The Indian actor, director ramesh aravind honored with mantralaya parimala award ಅರವತ್ತರ ಅರವಿಂದರಿಗೆ ಮಹತ್ತರ ಪ್ರಶಸ್ತಿಯ ಮಧುರ ಕ್ಷಣಗಳು
ನಟ ರಮೇಶ್ ಅರವಿಂದ್ ಅವರಿಗೆ “ಮಂತ್ರಾಲಯ ಪರಿಮಳ ಪ್ರಶಸ್ತಿ”
ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವದ ಸುಸಂದರ್ಭದಲ್ಲಿ ಶ್ರೀ ಸುಬುಧೇಂದ್ರತೀರ್ಥರ ಸಾನಿಧ್ಯದಲ್ಲಿ ,

ಸರಳ, ಸಜ್ಜನಿಕೆಯ, ಪ್ರಬುದ್ಧ ನಟ, ಎಲ್ಲರ ಪ್ರೀತಿಯ ನಟ ರಮೇಶ್ ಅರವಿಂದ್ ರವರಿಗೆ ಮಂತ್ರಾಲಯ ಪ್ರಭುಗಳ ಸನ್ನಿಧಿಯಲ್ಲಿ ಸಸ್ಫೆಸ್ ಮೀಡಿಯಾದ ಸಹಯೋಗದೊಂದಿಗೆ “ಮರಳಿ ಸಂಸ್ಕೃತಿಗೆ” ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಅವರಿಗೆ “ಮಂತ್ರಾಲಯ ಪರಿಮಳ ಪ್ರಶಸ್ತಿ”ನೀಡಲಾಯಿತು.

ಈ ಹಿಂದೆ “ಮಂತ್ರಾಲಯ ಪರಿಮಳ ಪ್ರಶಸ್ತಿ” ಯನ್ನು ಡಾ||ರಾಜಕುಮಾರ್, ರಜನಿಕಾಂತ್, ಸುಧಾಮೂರ್ತಿ, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ದರ್ಶನ್ ಅವರಿಗೆ ನೀಡಲಾಗಿತ್ತು. ಈ ಬಾರಿ ರಮೇಶ್ ಅರವಿಂದ್ ಅವರಿಗೆ ನೀಡಲಾಗಿದೆ.

ಸದಾ ಹಸನ್ಮುಖಿಯಾಗಿರುವ ರಮೇಶ್ ಅರವಿಂದ್ ರವರಿಗೆ ಇನ್ನಷ್ಟು ಪ್ರಶಸ್ತಿಗಳನ್ನು ಗುರು ರಾಯರು ಪ್ರಸಾದಿಸಲಿ ಎಂದು ಪ್ರಾರ್ಥಸುತ್ತೇವೆ.