Vasishta Simha acted VIP movie first look reveal. ವಸಿಷ್ಠ ಸಿಂಹ ಅಭಿನಯದ “ವಿಐಪಿ” ಫಸ್ಟ್ ಲುಕ್ ಕುತೂಹಲವಾಗಿದೆ.

ಫಸ್ಟ್ ಲುಕ್ ನಲ್ಲೇ ಕುತೂಹಲ ಮೂಡಿಸಿದ “ವಿಐಪಿ” .

ಇದು ವಸಿಷ್ಠ ಸಿಂಹ ಅಭಿನಯದ ಚಿತ್ರ

ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ “ವಿಐಪಿ” ಚಿತ್ರದ ಫಸ್ಟ್ ಲುಕ್ ಇತ್ತೀಚಿಗೆ ಬಿಡುಗಡೆಯಾಯಿತು.

ಅದಿಚುಂಚನಗಿರಿ ಮಠದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಇವರ ದಿವ್ಯ ಸಾನಿಧ್ಯದಲ್ಲಿ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಯಿತು.

ಈ ಸಂದರ್ಭದಲ್ಲಿ ನಾಯಕ ವಸಿಷ್ಠ ಸಿಂಹ ಹಾಗೂ ಚಿತ್ರತಂಡ ಉಪಸ್ಥಿತರಿದ್ದರು. ಫಸ್ಟ್ ಲುಕ್ ನಲ್ಲಿ ವಸಿಷ್ಠ ಸಿಂಹ ಬ್ಯಾಟ್ ಹಿಡಿದಿದ್ದಾರೆ. ಮಾಸ್ ಫೀಲ್ ಇರುವಂತಹ ಪೋಸ್ಟರ್ ಕುತೂಹಲ ಮೂಡಿಸಿದೆ.

ಬಹು ನಿರೀಕ್ಷಿತ ಈ ಚಿತ್ರಕ್ಕೆ ಈಗಾಗಲೇ ಬೆಂಗಳೂರು ಸುತ್ತಮುತ್ತ ಎರಡು ಹಂತಗಳ ಚಿತ್ರೀಕರಣ ನಡೆದಿದೆ. ಈ ಭಾಗದಲ್ಲಿ ಮಾತಿನ‌ ಭಾಗದ ಚಿತ್ರೀಕರಣ ಹಾಗೂ “ಕೆ.ಜಿ.ಎಫ್” ಖ್ಯಾತಿಯ ವಿಕ್ರಂ ಮೋರ್ , “ಯುವ” ಖ್ಯಾತಿಯ ಅರ್ಜುನ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ.

ಕಲಾ ಸೃಷ್ಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಸ್ . ಮೋಹನ್ ಕುಮಾರ್ ಹಾಗೂ ಆರ್ ಅಚ್ಯುತ್ ರಾವ್ ಅವರ ನಿರ್ಮಾಣದಲ್ಲಿ ಈ ಚಿತ್ರ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಬ್ರಹ್ಮ ಈ ಚಿತ್ರದ ನಿರ್ದೇಶಕರು.

ವಿಭಿನ್ನ ಕಥಾಹಂದರ ಹಾಗೂ ಮೇಕಿಂಗ್ ನಿಂದ ಸದ್ದು ಮಾಡುತ್ತಿರುವ “ವಿಐಪಿ” ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶರ್ಮ ಅಭಿನಯಿಸುತ್ತಿದ್ದಾರೆ. ಸುನೀಲ್ ಪುರಾಣಿಕ್, ಬಲ ರಾಜವಾಡಿ , ಅಫ್ಜಲ್ , ಸ್ಪರ್ಶ ರೇಖಾ, ಸುಚೇಂದ್ರ ಪ್ರಸಾದ್ , ಹನುಮಂತೇಗೌಡ, ರಾಮ್ ಕಶ್ಯಪ್, ರಣವೀರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ರಾಜೀವ್ ಗಣೇಸನ್ ಛಾಯಾಗ್ರಹಣ, ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸತೀಶ್ ಚಂದ್ರಯ್ಯ ಸಂಕಲನ ಈ ಚಿತ್ರದಲ್ಲಿರಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor