Vishnu Priya movie Release on February 21st. ಫೆಬ್ರವರಿ 21ಕ್ಕೆ ವಿಷ್ಣು ಪ್ರಿಯಾ90ರ ದಶಕದ ಲವ್ ಸ್ಟೋರಿ..

ಫೆಬ್ರವರಿ 21ಕ್ಕೆ ವಿಷ್ಣು ಪ್ರಿಯಾ
90ರ ದಶಕದ ಲವ್ ಸ್ಟೋರಿ..

ನಿರ್ಮಾಪಕ ಕೆ.ಮಂಜುಗೆ ಸಾಹಸಸಿಂಹ ವಿಷ್ಣುವರ್ಧನ್ ಎಂದರೆ ಅಪಾರ ಗೌರವ. ಅದನ್ನು ಅವರು ತಮ್ಮ ಚಿತ್ರಗಳ ಮೂಲಕವೂ ತೋರಿಸಿದ್ದಾರೆ. ಅದರ ಮತ್ತೊಂದು ಭಾಗವಾಗಿ ತಮ್ಮ ಪುತ್ರ ಶ್ರೇಯಸ್ ರನ್ನು ನಾಯಕನನ್ನಾಗಿಸಿ ‘ವಿಷ್ಣು ಪ್ರಿಯಾ’ ಎಂಬ ಚಿತ್ರವನ್ನೂ ನಿರ್ಮಿಸಿದ್ದಾರೆ.‌ ಬಹಳ ಹಿಂದೆಯೇ ನಿರ್ಮಾಣವಾಗಿದ್ದ ಈ ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಫೆಬ್ರವರಿ 21ಕ್ಕೆ ತೆರೆ ಕಾಣಲಿದೆ. ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯಾ. ಅವರಿಬ್ಬರ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ.


ತೊಂಭತ್ತರ ದಶಕದ ಪ್ರೇಮಕಥೆಯೊಂದನ್ನು ಹೇಳುವ ಈ ಚಿತ್ರಕ್ಕೆ ಮಲಯಾಳಂನ ವಿ.ಕೆ.ಪ್ರಕಾಶ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಲಯಾಳಂ, ತೆಲುಗು, ತಮಿಳಿನಲ್ಲಿ ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಇವರು ರಾಷ್ಟ್ರಪ್ರಶಸ್ತಿಗೂ ಭಾಜನರಾಗಿದ್ದಾರೆ.
ಕೆ.ಮಂಜು ಅವರ ನಿರ್ಮಾಣದ ವಿಷ್ಣುಪ್ರಿಯಾ
ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದಿದ್ದು ಫೆಬ್ರವರಿ 21ರಂದು ರಾಜ್ಯಾದ್ಯಂತ ರಿಲೀಸಾಗುತ್ತಿದೆ. ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತೆಲುಗಿನ ಸಂಗೀತ ನಿರ್ದೇಶಕ ಗೋಪಿಸುಂದರ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ.


ಧಾರವಾಡ ಮೂಲದ ಸಿಂಧುಶ್ರೀ ಈ ಚಿತ್ರದ ಮೂಲ ಕಥೆಗಾರರು. ಆ ಕಥೆಯ ಒಂದು ಲೈನ್ ತಗೊಂಡು ಈ ಚಿತ್ರದ ಸ್ಕ್ರಿಪ್ಟ್ ಮಾಡಿಕೊಂಡಿರುವುದಾಗಿ ಕೆ
ಮಂಜು ಅವರೇ ಹೇಳಿದ್ದಾರೆ. ವಿ.ಕೆ. ಪ್ರಕಾಶ್, ಗೋಪಿಸುಂದರ್, ನಾಗೇಂದ್ರ ಪ್ರಸಾದ್
ಅವರಂಥ ತಂತ್ರಜ್ಞರನ್ನು ಇಟ್ಟುಕೊಂಡು ಈ ಚಿತ್ರ ನಿರ್ಮಿಸಿದ್ದಾರೆ.‌ ಜೀವನದಲ್ಲಿ ‌ಪ್ರೀತಿ ಅನ್ನೋದು ಎಷ್ಟು ಮುಖ್ಯ ಅಂತ ಈ ಚಿತ್ರದಲ್ಲಿ ತೋರಿಸಲಾಗಿದೆ.


ಫ್ಯಾಮಿಲಿ ವ್ಯಾಲ್ಯೂಸ್‌ಗೆ ಹೆಚ್ಚಿನ ಮಹತ್ವವಿದ್ದು, ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗುವ ಯುವಕ‌ನ ಜೀವನದಲ್ಲಿ ಏನೇನೆಲ್ಲ ಆಗಿಹೋಯಿತು ಎಂದು ಈ ಚಿತ್ರ ಹೇಳುತ್ತದೆ. ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅವರು ಅಭಿನಯಿಸಿದ್ದಾರೆ. ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ವಿನೋದ್ ಭಾರತಿ ಅವರ ಛಾಯಾಗ್ರಹಣ, ಸುರೇಶ್ ಅರಸ್ ಅವರ ಸಂಕಲನ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor