Transformer Rise of the bestas ಟ್ರಾನ್ಸ್‌ಪಾರ್ಮರ್: ರೈಸ್ ಆಫ್ ದಿ ಬೀಸ್ಟಸ್’

ಟ್ರಾನ್ಸ್‌ಫಾರ್ಮರ್ ನಿರ್ದೇಶಕನ ಅನುಭವಗಳು
ಕಳೆದ ವರ್ಷ ಇಂಗ್ಲೀಷ್ ಭಾಷೆಯಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ’ಟ್ಯಾನ್ಸ್‌ಫಾರ್ಮರ್’ ಫ್ರಾಂಚೈಸಿ ಚಿತ್ರದ ನಿರ್ದೇಶಕ ಸ್ಟೀವನ್ ಕ್ಯಾಪ್ಲ್ ಜ್ಯೂನಿಯರ್ ಸಿನಿಮಾವನ್ನು ಮಾಡಲು ಹೇಗೆ ಪ್ರಭಾವ ಬೀರಿತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
ಬಾಲ್ಯದಲ್ಲಿ ಮೂಲ ’ಬೀಸ್ಟ್ ವಾರ್ಸ್’ ಟ್ರಾನ್ಸ್‌ಫಾರ್ಮಸ್ ಅನಿಮೇಟಡ್ ಸರಣಿಯನ್ನು ತುಂಬಾ ಇಷ್ಟಪಡುತ್ತಿದ್ದೆ. ಎಂಟು ವರ್ಷ ವಯಸ್ಸಿನಲ್ಲಿದ್ದಾಗ ಈ ಕಾರ್ಯಕ್ರಮವು ಪ್ರಸಾರಗೊಂಡಿತ್ತು. ಪ್ರತಿ ಸಂಚಿಕೆ ವೀಕ್ಷಿಸಿದ ನಂತರ ಶಾಲೆಯ ಸ್ನೇಹಿತರನ್ನು ಭೇಟಿಯಾಗುತ್ತಿದ್ದೆ. ಆ ಸಮಯದಲ್ಲಿ ಕಾರ್ಟೂನ್‌ಗಿಂತ ಇದು ಎಷ್ಟು ಭಿನ್ನವಾಗಿರುತ್ತಿತ್ತು ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದೇವು. ಏಕೆಂದರೆ ಹೊಸರೂಪದ ಅನಿಮೇಶನ್ ಇದ್ದು, ಅಪ್ಟಿಮಸ್ ಪ್ರೈಮ್ ಅದರಲ್ಲಿ ಇರಲಿಲ್ಲ. ಬಹಳಷ್ಟು ತಿರುವುಗಳು ಇರುವುದರಿಂದ ಕಥಾಹಂದರವು ಚೆನ್ನಾಗಿ ಮೂಡಿಬಂದಿತ್ತು.
ಇದೆಲ್ಲಾವನ್ನು ತಿಳಿದುಕೊಂಡಿದ್ದರಿಂದ ಈಗ ’ಟ್ರಾನ್ಸ್‌ಪಾರ್ಮರ್: ರೈಸ್ ಆಫ್ ದಿ ಬೀಸ್ಟಸ್’ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಇದು ಪ್ರಪಂಚದಾದ್ಯಂತ ಪ್ರೇಕ್ಷಕರನ್ನು ಸೆರೆಹಿಡಿಯುವ ಹಾಗೂ ಚಮತ್ಕಾರ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲದೆ 9೦ರ ದಶಕದ ಆಟೋಬಾಟ್ಸ್‌ದೊಂದಿಗೆ ’ಮಾಕ್ಸಿಮಲ್ಸ್’ ಸೇರಿಕೊಂಡು ಸಾಹಸದಲ್ಲಿ ನೋಡುಗರನ್ನು ಸಂಪೂರ್ಣ ಹೊಸ ಬಣವನ್ನು ಪರಿಚಯಿಸುತ್ತದೆ ಎನ್ನುತ್ತಾರೆ. ಆಂಟೋನಿ ರಾಮೋಸ್ ಮತ್ತು ಡೊನಿಮಿಕ್ ಫಿಶ್‌ಬ್ಯಾಕ್ ನಟಿಸಿದ್ದಾರೆ.
ಅಂದಹಾಗೆ ಸಿನಿಮಾವು ಜೂನ್ 9ರಂದು ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ 2D, 3D, 4D ಮತ್ತು IMAX ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor