Vidyapati movie trailer released by Dhruva Sarja. ವಿದ್ಯಾಪತಿ ಚಿತ್ರದ ಟ್ರೇಲರ್ ಬಿಡುಗಡೆಗೆ ಧ್ರುವ ಸರ್ಜಾ ಸಾಥ್

ಟ್ರೇಲರ್ ನಲ್ಲಿ ʼವಿದ್ಯಾಪತಿʼ..ಧನಂಜಯ್ ನಿರ್ಮಾಣದ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್

ಡಾಲಿ ಪಿಕ್ಚರ್ಸ್ ಮತ್ತೊಂದು ಕೊಡುಗೆ ವಿದ್ಯಾಪತಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಮತ್ತೊಮ್ಮೆ ಡಾಲಿ ಧನಂಜಯ್-ನಾಗಭೂಷಣ್ ಮನರಂಜನೆಯ ರಸದೌತಣ ಬಡಿಸಲು ಸಜ್ಜಾಗಿದೆ. ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ನಿನ್ನೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ವಿದ್ಯಾಪತಿಗೆ ಪ್ರೇರಣಪತಿ ಸಾಥ್ ಕೊಟ್ಟರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿದ್ಯಾಪತಿ ಟ್ರೇಲರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.

ನಟ ಧ್ರುವ ಸರ್ಜಾ ಮಾತನಾಡಿ, ಈ ಚಿತ್ರ ಸೇಫ್ ಹ್ಯಾಂಡ್ಸಲ್ಲಿದೆ. ಯಾಕಂದರೆ ಯೋಗಿ ಸರ್, ಕಾರ್ತಿಕ್ ಸರ್. ಕೆಆರ್ ಜಿ ಸ್ಟುಡಿಯೋ ರಿಲೀಸ್ ಮಾಡುತ್ತಿದೆ. ಥಿಯೇಟರ್ ಸೆಟ್ ಅಪ್ ಪ್ರಾಮಿಸಿಂಗ್ ಆಗಿ ಇರುತ್ತದೆ. ಈ ಚಿತ್ರ ಏಪ್ರಿಲ್ 10ರಂದು ರಿಲೀಸ್ ಆಗುತ್ತಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ. ತುಂಬಾ ಚೆನ್ನಾಗಿ ಇರುತ್ತದೆ. ಏಕೆಂದರೆ ಮನರಂಜನೆ ಖಂಡಿತ ಇದ್ದೇ ಇರುತ್ತದೆ. ನಾಯಕ ನಟರಾಗಿ ನಾಗಭೂಷಣ್ ಸರ್ ನಟಿಸಿದ್ದಾರೆ. ಇವರ ಎಲ್ಲಾ ಸಿನಿಮಾ ನೋಡಿದ್ದೇನೆ. ಅದರಲ್ಲಿಯೂ ಹನಿಮೂನ್ ಸಿಕ್ಕಾಪಟ್ಟೆ ಚೆನ್ನಾಗಿದೆ. ಯಾವಾಗ ಹನಿಮೂನ್ 2 ಎಂದು ಕೇಳುತ್ತಲೇ ಇರುತ್ತೇನೆ. ಆದರೆ ಏನೂ ಹೇಳಿಲ್ಲ. ಇಕ್ಕಟ್ಟು, ಟಗರು ಪಲ್ಯ ನೋಡಿದ್ದೇನೆ. ಈ ಚಿತ್ರದ ಟ್ರೇಲರ್ ಕೂಡ ಹಾಸ್ಯದಿಂದ ಕೂಡಿದೆ. ಇದು ಪಕ್ಕ ಎಂಟರ್ ಟೈನರ್ ಆಗಿ ಇರಲಿದೆ. ಮಲೈಕಾ ಅವರಿಗೆ ಆಲ್ ದಿ ಬೆಸ್ಟ್. ಶ್ರೀವತ್ಸ, ಧರ್ಮ, ಪೂರ್ಣಚಂದ್ರ ಅವರು ಎಲ್ಲರೂ ಅದ್ಭುತವಾಗಿ ಮಾಡಿದ್ದಾರೆ. ಕೆರೆ ನೀರನ್ನು ಕೆರೆ ಚೆಲ್ಲು ಎನ್ನುವಂತೆ ಧನಂಜಯ್ ಇಲ್ಲಿಯೇ ದುಡಿದು ಇಲ್ಲಿಗೆ ಇನ್ವೆಸ್ಟ್ ಮಾಡುತ್ತಿದ್ದಾರೆ. ಧನಂಜಯ್ ಅವರಿಗೆ ಒಳ್ಳೆದು ಆಗುತ್ತದೆ. ಯಾಕಂದರೆ ಅವರು ರಿಯಲ್. ಅವರಿಗೆ ಒಳ್ಳೆಯದ ಆಗಬೇಕು ಎಂದರೆ ಥಿಯೇಟರ್ ಗೆ ಹೋಗಿ ನೋಡಿ ಎಂದು ಹೇಳಿದರು.

ನಟ ಡಾಲಿ ಧನಂಜಯ್ ಮಾತನಾಡಿ, ವಿದ್ಯಾಪತಿ ಫ್ಯಾಮಿಲಿ ನೋಡುವ ಸಿನಿಮಾ. ಕುಟುಂಬ ಸಮೇತರಾಗಿ ಮಕ್ಕಳ ಜೊತೆ ಬಂದು ಎಲ್ಲರೂ ಚಿತ್ರ ನೋಡಿ. ಇನ್ನೊಂದಿಷ್ಟು ಕನಸು, ಸಿನಿಮಾಗೆ ಅದು ಸ್ಫೂರ್ತಿಯಾಗುತ್ತದೆ. ಪ್ರತಿ ಸರಿ ನೀವು ಕೈ ಹಿಡಿಯುವುದು ಮುಖ್ಯ. ನಿಮ್ಮ ಪ್ರೀತಿ ಯಾವಾಗಲೂ ಇರಲಿ. ಧ್ರುವ ಸರ್ಜಾ ಅವರಿಗೆ ಸ್ಪೆಷಲ್ ಥ್ಯಾಂಕೂ. ನಾನು ಚಿರು ಅವರೆಲ್ಲಾ ಗುಡ್ ಫ್ರೆಂಡ್ಸ್. ಮೊದಲ ಸಿನಿಮಾದಿಂದಲೇ ಧ್ರುವ ಸೂಪರ್ ಸ್ಟಾರ್. ಪೊಗರು ಚಿತ್ರದಲ್ಲಿ ಜೊತೆಯಲ್ಲಿ ಕೆಲಸ ಮಾಡಿದೆ. ಕೆಆರ್ ಜಿ ಸ್ನೇಹಿತರಾಗಿ ಸದಾ ನನ್ನ ಜೊತೆ ನಿಂತಿದ್ದಾರೆ. ಈ ಚಿತ್ರ ಚೆನ್ನಾಗಿ ಆಗಲಿದೆ. ಇಡೀ ತಂಡಕ್ಕೆ ಧನ್ಯವಾದಗಳು ಎಂದು ತಿಳಿಸಿದರು.

ನಟ ನಾಗಭೂಷಣ್ ಮಾತನಾಡಿ, ನಾನು ಇಂಡಸ್ಟ್ರೀಗೆ ಹೀರೋ ಆಗಬೇಕು ಎಂದು ಬಂದವನು ಅಲ್ಲ. ಒಳ್ಳೊಳ್ಳೆ ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳನ್ನು ಮಾಡಿಕೊಂಡು ಹೋಗಬೇಕು ಎಂದುಕೊಂಡಿದ್ದೆ. ಇದು ನನಗೆ ಜೀವನದಲ್ಲಿ ಸಿಕ್ಕ ಬೋನಸ್. ನನ್ನ ನಂಬಿ ನಿರ್ದೇಶಕರು ವಿದ್ಯಾಪತಿ ಚಿತ್ರ ಕೊಟ್ಟರು. ಇಡೀ ತಂಡ ನನಗೆ ಬೆಂಬಲವಾಗಿ ನಿಂತಿದೆ. ಕೆಆರ್ ಜಿ ಸ್ಟುಡಿಯೋಸ್ ನಮ್ ಕೆಲಸಕ್ಕೆ ಸದಾ ಬೆನ್ನೆಲುಬಾಗಿ ನಿಂತಿದೆ. ನೀವು ಡಾಲಿ ಪಿಕ್ಚರ್ಸ್ ಬಿಟ್ಟು ಬೇರೆ ಕಡೆ ಸಿನಿಮಾ ಮಾಡೋಲ್ವಾ ಎಂದು ಕೆಲವರು ಕೇಳುತ್ತಾರೆ. ಆದರೆ ನನಗೆ ಸಿನಿಮಾ ಮಾಡುವ ಎಂದು ಯಾರು ಬಂದಿದ್ದಾರೆ? ನಿನ್ನ ಮೇಲೆ ಐದಾರು ಕೋಟಿ ಇನ್ವೆಸ್ಟ್ ಮಾಡುತ್ತೇನೆ ಎಂದು ಯಾರು ಹೇಳಿಲ್ಲ. ಅದನ್ನು ನನ್ನ ಗೆಳೆಯ ಧನಂಜಯ್ ಮಾಡಿದ್ದಾನೆ. ಏಪ್ರಿಲ್ 10ಕ್ಕೆ ನಮ್ ಸಿನಿಮಾ ವಿದ್ಯಾಪತಿ ರಿಲೀಸ್ ಆಗುತ್ತಿದೆ ಎಂದರು.

ಪ್ರೇಕ್ಷಕರಿಗೆ ಕಾಮಿಡಿ ಕಿಕ್ ಕೊಡ್ತಿದ್ದ ನಾಗಭೂಷಣ್ ವಿದ್ಯಾಪತಿಯಲ್ಲಿ ಆಕ್ಷನ್ ಸ್ಟಾರ್ ಆಗಿ ಬದಲಾಗಿದ್ದಾರೆ. ಅಂದರೆ ಕರಾಟೆ ಕಿಂಗ್ ಗೆಟಪ್ ನಲ್ಲಿ ನಾಗಭೂಷಣ್ ಕಾಣಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ವಿದ್ಯಾ ಪಾತ್ರದಲ್ಲಿ ಮಲೈಕಾ ವಸುಪಾಲ್ ಮಿಂಚಿದ್ದು, . ರಂಗಾಯಣ ರಘು ಪಾತ್ರವೂ ಇಲ್ಲಿ ವಿಶೇಷವಾಗಿಯೇ ಇದೆ. 2 ನಿಮಿಷ 49 ಸೆಕೆಂಡ್ ಇರುವ ಟ್ರೇಲರ್ ಬೊಂಬಾಟ್ ಆಗಿ ಮೂಡಿ ಬಂದಿದೆ

ವಿದ್ಯಾಪತಿ’ ಚಿತ್ರಕ್ಕೆ ಇಶಾಂ ಹಾಗೂ ಹಸೀಂ ಖಾನ್ ಅವರು ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು, ಸಂಕಲನವನ್ನೂ ಅವರೇ ಮಾಡುತ್ತಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ನಿರ್ದೇಶನ, ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸುಜಿತ್ ವೆಂಕಟರಾಮಯ್ಯ ಅವರು ಸಾಹಿತ್ಯ ಬರೆದಿದ್ದಾರೆ. ಡಾಲಿ ಪಿಕ್ಚರ್ಸ್ ನಡಿ ಡಾಲಿ ಧನಂಜಯ ನಿರ್ಮಾಣ ಮಾಡಿರುವ ವಿದ್ಯಾಪತಿ ಏಪ್ರಿಲ್ 10ರಂದು ಈ ಸಿನಿಮಾ ತೆರೆ ಕಾಣಲಿದೆ. ಧನಂಜಯ್ ಒಡೆತನದ ‘ಡಾಲಿ ಪಿಕ್ಚರ್ಸ್’ ಮೂಲಕ ನಿರ್ಮಾಣ ಆಗುತ್ತಿರುವ 4ನೇ ಸಿನಿಮಾ ಇದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor