Today Cheetah movie shooting start. ಚೀತಾ ಚಿತ್ರದಲ್ಲಿ ಪ್ರಚಾರಕರ್ತ ನಾಗಿ ಸುಧೀಂದ್ರ ವೆಂಕಟೇಶ್ ವಿಭಿನ್ನ ಗೆಟಪ್ ನಲ್ಲಿ
ಇಂದಿನಿದ ಚೀತಾ ಚಿತ್ರೀಕರಣ ಶುರುವಾಗಲಿದೆ. ಇಂದು ಬೆಳಿಗ್ಗೆ 8 ಘಂಟೆಗೆ ಹೆಚ್.ಎಮ್.ಟಿ. ಲೇಔಟ್ ನಲ್ಲಿ ಚಿತ್ರಕ್ಕೆ ಮುಹೂರ್ತ ನೆರೆವೇರಲಿದ್ದು ಚಿತ್ರಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ಚಿತ್ರ ತಂಡ ಮೊದಲನೇ ಬಾರಿಗೆ ಚಿತ್ರದಲ್ಲಿ ಕೆಲಸ ಮಾಡುವ ಎಲ್ಲಾ ತಂತ್ರಜ್ಞಾನದವರನ್ನು ಫೋಟೋ ಸೆಷನ್ಸ್ ಮಾಡಿ ಎಲ್ಲರನ್ನು ಒಂದು ಹೊಸ ಗೆಟಪ್ ನಲ್ಲಿ ತೋರಿಸಿ ಎಲ್ಲರಿಗೂ ಪ್ರಾಮುಖ್ಯತೆ ನೀಡಿದ್ದಾರೆ.
ಅದರಲ್ಲಿ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ರವರನ್ನು ಹಿಂದಿನ ಕಾಲದಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದ ಶೈಲಿಯಲ್ಲಿ ಫೋಟೋ ಶೂಟ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ರಾಜಾ ಕಲೈ ಕುಮಾರ್ ನಿರ್ದೇಶನದಲ್ಲಿ ಹಾಗೂ ಪ್ರತಿಭಾ ನರೇಶ್ ನಿರ್ಮಾಣದಲ್ಲಿ ಚಿತ್ರ ನಿರ್ಮಾಣವಾಗಲಿದೆ. ಚಿತ್ರತಂಡಕ್ಕೆ ಹಾಗೂ ಇಂದಿನ ಶುಭ ಮುಂಜಾನೆಯ ಮುಹೂರ್ತ ಸಮಾರಂಭಕ್ಕೆ ನಮ್ಮಿಂದ ಶುಭಕಾಮನೆಗಳು, ಚಿತ್ರತಂಡಕ್ಕೆ ಶುಭವಾಗಲು ಎಂದು ಹಾರೈಸುತ್ತೇವೆ.