Vamana movie review ವಾಮನ ಚಿತ್ರದ ವಿಮರ್ಶೆ. ವಾಮನನ ರಕ್ತ ಸಿಕ್ತ ಹೆಜ್ಜೆಗಳು. Rating – 3/5
ಈ ವಾರ ತೆರೆ ಕಂಡ ವಾಮನ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು.
ನಿರ್ದೇಶಕರು ಮೊದಲಿನಿಂದ ಹೇಳಿಕೊಂಡು ಬಂದಂತೆ ಇದು ಸಮಾಜಕ್ಕೆ ವಿಭಿನ್ನವಾದ ಮೆಸೇಜ್ ನೀಡುವಂತ ಚಿತ್ರ ಎಂದು ಹೇಳಿದ್ದರು.
ನಿಜ ಇದು ವಿಭಿನ್ನ ಮೆಸೇಜ್ ಹೇಳುವಂತ ಚಿತ್ರ. ಮಗ ತಂದೆಯನ್ನು ಕೊಂದು ಚಿತೆಗೆ ಬೆಂಕಿ ಇಟ್ಟು ತಾಯಿಗೆ ಕೊಟ್ಟ ಮಾತು ನಡೆಸಿ, ಪರಿ ಪೂರ್ಣ ಮಗ ಎನಿಸಿಕೊಳ್ಳುವಂತಹ ಚಿತ್ರ.
ಇದು ಅಂಡರ್ ವಲ್ಡ್ ನಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೊರಾಡುವ ಕೆಲವು ಪುಡಿ ರೌಡಿಗಳು ಹಾಗೂ ಒಂದಷ್ಟು ಡಾನ್ ಗಳಾಗಲು ಬಯಸುವವರ ನಡುವೆ ನಡೆಯುವ ರಕ್ತಪಾತಗಳ ಮದ್ಯದಲ್ಲಿ ಅರಳುವ ಪ್ರೇಮ ಕಥೆ.
ಚಿತ್ರದ ನಾಯಕ ಗುಣ ( ಧನವೀರ್) ಒಳ್ಳೆ ಗುಣ ವಿಲ್ಲದ ನಾಯಕನಾಗಿ ತೆರೆಯ ಮೇಲೆ ಅದು ರಕ್ತವನ್ನು ಇತಿ ಮಿತಿ ಇಲ್ಲದೇ ಹರಿಸುವಲ್ಲಿ ರಾರಾಜಿಸಿದ್ದಾರೆ.
ಮುದ್ದು ಮುದ್ದು ರಾಕ್ಷಸ, ರಾಕ್ಷಸಿಯರನ್ನು ಬಡಿದು ಬಾಯಿಗಾಕಿ ಕೊಳ್ಳುವಂತ ರಣಹದ್ದುಗಳಾಗಿ ವಿಲನ್ ಗಳು ಅಬ್ಬರಿಸಿದ್ದಾರೆ.
ನಟ ಧನವೀರ್ ಇಡೀ ಚಿತ್ರದಲ್ಲಿ, ಪ್ರತೀಯೊಂದು ದೃಶ್ಯದಲ್ಲೂ ತಮ್ಮ ಅಭಿನಯದ ಮುಖ ಚರ್ಯೆಯನ್ನು ಒಂದೇ ರೀತಿಯಲ್ಲಿ ಕೊನೆಯವರೆಗೂ ಕಾಪಾಡಿಕೊಂಡಿದ್ದಾರೆ. ಅದಕ್ಕಾಗಿ ಬಹಳಷ್ಟು ಎಫರ್ಟ್ ಹಾಕಿರುವುದು ಚಿತ್ರದ ಮತ್ತೊಂದು ವಿಶೇಷ.
ಚಿತ್ರದಲ್ಲಿ ಎರಡು ಹಾಡುಗಳು ಚನ್ನಾಗಿವೆ ಹಿನ್ನೆಲೆ ಸಂಗೀತವನ್ನು ಸಂಗೀತ ನಿರ್ದೇಶಕ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಹಾಗೆಯೇ ಛಾಯಾಗ್ರಾಹಕ ರವರೂ ಕೂಡ ಚಿತ್ರದ ಪ್ರತಿಯೊಂದು ಫ್ರೇಮ್ ಚನ್ನಾಗಿ ಮೂಡಿ ಬರಲು ಸಾಕಷ್ಟು ಶ್ರಮಿಸಿರುವುದು ತೆರೆಯ ಮೇಲೆ ಕಾಣುತ್ತದೆ.
ನಿರ್ದೇಶಕ ಶಂಕರ್ ರಾಮನ್ ಅಂಡರ್ ವರ್ಲ್ಡ್ ನ ಹಲವಾರು ಸಿನಿಮಾಗಳು ಬಂದಿದ್ದರು ಇದು ವಿಭಿನ್ನ ಎನ್ನುವುದನ್ನು ಸಾಬೀತು ಪಡಿಸಲು ಬಹಳಷ್ಟು ಶ್ರಮಿಸಿದ್ದಾರೆ. ಹಿರಿಯ ನಟಿ ತಾರಾ ರವರು ಈ ವರೆಗೆ ಮಾಡಿರದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ವಾಮನ ಚಿತ್ರ ಇಷ್ಟೊಂದು ಅದ್ದೂರಿಯಾಗಿ ಮೂಡಿ ಬರಲು ಮುಖ್ಯ ಕಾರಣ ನಿರ್ಮಾಪರು.
ಚಿತ್ರದ ಪ್ರತೀಯೊಂದು ದೃಶ್ಯಗಳನ್ನು ಕಟ್ಟಿ ಕೊಡಲು ನಿರ್ಮಾಪಕರ ಶ್ರಮ, ಹಣ, ಸಿನಿಮಾ ಮೇಲಿನ ಫ್ಯಾಷನ್ ಎದ್ದು ಕಾಣುತ್ತದೆ. ಇಂತಹ ನಿರ್ಮಾಪಕರಿಗೆ ಒಳ್ಳೆಯದಾಗಬೇಕು ಏಕೆಂದರೆ ಸಿನಿಮಾ ಗೆದ್ದರೆ ಇಂತಹ ಮತ್ತಷ್ಟು ನಿರ್ಮಾಪಕರು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಾರಣರಾಗುತ್ತಾರೆ.