯ ತಂಡಗಳು, ಲೋಗೋ ಅನಾವರಣ ಮಾಡಲಾಗುತ್ತದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor