ಕಬ್ಜ ಶೂಟಿಂಗ್ ವೇಳೆ ನಟ ಉಪೇಂದ್ರ ಅವರಿಗೆ ಪೆಟ್ಟು
ಆಕ್ಷನ್ ಸೀನ್ ಒಂದರ ಚಿತ್ರೀಕರಣದ ವೇಳೆ ಸ್ಯಾಂಡಲ್ವುಡ್ ನಟ ಉಪೇಂದ್ರ ಅವರಿಗೆ ಅಲ್ಪ ಪ್ರಮಾಣದ ಏಟು ಆಗಿರುವ ಘಟನೆ ತಡವಾಗಿ ಬೆಳೆಕಿಗೆ ಬಂದಿದೆ. ಶುಕ್ರವಾರ ರಾತ್ರಿ ಮಿನರ್ವ ಮಿಲ್ಸ್ ನಲ್ಲಿ ಕಬ್ಜ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಮಾಸ್ಟರ್ ರವಿವರ್ಮ ಸಾಹಸ ನಿರ್ದೇಶನದಲ್ಲಿ ಫೈಟಿಂಗ್ ದೃಶ್ಯದ ಚಿತ್ರೀಕರಣದ ವೇಳೆ ಅಚಾನಕ್ ಅವಗಡದಿಂದ ಈ ಘಟನೆ ಆಗಿದೆ ಎನ್ನಲಾಗಿದೆ. ಉಪೇಂದ್ರ ಅವರು ಎದುರಾಳಿಗಳೊಂದಿಗೆ ಹೊಡೆದಾಡುವ ಆಕ್ಷನ್ ಸೀನ್ ಶೂಟಿಂಗ್ ನಡೆಯುತ್ತಿತ್ತು. ಇದೇ ವೇಳೆ ವಿಲನ್ ತಂಡದ ಒಬ್ಬ ಬೀಸಿದ ರಾಡ್ ಯಿಂದ ತಪ್ಪಿಸಿಕೊಳ್ಳುವಾಗ ಅಚಾನಕ್ಕಾಗಿ ಉಪ್ಪಿ ಅವರ ತಲೆಗೆ ತಾಗಿದೆ. ಇದರಿಂದ ಸ್ವಲ್ಪ ಸಮಯ ಉಪೇಂದ್ರ ಅವರು ವಿಚಲಿತಗೊಂಡರೂ ಅವರ ತಲೆಗೆ ಯಾವುದೇ ಅಪಾಯ ಉಂಟಾಗಲಿಲ್ಲ.
ಗಾಯಗೊಂಡರು ಚಿತ್ರೀಕರಣದಲ್ಲಿ ಪಾಲ್ಗೊಂಡ ಉಪ್ಪಿ
ಸ್ವಲ್ಪ ಸಮಯ ಸುಧಾರಿಸಿಕೊಂಡ ನಟ ಉಪೇಂದ್ರ ಚಿತ್ರೀಕರಣ ನಿಲ್ಲ ಬಾರದೆಂದು ಮತ್ತೆ ಎಂದಿನಂತೆ ಆಕ್ಷನ್ ದೃಶಗಳ ಚಿತ್ರೀಕರಣದಲ್ಲಿ ನಿರತರಾದರು. ಉಪೇಂದ್ರ ಅವರ ವಿಲ್ ಪವರ್ ನೋಡಿ ಮೆಚ್ಚಿದ ನಿರ್ದೇಶಕ ಚಂದ್ರು.
ಅದ್ದೂರಿ ಸೆಟ್ ಗಳ ನಡುವೆ ಚಿತ್ರೀಕರಣ
ಚಂದ್ರು ಅವರು ನಿರ್ಮಿಸಿ ನಿರ್ದೇಶಿಸುತ್ತಿರುವ ಕಬ್ಜ ಚಿತ್ರ ನಾಲ್ಕೈದು ಭಾಷೆಗಳಲ್ಲಿ ಪಾನ್ ಇಂಡಿಯಾ ರಿಲೀಸ್ ಗೆ ಸಜ್ಜಾಗುತ್ತಿರುವ ಅದ್ದೂರಿ ಚಿತ್ರವು ಹೌದು. ಯಾವುದೇ ಕಾಂಪ್ರಮೈಸ್ ಇಲ್ಲದೆ ಸಬ್ಜೆಕ್ಟ್ ತಕ್ಕಂತೆ ಚಂದ್ರು ಅದ್ದೂರಿ ಸೆಟ್ ಬಳಸಿ ಚಿತ್ರದ ಚಿತ್ರೀಕರಣ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಿನರ್ವ ಮಿಲ್ಸ್ ಅಲ್ಲಿ ಆಯಿಲ್ ಮಾರ್ಕೆಟ್ ಸೆಟ್ ಅಳವಡಿಸಿರುವುದು. ಬಹು ಕೋಟಿ ವೆಚ್ಚದಲ್ಲಿ ನಿಮರ್ಮಾಣವಾಗುತ್ತಿರುವ ಕಬ್ಜ ಕೆಲವೇ ದಿನಗಳಲ್ಲಿ ಪ್ಯಾನ್ ಇಂಡಿಯಾ ರೆಲೀಸ್ ಆಗಲಿದೆ.