Vikas paruva movie updates. ಉತ್ತಮ ಕಂಟೆಂಟ್ ನೊಂದಿಗೆ ಬರುತ್ತಿರುವ “ವಿಕಾಸ ಪರ್ವ” ಚಿತ್ರಕ್ಕೆ ಸೆನ್ಸಾರ್ ರವರಿಂದ U/A ಅಹರ್ತೆ.

ಸದ್ಯದಲ್ಲೇ ನಿಮ್ಮ ಮುಂದೆ “ವಿಕಾಸ ಪರ್ವ” .

ಕನ್ನಡ ಚಿತ್ರರಂಗದಲ್ಲೀಗ ಉತ್ತಮ ಕಂಟೆಂಟ್ ಚಿತ್ರಗಳು ಯಶಸ್ವಿಯಾಗುತ್ತಿದೆ‌. ಅಂತಹ ಉತ್ತಮ ಕಂಟೆಂಟ್ ನೊಂದಿಗೆ ಬರುತ್ತಿರುವ “ವಿಕಾಸ ಪರ್ವ” ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ತೆರೆ ಕಾಣಲಿದೆ.

“ವಿಕಾಸ ಪರ್ವ” ಸಾಮಾಜಿಕ ಕಳಕಳಿಯುಳ್ಳ ಚಿತ್ರ. ಉತ್ತಮ ಸಂದೇಶವುಳ್ಳ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಿರುತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ರೋಹಿತ್ ನಾಗೇಶ್ ಅಭಿನಯಿಸಿದ್ದಾರೆ. ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಾಲ ರಾಜವಾಡಿ, ಕುರಿ ರಂಗ, ಸಮೀರ್ ನಗರದ್, ವಿಘ್ನೇಶ್, ಬೇಬಿ ಬಿಲ್ವ, ಮಾಸ್ಟರ್ ಅಭಯ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನ್ಬು ಅರಸ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ರಾಜ್ಯ ಪ್ರಶಸ್ತಿ ವಿಜೇತ ವಿಶೃತ್ ನಾಯಕ್ ಬರೆದಿದ್ದಾರೆ ಜೊತೆಗೆ ಕಾರ್ಯಕಾರಿ ನಿರ್ಮಾಪಕರಾಗೂ ಕಾರ್ಯ ನಿರ್ವಹಿಸಿದ್ದಾರೆ.

ನವೀನ್ ಸುವರ್ಣ ಛಾಯಾಗ್ರಹಣ, ಎ ಪಿ ಓ ಸಂಗೀತ ನಿರ್ದೇಶನ, ಶ್ರೀನಿವಾಸ್ ಕಲಾಲ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಧನುಕುಮಾರ್, ಜೈ ಮಾಸ್ಟರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor