The legendary poetry DVG Sir’s “manku thimman kagga” poet now making a movie. ಡಿ.ವಿ.ಜಿ ಅವರ “ಮಂಕುತಿಮ್ಮನ ಕಗ್ಗ” ತೆರೆಯ ಮೇಲೆ ಬರಲಿದೆ.
ತರೆಯ ಮೇಲೆ ಚಿತ್ರವಾಗಿ ಡಿ.ವಿ.ಜಿ ಅವರ “ಮಂಕುತಿಮ್ಮನ ಕಗ್ಗ” .
ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಯಿತು ಚಿತ್ರದ ಮೊದಲ ಹಾಡು .
ಹೆಸರಾಂತ ಸಾಹಿತಿ ಡಾ||ಡಿ.ವಿ.ಗುಂಡಪ್ಪ(ಡಿ.ವಿ.ಜಿ) ಅವರ ಜನಪ್ರಿಯ ಪದ್ಯ ಪುಸ್ತಕ “ಮಂಕುತಿಮ್ಮನ ಕಗ್ಗ”. ಕನ್ನಡದಲ್ಲಿ ಈಗಾಗಲೇ ಕೆಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ರಾಜ ರವಿಶಂಕರ್ (ವಿ.ರವಿ), ಡಿ.ವಿ.ಜಿ ಅವರ “ಮಂಕುತಿಮ್ಮನ ಕಗ್ಗ”ವನ್ನು ಚಿತ್ರದ ಮೂಲಕ ತೆರೆಗೆ ತರುತ್ತಿದ್ದಾರೆ.

ಎನ್ ಎ ಶಿವಕುಮಾರ್ ಅವರು ನಿರ್ಮಿಸಿರುವ ಹಾಗೂ ಮೀನಾ ಶಿವಕುಮಾರ್ ಸಹ ನಿರ್ಮಾಣವಿರುವ ಈ ಚಿತ್ರದ ” ಸ್ವಾಮಿದೇವನೇ” ಹಾಡು ವರಮಹಾಲಕ್ಷ್ಮೀ ಹಬ್ಬದಂದು A2 music ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಹಲವು ವರ್ಷಗಳ ಹಿಂದೆ ಸೋಸಲೆ ಅಯ್ಯ ಶಾಸ್ತ್ರಿಗಳು ಬರೆದಿದ್ದ ಈ ಗೀತೆಯನ್ನು “ಮಂಕುತಿಮ್ಮನ ಕಗ್ಗ” ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಎ.ಟಿ.ರವೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೆನ್ಸಾರ್ ಮಂಡಳಿ ಸಹ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳಾಡಿದೆ. ಮಧುಗಿರಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ಈ ಚಿತ್ರದಲ್ಲಿ ಡಿ.ವಿ.ಜಿ ಅವರ ಬಾಲ್ಯದ ದಿನಗಳ ಬಗ್ಗೆ ತೋರಿಸಲಾಗಿದೆ. ತಿಮ್ಮಣ್ಣ ಮೇಷ್ಟ್ರು ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಬಾಲಕ ಸೋಮಿ(ಡಿ.ವಿ.ಜಿ) ಅವರ ಪಾತ್ರದಲ್ಲಿ ಮಾಸ್ಟರ್ ರಣವೀರ್, ಅಲಮೇಲು ಪಾತ್ರದಲ್ಲಿ ಭವ್ಯಶ್ರೀ ರೈ, ವೆಂಕರಮಣಯ್ಯ ಪಾತ್ರದಲ್ಲಿ ರವಿನಾರಾಯಣ್ ಹಾಗೂ ಅಜ್ಜಿಯ ಪಾತ್ರದಲ್ಲಿ ಲಕ್ಷ್ಮೀ ನಾಡಗೌಡ ಅಭಿನಯಿಸಿದ್ದಾರೆ. ಸಾಯಿಪ್ರಕಾಶ್, ನರಸೇಗೌಡ, ಶ್ರೀನಿವಾಸ್ ಕೆಮ್ತೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಕಥೆ ವಿಸ್ತರಣೆ, ಚಿತ್ರಕಥೆ ಹಾಗೂ ಸಂಭಾಷಣೆ ನಿರ್ದೇಶಕ ರಾಜ ರವಿಶಂಕರ್ ಅವರದು. ಸಿ.ನಾರಾಯಣ್ ಛಾಯಾಗ್ರಹಣ ಹಾಗೂ ಆರ್ ಡಿ ರವಿ ಸಂಕಲನ(ದೊರೈರಾಜ್) ಈ ಚಿತ್ರಕ್ಕಿದೆ.