Uttarakhand Kannada movie acted Chitra Achar. ಉತ್ತರಕಾಂಡ”ದಲ್ಲಿ ನಟಿ ಚೈತ್ರ ಆಚಾರ್
“ಉತ್ತರಕಾಂಡ”ದಲ್ಲಿ ನಟಿ ಚೈತ್ರ ಆಚಾರ್
ಚೈತ್ರ ಆಚಾರ್”ಉತ್ತರಕಾಂಡ” ತಾರಾಬಳಗಕ್ಕೆ ಸೇರ್ಪಡೆ ಆಗಿದ್ದು, ಇಂದು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. “ಲಚ್ಚಿ” ಎಂಬ ಒಂದು ಮುಖ್ಯ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ ನಟಿ ಚೈತ್ರ ಆಚಾರ್.

“ಉತ್ತರಕಾಂಡ” ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದರಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಲಿದ್ದಾರೆ ಹಾಗೂ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.