Tarakeshwara movie wached X DCM Ashwath Narayan. ತಾರಕೇಶ್ವರ ಚಿತ್ರ ವೀಕ್ಷಿಸಿದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರಾದ ಅಶ್ವಥ್ ನಾರಾಯಣ್

ತಾರಕೇಶ್ವರ ಚಿತ್ರ ವೀಕ್ಷಿಸಿದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರಾದ ಅಶ್ವಥ್ ನಾರಾಯಣ್. ಅಪರೂಪಕ್ಕೆ ಕನ್ನಡದಲ್ಲಿ ಮೈತಾಲಾಜಿ ಚಿತ್ರ ತಾರಕೇಶ್ವರ ಬಿಡುಗಡೆಯಾಗಿದ್ದು. ಚಿತ್ರವನ್ನು ನೋಡಿ ಚಿತ್ರ ತಂಡವನ್ನು ಶ್ಲಾಘಿಸಿದರು. ಹಾಗೆಯೇ ತಮ್ಮ ಬಿಡುವಿಲ್ಲದ ಸಮಯದಲ್ಲೂ ಸಂಪೂರ್ಣ ಚಿತ್ರವನ್ನು ನೋಡಿ ಚಿತ್ರ ತಂಡಕ್ಕೆ ಸಾಥ್ ನೀಡಿದರು.

ನಟ ಗಣೇಶ್ ರಾವ್ ಕೇಸರಕರ್ ಸಿನಿಮಾ ಜೊತೆಗೆ ರಾಜಕರಣದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಅವರ ನಾಯಕತ್ವದ ತಾರಕೇಶ್ವರ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ, ಅಳಿವು ಉಳಿವಿನ ಬಗ್ಗೆ ಮಾತಾಡಿ ನಮ್ಮ ಸರ್ಕಾರದ ಆಡಳಿತದ ಸಮಯದಲ್ಲಿ ಚಿತ್ರರಂಗಕ್ಕೆ ಹಲವಾರು ಸವಲತ್ತುಗಳನ್ನು ನೀಡಿದ್ದೇವೆ., ಚಿತ್ರರಂಗ ಉಳಿಯಬೇಕು, ಗಾಂಧೀನಗರದಲ್ಲಿ ಹಲವಾರು ಚಿತ್ರಮಂದಿರಗಳು ಮುಚ್ಚಿವೆ, ಇದು ಚಿತ್ರರಂಗದ ಹಿನ್ನೆಡೆಯನ್ನು ಸೂಚಿಸುತ್ತದೆ, ಚೈನಾ ದೇಶದಲ್ಲಿ ಸುಮಾರು ನಲವತ್ತು ಸಾವಿರ (40,000) ಚಿತ್ರ ಮಂದಿರಗಳಿವೆ ನಮ್ಮ ದೇಶದಲ್ಲಿ ಕೇವಲ ಹತ್ತು ಸಾವಿರ ಚಿತ್ರ ಮಂದಿರಗಳಿವೆ. ನಮ್ಮಲ್ಲಿ ಇನ್ನೂ ಚಿತ್ರಮಂದಿರಗಳ ನಿರ್ಮಾಣವಾಗಬೇಕು ಎಂದರು. ಕರ್ನಾಟಕ ರಾಜ್ಯ ಸರ್ಕಾರ ಚಿತ್ರರಂಗದ ಉಳಿವಿಗಾಗಿ ಒತ್ತು ಕೊಡಬೇಕು ಎಂದರು.

ಹಾಗಯೇ ತಾವು ಸಿನಿಮಾದಲ್ಲಿ ನಟಿಸಲು ಬಯಸುತ್ತೀರ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ನಗುತ್ತಾ ರಾಜಕರಣಿಗಳು ಬಣ್ಣ ಹಾಕಬಾರದು ಎಂದರು. ಹಾಗೆಯೇ ನಟ, ನಿರ್ಮಾಪಕ ಗಣೇಶ್ ರಾವ್ ರವರ ಅಭಿನಯವನ್ನು ಮೆಚ್ಚಿಕೊಂಡರು ಮತ್ತು ಚಿತ್ರವನ್ನು ನೋಡಿ ಮೆಚ್ಚಿಕೊಂಡರು.ಈ ಸಮಯದಲ್ಲಿ ನಿರ್ಮಾಪಕ, ನಟ ಗಣೇಶ್ ರಾವ್, ನಿರ್ದೇಶಕ ಪುರುಷೋತ್ತಮ್, ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್. ಆರ್. ಕೆ. ವಿಶ್ವನಾಥ್ , ಹಿರಿಯ ನಿರ್ದೇಶಕ ಚಿಕ್ಕಣ್ಣ ಹಾಗೂ ಬಾಲ ನಟಿ ಋತು ಸ್ಪರ್ಶ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor