ಪ್ರತಿ ಮನೆಯಲ್ಲಿ ಡಿಟೆಕ್ಟಿವ್ ಹೆಂಡತಿ ಇರ‍್ತಾರೆ – ಉಪೇಂದ್ರ

ಆಕ್ಷನ್ ಕ್ವೀನ್ ಡಾ.ಪ್ರಿಯಾಂಕಉಪೇಂದ್ರ ಅಭಿನಯದ ’ಡಿಟೆಕ್ಟಿವ್ ತೀಕ್ಷ್ಣ’ 50ನೇ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಲಹರಿವೇಲು ಮಾತನಾಡಿ, ಗತಕಾಲದ ನೆನಪುಗಳನ್ನು ಮೆಲುಕು ಹಾಕುತ್ತಾ ಉಪೇಂದ್ರರಂತೆ ಕಷ್ಟಪಟ್ಟ ದಿನಗಳನ್ನು ಹೇಳಿಕೊಂಡು ತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕರುಗಳಾದ ಗುತ್ತ ಮುನಿಪ್ರಸನ್ನ, ಮುನಿವೆಂಕಟ್ ಚರಣ್ ಮತ್ತು ಪುರುಷೋತ್ತಮ್.ಬಿ.ಕೊಯೂರು ಸಂತಸ ಹಂಚಿಕೊಂಡರು.

ನಿರ್ದೇಶಕ ತ್ರಿವಿಕ್ರಮರಘು ಹೇಳುವಂತೆ ಪ್ರಿಯಾಂಕ ಮೇಡಂ ನನ್ನ ಪ್ರತಿಭೆಯನ್ನು ಗುರುತಿಸಿ ಅವಕಾಶ ಮಾಡಿಕೊಟ್ಟರು. ಪ್ರಾರಂಭದಿಂದಲೂ ಅವರ ಸಹಕಾರ ಮರೆಯಲಾಗದು. ಕಲಾವಿದರು, ತಂತ್ರಜ್ಘರು ನಾನು ಕಂಡಂತಹ ಕಲ್ಪನೆಗಳಿಗೆ ಜೀವ ತುಂಬುತ್ತಿದ್ದರು. ಇನ್ನೆರಡು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂಬುದಾಗಿ ಮಾಹಿತಿ ನೀಡಿದರು.
ಡಿಟೆಕ್ಞಿವ್ ಪಾತ್ರವು ಎಲ್ಲಾ ಹೆಂಗಸರಲ್ಲಿ ಇರುತ್ತೆ. ಅದರಲ್ಲೂ ನನ್ನ ಮನೆಯಲ್ಲಿ ಹೆಚ್ಚು ಇದೆ. ಪ್ರತಿಯೊಬ್ಬ ಪತಿಗೂ ಡಿಟೆಕ್ಟಿವ್ ಹೆಂಡತಿ ಇರುತ್ತಾರೆ. ಪ್ರತಿ ಹಂತದಲ್ಲಿ ಸರಿಯಾದ ಡಿಟೆಕ್ವಿವ್ ರೋಲ್ ಸೂಪರ್ ಆಗಿ ಬಂದಿದೆ. ಟ್ರೇಲರ್ ನೋಡುತ್ತಿರುವಾಗ ಎದೆಗೆ ಹೊಡೆಯುವಂತ ಮ್ಯೂಸಿಕ್, ಇದರ ಮಧ್ಯೆ ಹೂವೇ ಹೂವೇ ಬರುತ್ತದೆ. ಪ್ರಿಯಾಂಕ 50 ಚಿತ್ರ ಮಾಡಿದ್ದಾರೆ. ನಾನು ಇನ್ನು 46ರಲ್ಲಿ ಇದ್ದೇನೆ. ಈ ಸಿನಿಮಾವು ಹಿಟ್ ಆಗಲಿ. ಹೇಗಂದರೆ ಒಟ್ಟಿಗೆ 100 ಸಿನಿಮಾಗಳಿಗೆ ಒಮ್ಮೆಗೆ ಸಹಿ ಹಾಕುವಂತೆ ಆಗಲಿ. ನಿಮ್ಮೆಲ್ಲರ ಶ್ರಮಕ್ಕೆ ಖಂಡಿತ ಬೆಲೆ ಸಿಗುತ್ತದೆ ಎಂದು ಉಪೇಂದ್ರ ಮಾತಿಗೆ ವಿರಾಮ ಹಾಕಿದರು.

50 ಸಿನಿಮಾದಲ್ಲಿ ನಟಿಸಿದೆನಾ ಅಂತ ನೋಡಿದಾಗ 50 ಸೆಕೆಂಡ್ ಆದಂತೆ ಭಾಸವಾಗುತ್ತದೆ. ಇದಕ್ಕೆ ನಿರ್ದೇಶಕರು, ನಿರ್ಮಾಪಕರು ನನ್ನನ್ನು ಆಯ್ಕೆ ಮಾಡಿರುವುದು ಕಾರಣವಾಗಿರುತ್ತದೆ. ಪ್ರತಿಯೊಂದು ಕೇಳಿಕೊಂಡು ಮಾಡುತ್ತಿದ್ದೆ. ಎಲ್ಲಾ ಕಲಾವಿದರು ತುಂಬಾ ಆಸಕ್ತಿ ವಹಿಸಿ ಕ್ಯಾಮಾರ ಮುಂದೆ ನಿಲ್ಲುತ್ತಿದ್ದರು. ಮಧ್ಯರಾತ್ರಿ 2 ಆದರೂ ನಾವೆಲ್ಲರೂ ಉಲ್ಲಾಸದಿಂದ ಇರುತ್ತಿದ್ದೇವು. ಪಾತ್ರವು ಭೌತಿಕವಾಗಿ ಶಕ್ತಿಶಾಲಿ ಇಲ್ಲದಿದ್ದರೂ, ಮಾನಸಿಕವಾಗಿ ಚುರುಕು ಇರುವ ರೋಲ್ ಆಗಿದೆ. ನಿರ್ದೇಶಕರಿಗೆ ಒಳ್ಳೆ ಭವಿಷ್ಯ ಇದೆ ಎಂಬುದು ಪ್ರಿಯಾಂಕಉಪೇಂದ್ರ ಖುಷಿಯ ನುಡಿಯಾಗಿತ್ತು.

ತನಿಖೆಯಲ್ಲಿ ಸಹಾಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯ್‌ಸೂರ್ಯ, ಸಿದ್ಲಿಂಗುಶ್ರೀಧರ್, ಶಶಿಧರ್, ಛಾಯಾಗ್ರಾಹಕ ಮನುದಾಸಪ್ಪ, ಆರ್ಟ್ ಡೈರಕ್ಟರ್ ನವೀನ್‌ಕುಮಾರ್, ಸಂಕಲನಕಾರ ಶ್ರೀಧರ್ ಅನುಭವಗಳನ್ನು ಹೇಳಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್, ಟಾಲಿವುಡ್ ಪಿಆರ್‌ಓ ಶಿವಕುಮಾರ್ ಮುಂತಾದ ಗಣ್ಯರು ಉಪಸ್ತಿತರಿದ್ದರು. ಸಂಗೀತ ಪಿ.ರೋಹಿತ್ ಅವರದಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳಂ, ಬೆಂಗಾಲಿ, ಓರಿಯಾ ಹೀಗೆ ಏಳು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸಿದ್ದಗೊಳ್ಳುತ್ತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor