Vesha movie trailer Release ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ ಹೊಸಬರ “ವೇಷ” .
ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ ಹೊಸಬರ “ವೇಷ” .
ಹಂಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ರಾಘವೇಂದ್ರ ಡಿ.ಜಿ ನಿರ್ಮಿಸಿ ನಾಯಕನಟನಾಗಿ ಅಭಿನಯಿಸಿರುವ, ಕ್ರಷ್ಣ ನಾಡ್ಪಾಲ್ ನಿರ್ದೇಶನದ “ವೇಷ” ಚಿತ್ರದ ಟ್ರೇಲರ್ ಇತ್ತೀಚೆಗೆ A2 ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ, ಮರಿಟೈಗರ್ ವಿನೋದ್ ಪ್ರಭಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಹಾಗೂ ಸಂಭಾಷಣೆಕಾರ ಮಾಸ್ತಿ “ವೇಷ” ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರತಂಡದ ಸದಸ್ಯರು “ವೇಷ”ದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿ ” ವೇಷ” ಹಾಕುತ್ತಾರೆ. ನಮ್ಮ ಚಿತ್ರದಲ್ಲೂ ಹಾಗೆ, ನಾಯಕನಿಗೆ ಯಾವುದೊ ಒಂದು ಸಂದರ್ಭ “ವೇಷ” ಹಾಕುವ ಹಾಗೆ ಮಾಡುತ್ತದೆ. ಟ್ರೇಲರ್ ಮೂಲಕ ಹೊರಬಂದಿರುವ “ವೇಷ” ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬರಲಿದೆ.
ಈತನಕ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ನಿರ್ದೇಶನದ ಚಿತ್ರ ಎನ್ನುತ್ತಾರೆ ನಿರ್ದೇಶಕ ಕೃಷ್ಣ ನಾಡ್ಪಾಲ್.

ನಾನು ಮೂಲತಃ ರಂಗಭೂಮಿ ಕಲಾವಿದ. ನಟನೆ ನನ್ನ ಹವ್ಯಾಸ. “ವೇಷ” ಚಿತ್ರ ಆರಂಭವಾದಾಗ ನಾಯಕನ ಹುಡುಕಾಟದಲ್ಲಿದ್ದೆವು. ಆನಂತರ ಅನಿರೀಕ್ಷಿತವಾಗಿ ನಾನೇ ಈ ಚಿತ್ರದ ನಾಯಕನಾಗಿ ನಟಿಸಿದ್ದೇನೆ. ನಿರ್ಮಾಣವನ್ನು ಮಾಡಿದ್ದೇನೆ. ವಿನೋದ್ ಪ್ರಭಾಕರ್ ಅವರು ನಮಗೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಧನ್ಯವಾದ ಎಂದರು ನಾಯಕ – ನಿರ್ಮಾಪಕ ರಾಘವೇಂದ್ರ,

ನಾಯಕಿ ನಿಧಿ ಮಾರೋಲಿ, ಸೌಖ್ಯ ಗೌಡ, ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಜಯ್ ಶೆಟ್ಟಿ, ರಾಜ ಅಲಿ, ಶಿಲ್ಪ ಕುಮಟಾ, ಸಾಹಸ ನಿರ್ದೇಶಕ ಜಾಗ್ವಾರ್ ಸಣ್ಣಪ್ಪ, ಸಂಗೀತ ನಿರ್ದೇಶಕ ಉತ್ತಮ್ ಸಾರಂಗ್ ಹಾಗೂ ಕ್ರಿಯೇಟಿವ್ ಹೆಡ್ ಕೀರ್ತನ್ ಶೆಟ್ಟಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ “ವೇಷ” ಚಿತ್ರದ ಕುರಿತು ಮಾತನಾಡಿದರು,
ಚಿತ್ರದ ವಿತರಣೆಯನ್ನ ಕೃಷಿ ಸ್ಟುಡಿಯೋಸ್ ಮತ್ತು ಸಚಿತ್ ಫಿಲ್ಮ್ಸ್ ನ ಮಾಲೀಕರಾದ ವೆಂಕಟ್ ಗೌಡ ಅವರು ಮಾಡಲಿದ್ದಾರೆ.