WCL women’s wind ball Cricket League WWCL-ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಗೆ ತೆರೆಬಿದ್ದಿದೆ.

N-1 ಕ್ರಿಕೆಟ್ ಅಕಾಡೆಮಿ ಪ್ರೆಸೆಂಟ್ಸ್ WWCL-ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಟ್ರೋಪಿಗೆ ಮುತ್ತಿಟ್ಟ ಮಂಜು 11 ತಂಡ..ರನ್ನರ್ ಆಗಿ ಹೊರಹೊಮ್ಮಿದ ಎಂಆರ್ ಫ್ಯಾಂಥರ್ಸ್ಸ್

ಟಿಪಿಎಲ್, IPT12ಯಂತಹ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿ ಸಕ್ಸಸ್ ಕಂಡಿರುವ N1 ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಬಿ ಆರ್ ರವರು ಹೆಣ್ಣು ಮಕ್ಕಳಿಗಾಗಿ ಮೊದಲ ಬಾರಿಗೆ ಆಯೋಜಿಸಿದ್ದ WWCL-ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಗೆ ತೆರೆಬಿದ್ದಿದೆ. ಬೆಂಗಳೂರಿನ ಚಿಕ್ಕನಹಳ್ಳಿಯಲ್ಲಿರುವ ಗ್ರೀನ್ ಸ್ಪೋರ್ಟ್ ವಿಲೇಜ್ ಸ್ಟೇಡಿಯಂನಲ್ಲಿ ಇದೇ ತಿಂಗಳ 20, 21 ಹಾಗೂ 22 ಈ ಮೂರು ದಿನಗಳಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆಯಿತು.

ಈ ಟೂರ್ನಮೆಂಟ್ ನಲ್ಲಿ 7 ತಂಡಗಳು ಭಾಗಿಯಾಗಿದ್ದು, ಒಟ್ಟು 98 ನಟಿಯರು WWCL-ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಟವಾಡಿದ್ದಾರೆ. ಮಂಜುನಾಥ್-ನಾಗಯ್ಯ ಒಡೆತನದ, ನಟಿ ಯಶ ಶಿವಕುಮಾರ್ ನಾಯಕತ್ವದ ಮಂಜು 11 ತಂಡ ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಟ್ರೋಫಿಗೆ ಮುತ್ತಿಟ್ಟಿದೆ. ಮಿಥುನ್ ರೆಡ್ಡಿ ಒಡೆತನದ ದಿವ್ಯಾ ಉರುಡುಗ ನಾಯಕತ್ವದ ಎಂಆರ್ ಫ್ಯಾಂಥರ್ಸ್ಸ್ ಟೀಂ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.

WWCL-ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಜು 11 ತಂಡದ ಹೇಮಾ ತಿಮ್ಮಯ್ಯ ಪರ್ಪಲ್ ಕ್ಯಾಪ್ ಪಡೆದುಕೊಳ್ಳುವುದರ ಜೊತೆಗೆ ವುಮೇನ್ ಆಫ್ ದಿ ಸೀರೀಸ್ ಆಗಿ ಹೊರಹೊಮ್ಮಿದ್ದಾರೆ. ಬುಲ್ ಸ್ಕ್ಯಾಡ್ ತಂಡದ ಕವಿತಾ ಗೌಡ ಆರೇಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ವಿನ್ನರ್ ತಂಡಕ್ಕೆ 2 ಲಕ್ಷ ರೂಪಾಯಿ ಕ್ಯಾಶ್ ಹಾಗೂ ರನ್ನರ್ ಅಪ್ ತಂಡಕ್ಕೆ 1 ಲಕ್ಷ ರೂ ನೀಡಲಾಗಿದೆ. ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಪಡೆದುಕೊಂಡವರಿಗೆ 50 ಸಾವಿರ ನೀಡಲಾಗಿದ್ದು, ವುಮೇನ್ ಆಫ್ ದಿ ಸೀರೀಸ್ ಗೆ 1 ಲಕ್ಷ ರೂ ಕೊಡಲಾಗಿದೆ.

ಟೂರ್ನಮೆಂಟ್ ನಲ್ಲಿ ಭಾಗಿಯಾದ ತಂಡಗಳು, ಓನರ್ ಹಾಗೂ ಕ್ಯಾಪ್ಟನ್
1.AVR ಟಸ್ಕರ್ಸ್-ಅರವಿಂದ್-ವೆಂಕಟೇಶ್ ರೆಡ್ಡಿ-ದಿವ್ಯಾ ಸುರೇಶ್
2.ಎಂಆರ್ ಫ್ಯಾಂಥರ್ಸ್ಸ್-ಮಿಥುನ್ ರೆಡ್ಡಿ-ದಿವ್ಯಾ ಉರುಡುಗ
3.ಬುಲ್ ಸ್ಕ್ಯಾಡ್-ಮೋನಿಷ್-ಶಾನ್ವಿ ಶ್ರೀವಾಸ್ತವ
4.ವಿನ್ ಟೈಮ್ ರಾಕರ್ಸ್ಸ್-ಅನಿಲ್ ಕುಮಾರ್ ಬಿ.ಆರ್-ಆಶಾ ಭಟ್
5.ಮಂಜು 11-ಮಂಜುನಾಥ್-ನಾಗಯ್ಯ-ಯಶ ಶಿವಕುಮಾರ್
6.ಬಯೋಟಾಪ್ ಲೈಫ್ ಸೇವಿಯರ್ಸ್-ಪ್ರಸನ್ನ-ವಿನು ಜೋಸ್-ಅಪೂರ್ವ
7.ಖುಷಿ X1- ಭೂಮಿ ಶೆಟ್ಟಿ

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor